PLEASE LOGIN TO KANNADANET.COM FOR REGULAR NEWS-UPDATES


ಬೆಂಗಳೂರು, ಮಾರ್ಚ್  : ಧರ್ಮ ಎನ್ನುವುದು ಒಂದು ಜೀವನ ಮಾರ್ಗವಾಗಿದೆ, ಧರ್ಮ ಇರುವುದು ನಮಗೆ, ಜನರ ಸಲುವಾಗಿ, ಸಮಾಜ ಸಲುವಾಗಿ ಹೊರತು ಧರ್ಮಕ್ಕಾಗಿ ಜನ, ಸಮಾಜ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಅವರು ಇಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಜಯಂತಿ ಉತ್ಸವ ಸಂದರ್ಭದಲ್ಲಿ ಮಾತನಾಡುತ್ತಿದ್ದರು.
ನೇಕಾರ ಜನರಿಗೆ ಮಾತ್ರ ದೇವರದಾಸಿಮಯನವರು ಪೂಜ್ಯರಲ್ಲ ಅವರು ಆದ್ಯ ವಚನಕಾರರಾಗಿದ್ದರು. ಅವರ ವಚನಗಳ ಮೂಲಕ ಜನರಿಗೆ ಸರಳವಾದ ಭಾಷೆಯಲ್ಲಿ ಅರ್ಥವಾಗುವಂತೆ ಸರಳ ಜೀವನ ನಿರ್ವಹಣೆ ತಿಳಿಸಿ ಹೇಳುತ್ತಿದ್ದರು ಎಂದು ಮುಖ್ಯಮಂತ್ರಿಗಳು ತಮ್ಮ ಭಾವನಾತ್ಮಕ ಭಾಷಣದಲ್ಲಿ ತಿಳಿಸಿದರು.
ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಾರ್ತಾ ಮತ್ತು ಹಜ್ ಸಚಿವ  ಆರ್. ರೋಷನ್ ಬೇಗ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಖಾತೆಯ ಸಚಿವ  ಹೆಚ್. ಆಂಜನೇಯ, ಕನ್ನಡ ಮತ್ತು ಸಂಸ್ಕøತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ಸಚಿವೆ ಶ್ರೀಮತಿ ಉಮಾಶ್ರೀ ಶಾಸಕರಾದ  ಎಂ.ಡಿ. ಲಕ್ಷ್ಮೀನಾರಾಯಣ, ಕೆ.ಸಿ. ಕೊಂಡಯ್ಯ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು. ಜ್ಞಾನಪೀಠ ಪ್ರಶಸ್ತಿ ವಿಜೇತ  ಚಂದ್ರಶೇಖರ ಕಂಬಾರ ಅವರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top