PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ೧೮ ರಂದು ಕೊಪ್ಪಳದಲ್ಲಿ ವಿಕಲಚೇತನರ ಸಮುದಾಯ ಭವನದಲ್ಲಿ ಬೆಳಿಗ್ಗೆ ೧೧ ಗಂಟೆಗೆ ರಾಜ್ಯ ಮಟ್ಟದ ಸಭೆಯನ್ನು ಹಮ್ಮಿಕೊಳ್ಳಲಾಯಿತು.  ವೀಕಲಚೇತನ ರಾಜ್ಯ ಒಕ್ಕೂಟದ ಗೌರವಧ್ಯಕ್ಷರಾದ ಐ.ಎಮ್.ಕಚಿವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಹೇಳಿದರು ಆರ್ಥಿಕವಾಗಿ ಸಮಾಜಿಕವಾಗಿ ದೈಹಿಕವಾಗಿ ಮಾನಸಿಕವಾಗಿ ದುರ್ಬಲವಾಗಿ ಹಿಂದುಳಿದ ಎಲ್ಲಾ ರೀತಿಯ ವಿಕಲಚೇತನರನ್ನು ಒಂದೇ ವೇದಿಕೆಗೆ ಕಡೆ ತರುವುದು ಸರ್ಕಾರದ ಸಹಾಯ ಸೌಲಭ್ಯ ಪಡೆದುಕೊಳ್ಳಲು ಒಕ್ಕೂಟ ಬಲವರ್ದನೆಗೆ ಸಕ್ರೀಯವಾಗಿ ತೊಡಗಿಸಿಕೊಳ್ಳುವ ಮೂಲಕ ವೀಕಲಚೇತನರ  ಬಾಳು ಹಸನಗೊಳಿಸಬೇಕು ಎಂದು ಹೇಳಿದರು ಗದಗ ವಿಕಲಚೇತನರ ಪ್ರತಿನಿಧಿಗಳಾಗಿ ಆಗಮಿಸಿದ ಬಸವರಾಜ ರವರು ವಿಕಲಚೇತನ ಅನೂಕೂಲವಾಗುವ ನೀತಿ ನಿಯಮಗಳು ಉದ್ದೇಶಗಳ  ಒಕ್ಕೂಟ ಬಲವರ್ದನೆಗೆ ತೆಗೆದುಕೊಳ್ಳುವ ತಿರ್ಮಾನ ಬಗ್ಗೆ. ಮಾಹಿತಿ ತಿಳಿಸಿದರು ಮತ್ತು ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟ ಬಲವರ್ದನೆ ವಿಕಲಚೆತನರಿಗೆ ಉದ್ಯೋಗ ಒದಗಿಸಿಕೊಡುವುದರ  ಬಗ್ಗೆ ೩%  ಅನುದಾನದ ಬಗ್ಗೆ ಜಿಲ್ಲಾವಾರು ಸಂಘಟನೆ ಅಭಿವೃದ್ದಿ ಬಗ್ಗೆ ಅಂಗವಿಕಲರಿಗೆ ಸರ್ಕಾರಿ ಸೌಲಭ್ಯಗಳ ಪಡೆದುಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ತಿರ್ಮಾನ ತೆಗೆದುಕೊಳ್ಳಲಾಯಿತು. 
ಈ ರಾಜ್ಯ ಮಟ್ಟದ ವಿಕಲಚೇತನರ ಒಕ್ಕೂಟ ಸಭೆಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ವಿಕಲಚೇತನರ ತಮ್ಮ  ಅನಿಸಿಕೆ ಅಭಿಪ್ರಾಯ ಸಲಹೆ ಸೂಚನೆಗಳನ್ನು ನೀಡಿದರು. 
ವಿರೂಪಾಕ್ಷ ತಳಕಲ್, ಮಲ್ಲಿಕಾರ್ಜುನ ಪೂಜಾರ, ಶಿದ್ದಲಿಂಗಯ್ಯ ಗೊರ್ಲೆಕೊಪ್ಪ, ಶಿವಯೋಗಪ್ಪ ಬಳ್ಳೊಳ್ಳಿ, ವಿರೇಶ ಚತ್ರದುರ್ಗ, ಗಣೇಶ ಹಾವೇರಿ, ಹುಲಗಪ್ಪ ಕಾಗೇರಾ, ಮಹಮ್ಮದ ಅನಿಫ್, ಶಶಿಧರ ಗದಗ ಉಪಸ್ಥಿತರಿದ್ದರು. 
ವೀರಯ್ಯ ಹಿರೇಮಠ ಪ್ರಾರ್ಥಿಸಿದರು. ವಿರೇಶ ಹಾಲಗುಂಡಿ ಸ್ವಾಗತಿಸಿ ವಂಧಿಸಿದರು.  

Advertisement

0 comments:

Post a Comment

 
Top