PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ : ಭಾರತ ದೇಶ ಸಂಸ್ಕೃತಿ ಆಚಾರ-ವಿಚಾರಗಳನ್ನು ಹೊಂದಿದ ದೇಶದಲ್ಲಿ ಮಹಿಳೆಯರಿಗೆ ಮಹತ್ವದ ಸ್ಥಾನವಿದೆ ಎಂದು ನಗರಸಭೆಯ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.
ಅವರು ನಿರ್ಮಿತಿ ಕೇಂದ್ರದ ಕಾಲೋನಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ ಜ್ಞಾನ ವಿಕಾಸ ಮಹಿಳಾ ತರಬೇತಿ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಕೆಲಸ-ಕಾರ‍್ಯ ನಿರ್ವಹಿಸುತ್ತ ದೇಶಕ್ಕೆ ತನ್ನದೇ ಆದ ಮಹತ್ವದ ಕೊಡುಗೆಯನ್ನು ನೀಡುತ್ತ, ದೇಶದ ಅಭಿವೃದ್ಧಿಗೆ ಸಹಕರಿಸುತ್ತಿರುವುದು ಶ್ಲಾಘನೀಯ, ಕಾರ‍್ಯವನ್ನು ನಿರ್ವಹಿಸುವ ಜೊತೆಗೆ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಸುಂದರ ಬದುಕು ಕಟ್ಟುವ ಕೆಲಸವನ್ನು ಇಂದು ಮಹಿಳೆಯರು ಮಾಡುತ್ತೀರುವುದು ಸಂತಸದ ವಿಷಯ ತರಬೇತಿ ಕಾರ‍್ಯಕ್ರಮವನ್ನು ಇಂದು ಇಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಹಮ್ಮಿಕೊಂಡು  ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ಮಹಿಳೆಯರ ಅಭಿವೃದ್ಧಿಗೆ ಸಂಸ್ಥೆ ವಿವಿಧ ಯೋಜನೆಗಳನ್ನು ಹಮ್ಮಿಕೊಂಡು ಮಹಿಳೆಯರ ಬಾಳಿನಲ್ಲಿ ಬೆಳಕು ಚೆಲ್ಲುವ ಕಾರ‍್ಯವನ್ನು ಸಂಸ್ಥೆಯ ಮುಖ್ಯಸ್ಥರು ಹಾಗೂ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರು ಮಾಡುತ್ತೀರುವುದು ಸಮಾಜಕ್ಕೆ ನೀಡಿದ ಮಹತ್ವದ ಕೊಡುಗೆ ಎಂದು ಹೇಳಬಹುದು, ಇಲ್ಲಿ ತರಬೇತಿಗೆ ಆಗಮಿಸಿರುವ ಎಲ್ಲಾ ಮಹಿಳೆಯರು ಸಹ ಇದರ ಸದುಪಯೋಗ ಪಡೆದುಕೊಂಡು ಸ್ವಾವಲಂಬಿ ಜೀವನದ ಜೊತೆಗೆ ಸುಂದರ ಬದುಕು ಕಟ್ಟಿಕೊಳ್ಳುವಂತೆ ಮನವಿ ಮಾಡಿದರು. 
ಈ ಸಂದರ್ಭದಲ್ಲಿ ಸಂಸ್ಥೆಯ ಕೊಪ್ಪಳ ವಲಯದ ಮೇಲ್ವಿಚಾರಕ ರಾಘವೇಂದ್ರ, ಜ್ಞಾನ ವಿಕಾಸ ಮಹಿಳಾ ಮಾಹಿತಿ ಕಾರ‍್ಯಕ್ರಮ ಮೇಲ್ವಚಾರಕರಾದ ಸುiವತಿ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಮುಮ್ತಾಜ್, ಲಕ್ಷ್ಮಿಬಾಯಿ, ಗಾಯತ್ರಿ ಹೊಸಮನಿ, ರಶೀದಬೇಗಂ,ಖಾದರಬೀ, ನಿರ್ಮಿತಿ ಕೇಂದ್ರ ಸೇವ ಪ್ರತಿನಿಧಿಯಾದ ಗೀತಾಬಾಯಿ ಜಾಧವ ಮತ್ತೀತರರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top