ದಿ ೨೪ ಮಂಗಳವಾರ ಸಂಜೆ ೦೫:೦೦ ಗಂಟೆಗೆ ಅವಿನಾಳೇಶ್ವರ ಓಕುಳಿ, ರಾತ್ರಿ ೦೮-೦೦ ಘಂಟೆಗೆ ಉಚ್ಚಾಯ ಜರುಗುವುದು. ದಿನಾಂಕ ೨೫/೦೩/೨೦೧೫ ಬುಧವಾರ ಬೆಳಿಗ್ಗೆ ಬ್ರಾಹ್ಮಿ ಮಹೂರ್ತದಲ್ಲಿ ಶ್ರೀ ಅಂಜನಯ ಸ್ವಾಮಿಗೆ ಪಂಚಾಮೃತ ಅಭಿಷೇಕ, ಬಿಲ್ವಾರ್ಚನೆ ಮತ್ತು ನೂತನವಾಗಿ ಕಟ್ಟಿಸಿದ ಗೋಪರಕ್ಕೆ ಹೋಮ, ಹವನ ಶ್ರೀನಿವಾಸ, ಪಾದಭಟ್ಟ ಜೋಷಿ ಮೋಹನ್ ಗಂಗಾಧರ ಪುರೊಹಿತ ಶ್ರೀ ವೇ.ಮೂ. ಗವಿಸಿದ್ದಯ್ಯ ಹಿರೇಮಠ ಇವರುಗಳ ನೇತೃತ್ವದಲ್ಲಿ ಕೃಷ್ಣ ಶಾಸ್ರ್ತಿಗಳು ಕೋಟೆ ಕೊಪ್ಪಳ ಇವರ ಸಂಗಡಿಗರಿಂದ ಹೋಮ ಹವನ ಜರುಗುವುದು. ನಂತರ ೧೧ ಗಂಟೆಗೆ ನೂತನ ಗೋಪುರಕ್ಕೆ ಕಳಸಾರೋಹಣವನ್ನು ಶ್ರೀ ಷ.ಬ್ರ. ೧೦೮ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಉಜ್ಜಯನಿ ಶಾಖಾಮಠ, ಮೈನಳ್ಳಿ, ಬಿಕನಳ್ಳಿ ಇವರ ಅಮೃತ ಹಸ್ತದಿಂದ ಕಳಸಾರೋಹಣ ಜರುಗಲಿದೆ. ನಂತರ ಸಂಜೆ ೦೫-೦೦ ಘಂಟೆಗೆ ಮಹಾರಥೊತ್ಸವ ಜರುಗುವುದು. ದಿ ೨೬ ಗುರುವಾರ ಬೆಳಿಗ್ಗೆ ೦೧:೦೦ ಗಂಟೆಗೆ ಮುಳ್ಳುಗಿಡ ಮೆರವಣಿಗೆ ಸಂಜೆ ೦೫:೩೦ ಕ್ಕೆ ಮುಳ್ಳು ಪಲ್ಲಕ್ಕಿ ಮತ್ತು ಅಗ್ನಿಕೊಂಡ ನೀರುಹೊಂಡ ಹಾರುವುದು. ಜಾತ್ರೆಯ ಅಂಗವಾಗಿ ದಿ ೨೫ ರ ರಾತ್ರಿ ೧೦ ಘಂಟೆಗೆ ಮರಿಯಮ್ಮದೇವಿ ನಾಟ್ಯ ಸಂಘದಿಂದ ಹೆತ್ತರವರ ಕನಸು ಅಥಾರ್ಥ ಯುಗ ಪುರುಷ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.
ದಿ ೨೬ ರಂದು ಗುರುವಾರ ಸಂಜೆ ೦೬ ಗಂಟೆಯಿಂದ ಸಾಂಸ್ಕೃತಿಕ ಹಾಗೂ ಸಂಗೀತ ಸಂಜೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಸಲಾಗುವುದು. ಕಾರಣ ಸಕಲ ಸದ್ಬಕ್ತರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ತಮ್ಮ ತನು-ಮನ-ಧನಗಳಿಂದ ಸಹಾಯ ಸೇವೆ ಸಲ್ಲಿಸಿ ಶ್ರೀ ಮಾರುತೇಶ್ವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿ.
0 comments:
Post a Comment