PLEASE LOGIN TO KANNADANET.COM FOR REGULAR NEWS-UPDATES

ಹೊಸಪೇಟೆ: ಸರ್ವ ಶಿಕ್ಷಣ ಅಭಿಯಾನದ ಶಿಕ್ಷಕರನ್ನು ಸಾಮಾನ್ಯ ಶಿಕ್ಷಕರಂತೆ ಪರಿಗಣಿಸಿ ವೇತನ ನೀಡಬೇಕೆಂದು ಆಗ್ರಹಿಸಿ ಗುರುವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪ್ರತಿಭಟನೆ ನಡೆಸಿ ಆಗ್ರಹಿಸಿತು. 
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಕೆ. ಮಾತನಾಡಿ, ಸರ್ವ ಶಿಕ್ಷಣ ಅಭಿಯಾನದ ಅಡಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಮತ್ತು ಸಿಬ್ಬಂಧಿ ವರ್ಗಕ್ಕೆ ಪ್ರತಿ ತಿಂಗಳು ವೇತನ ವಿಳಂಬವಾಗುತ್ತಿದ್ದು, ಶಿಕ್ಷಕರ ಜೀವನ ನಿರ್ವಹಣೆ ಕಷ್ಟಕರವಗುತ್ತಿದ್ದು, ಪ್ರತಿ ತಿಂಗಳು ೫ನೇ ತಾರೀಖಿನ ಒಳಗೆ ವೇತನ ಜಮಾ ಆಗುವಂತೆ ಕ್ರಮ ವಹಿಬೇಕೆಂದು ಆಗ್ರಹಿಸಿದರು. ಸರ್ವ ಶಿಕ್ಷಣ ಅಭಿಯಾನದ ಅಡಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನು ಸಾಮಾನ್ಯ ಶಿಕ್ಷಕರಂತೆ ಪರಿಗಣಿಸಬೇಕು. ಪ್ರಸ್ತುತ ಶಿಕ್ಷಕರ ವರ್ಗಾವಣೆ ನೀತಿ ಜಠಿಲತೆಯಿಂದ ಕೂಡಿದ್ದು, ಶಿಕ್ಷಕರಿಗೆ ಸಹಕಾರಿಯಾಗುವಂತೆ ವರ್ಗಾವಣೆ ನೀತಿ ಸಡಿಲಗೊಳಿಸಬೇಕಾಗಿ ವಿನಂತಿ. ೨೦೦೨ ರಿಂದ ಈಚೆಗೆ ನೇಮಕಾತಿ ಹೊಂದಿದ ಶಿಕ್ಷಕರಿಗೆ ವರ್ಗಾವಣೆ ನಿತಿಯಲ್ಲಿ ತಾಲೂಕನ್ನು ಘಟಕವಾಗಿ ಪರಿಗಣಿಸುತ್ತಿದ್ದು, ಈ  ಮುಂಚೆ ನೇಮಕಾತಿ ಹೊಂದಿದ ಶಿಕ್ಷಕರಿಗೆ ಜಿಲ್ಲೆಯನ್ನು ಘಟಕವನ್ನಾಗಿ ಪರಿಗಣಿಸುತ್ತಿದ್ದು, ಈ ತಾರತಮ್ಯ ಮಾಡದೆ ಎಲಾ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಜಿಲ್ಲೆಯನ್ನೇ ಘಟಕವನ್ನಾಗಿ ಪರಿಗಣಿಸಬೇಕು. ದಂಪತಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಿಯಮಗಳನ್ನು ಸಡಿಲಗೊಳಿಸಬೇಕು. ಹಾಗೂ ಮಿತಿಯನ್ನು ಹೆಚ್ಚಿಸಬೇಕು. ಪರಸ್ಪರ ವರ್ಗಾವಣೆಗೆ ಯಾವುದೇ ನಿಬಂಧನೆಗಳನ್ನು ಹೇರದೆ ವಿಷಯ ಮಾತ್ರ ಪರಿಗಣಿಸಿ ಪರಸ್ಪರ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು. ಘಟಕದ ಹೊರಗಿನ ವರ್ಗಾವಣೆಗೆ ಪ್ರಸ್ತುತವಾಗಿ ಒಂದು ಬಾರಿ ಅವಕಾಶವಿರುವುದನ್ನು ದ್ದುಗೊಳಿಸಿ ಅನಿಯಮಿತಗೊಳಿಸುವುದು.  ಜಿಲ್ಲೆಯ ಒಳಗಿನ ವರ್ಗಾವಣೆಯನ್ನು ಉಪನಿರ್ದೇಶಕರ ಮುಖಾಂತರ ಕೌನ್ಸಿಲಿಂಗ್ ನಡೆಸುವುದು ಮತ್ತಿತರ ಬೇಡಿಕೆಯ ಮನವಿಯನ್ನು ಸಲ್ಲಿಸಲಾಯಿತು. ಗೌರವ ಅಧ್ಯಕ್ಷ ಕೆ. ಮಾರ್ಗದಪ್ಪ ಮಾತನಾಡಿ, ವೇತನ ಸಕಾಲಕ್ಕೆ ಆಗಬೇಕು ಹಾಗೂ ಆಗದೇ ಇದ್ದಲ್ಲಿ ಸಂಘದಿಂದ ಹೋರಾಟ ಮುಂದುವರೆಸಬೇಕಾಗುತ್ತದೆಂದು ಎಂದರು. ಸಂಘದ ಅಧ್ಯಕ್ಷರಾದ ಎ. ಕುಬೇರಾಚಾರ ರವರು ಮಾತನಾಡಿ ನಮ್ಮೆಲ್ಲ ಬೇಡಿಕೆಗಳು ನ್ಯಾಯಯುತವಾಗಿದ್ದು ಸರಕಾರ ನಮ್ಮ ಬೇಡಿಕೆಗಳಿಗೆ ಸ್ಪಂಧಿಸಬೇಕೆಂದು ಮನವಿ ಮಾಡಿದರು. ಮನವಿ ಸ್ವೀಕರಿಸಿ ತಹಶೀಲ್ದಾರರು ಮಾತನಾಡಿ ನಿಮ್ಮ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಕಳುಹಿಸಿಕೊಡಲಾಗುವುದೆಂದು ತಿಳಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶಿವಕುಮಾರ ಸ್ವಾಮಿ, ರೇಣುಕಾ ದೇವಿ, ಖಜಾಂಚಿ ಬಿ.ಕೆ. ಹೇಮರೆಡ್ಡಿ, ಸಹಕಾರ್ಯದರ್ಶಿ ಪ್ರಕಾಶ, ನೀಲಮ್ಮ, ಸಂಘಟನಾ ಕಾರ್ಯದರ್ಶಿ ಎನ್.ಬಿ. ಮಧುಸೂಧನ, ಶಶಿಕಲಾ ಜಿ., ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ. ವೆಂಕಟೇಶ್, ಪದಾಧಿಕಾರಿಗಳಾದ : ಬಿ. ಚಂದ್ರಶೇಖರ್, ಹೆಚ್.ಎಂ. ಗುರುಬಸವರಾಜ್, ಸುಧಾ ದೇವಿ, ಆರ್. ರವೀಂದ್ರನಾಥ್, ಟಿ. ವಿಶ್ವನಾಥ, ಕಡ್ಲಿ ವೀರಭದ್ರೇಶ, ಜಾಕಿರ್ ಹುಸೇನ್, ಲತಾ ಬಿ. ಪತ್ತರ್, ಮುಂತಾದವರು ನೇತೃತ್ವವಹಿಸಿದ್ದರು.

Advertisement

0 comments:

Post a Comment

 
Top