PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ: ಇತ್ತೀಚಿಗೆ ನಗರಕ್ಕೆ ಆಗಮಿಸಿದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಸವರಾಜ ಗುರಿಕಾರ ಇವರಿಗೆ ಜಿಲ್ಲಾ ಎನ್.ಪಿ.ಎಸ್ ನೌಕರರ ಸಂಘದ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು. ನೂತನ ಪಿಂಚಣಿ ಯೋಜನೆ ಸರಕಾರಿ ನೌಕರರಿಗೆ ಮಾರಕವಾಗಿದ್ದು ಇದೊಂದು ಅವೈಜ್ಞಾನಿಕ ಯೋಜನೆಯಾಗಿದೆ ಈ ಯೋಜನೆಯಿಂದ ಸರಕಾರಿ ನೌಕರರು ಗೊಂದಲಕ್ಕೆ ಒಳಗಾಗಿದ್ದು ಅದಕ್ಕಾಗಿ ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಮುಂದುವರೆಸುವಂತೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಒತ್ತಾಯಿಸಬೇಕೆಂದು ಈ ಮೂಲಕ ಅವರಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಎನ್.ಪಿ.ಎಸ್. ನೌಕರರ ಸಂಘದ ಅಧ್ಯಕ್ಷರಾದ ಬಾಳಪ್ಪ ಕಾಳೆ, ಉಪಾಧ್ಯಕ್ಷರಾದ ಹನುಮಪ್ಪ ಕುರಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶರಣೇಗೌಡ ಪೋಲಿಸ ಪಾಟೀಲ್, ಗಂಗಾವತಿ ತಾಲೂಕ ಅಧ್ಯಕ್ಷರಾದ ಅಮರೇಶ ಮೈಲಾಪುರ, ಡಿ.ಜಿ.ಸಂಗಮನವರ, ಮೈಲಾರಪ್ಪ ಬೂದಿಹಾಳ, ಇದ್ದರು ಎಂದು ಜಿಲ್ಲಾ ಎನ್.ಪಿ.ಎಸ್. ನೌಕರರ ಸಂಘ  ತಿಳಿಸಿದೆ. 

Advertisement

0 comments:

Post a Comment

 
Top