PLEASE LOGIN TO KANNADANET.COM FOR REGULAR NEWS-UPDATES

ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರ ಮೇಲೆ ಆಗಿರುವ   ದೌರ್ಜನ್ಯವನ್ನು ಖಂಡಿಸಿ ಮೌನ ಮೆರವಣಿಗೆ ಮುಖಾಂತರ  ಜಿಲ್ಲಾಧಿಕಾರಿಗಳಿಗೆ ಮನವಿ  
            ಇತೀಚಿನ ದಿನಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ ಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ಮೇಲೆ ಚುನಾಯಿತ ಮಂಡಳಿ ಸದಸ್ಯರಿಂದ ಹಾಗೂ ಮೇಲಾಧಿಕಾರಿಗಳಿಂದ ದೌರ್ಜನ್ಯ ಉಂಟಾಗುತಿದೆ. ಇದರಿಂದಾಗಿ ನೌಕರರಿಗೆ ತುಂಬಾತೊಂದರೆ ಉಂಟಾಗಿರುತ್ತದೆ.  ಇದಕ್ಕೆ ಉದಾಹರಣೆ ಎಂದರೆ ದಿನಾಂಕ:೧೩-೦೩-೨೦೧೫ ರಂದು ಮೈಸೂರು ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಸುರೇಶ ಎಂಬುವವರಿಗೆ ಕಿರುಕುಳ ನೀಡಿದ ಪ್ರಯುಕ್ತ ಆತ್ಮಹತ್ಯೆಗೆ ಪ್ರಯತ್ನಿಸಿ ದೂರು ದಾಖಲಾಗಿರುವ ಪ್ರಸಂಗ ಜರುಗಿರುತ್ತದೆ.  ಹಾಗೂ ಬಾಗಲಕೋಟೆ ಜಿಲ್ಲೆಯ ಕೆರೂರ ಪಟ್ಟಣ ಪಂಚಾಯತ ಕಚೇರಿಯ  ಇಂಜನೀಯರ ಹಾಗೂ ಮುಖ್ಯಾದಿಕಾರಿಗಳ ಮೇಲೆ ದಿ: ೧೪-೦೩-೨೦೧೫ ರಂದು ಹಲ್ಲೆ ಮಾಡಿರುವ ಘಟನೆ ನಡೆದಿರುತ್ತದೆ.  ಇದರಿಂದಾಗಿ ಸ್ಥಳೀಯ ಸಂಸ್ಥೆ ನೌಕರರಿಗೆ ಬಹಳ ತೊಂದರೆ ಉಂಟಾಗಿರುವ ಪ್ರಯುಕ್ತ ರಾಜ್ಯಾಧ್ಯಕ್ಷರಿಗೆ  ದೂರುಗಳನ್ನು ಸಲ್ಲಿಸಿದ ಪ್ರಯುಕ್ತ ಈ ವಿಷಯದ ಕುರಿತು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮೌನಮೆರವಣಿಗೆ ಮುಖಾಂತರ ಮನವಿ ಸಲ್ಲಿಸಲು ರಾಜ್ಯಾಧ್ಯಕ್ಷರು ಸೂಚಿಸಿರುತ್ತಾರೆ.

ಈ ಹಿನ್ನೆಲೆಯಲ್ಲಿ ಇಂದು ದಿ  ೧೯ ರಂದು ಬೆಳೆಗ್ಗೆ ೧೧-೦೦ ಗಂಟೆಗೆ ಸರಿಯಾಗಿ ಕೊಪ್ಪಳ ನಗರಸಭೆ ಕಾರ್ಯಲಯದಿಂದ ಎಲ್ಲಾ ಸಿಬ್ಬಂದಿಗಳು ಕಪ್ಪುಪಟ್ಟಿಯನ್ನು ಧರಿಸಿ ಮೌನ ಮೆರವಣಿಗೆ ಮುಖಾಂತರ ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ  ಮೇಲ್ಕಾಣಿಸಿದ ಎರಡೂ ಘಟನೆಗಳನ್ನು ಖಂಡಿಸಿ ಮನವಿಯನ್ನು ಸಲ್ಲಿಸಲಾಯಿತು.ಈ ಸಂಧರ್ಬದಲ್ಲಿ ಜಿಲ್ಲಾಧ್ಯಕ್ಷರಾದ ಲಾಲಶಾ ಮನಿಯಾರ, ಉಪಾಧ್ಯಕ್ಷರಾದ ಮಂಜುನಾಥ ಬೆಲ್ಲದ, ಕಾರ್ಯದರ್ಶಿಯಾದ ವಸಂತ ಬೆಲ್ಲದ್, ಜಂಟಿ ಕಾರ್ಯದರ್ಶಿಯಾದ ಗವಿಸಿದ್ದಪ್ಪ ಎಂ. ಅಳ್ಳಳ್ಳಿ,  ಬಿ.ಬಾಬು ಕ.ವ್ಯ. ಶಂಕ್ರಪ್ಪ ಬಂಡಿ, ಕಂ.ಅ, ಶ್ರೀಮತಿ ಮಂಗಳಾ ಕುಲಕರ್ಣಿ, ಶ್ರೀಮತಿ ಜಯಶೀಲ ಹೆಚ್. ರಾಜಾಹುಸೇನ ಬನ್ನಿಕೊಪ್ಪ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top