ಜಮ್ಮು ಕಾಶ್ಮೀರದಲ್ಲಿ ಹೊಸದಾಗಿ ಸರ್ಕಾರ ರಚಿತವಾದ ದಿನದಿಂದ ಮುಖ್ಯಮಂತ್ರಿ ಮುಫ್ತಿ ಮಹಮ್ಮದ್ ಸಹೀದ್ ಅವರು ಹಲವಾರು ವಿವಾದಾತ್ಮಕ ಮತ್ತಯ ದೇಶದ್ರೋಹಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ಹಾಗೂ ಕಳೆದ ಎರಡು ದಿನಗಳ ಹಿಂದೆ ಉಗ್ರವಾದಿ, ಪ್ರತ್ಯೇಕವಾದಿ ಮಸರತ್ ಅಲಂ ಬಿಡುಗಡೆ ಮಾಡಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ. ಜಮ್ಮು ಕಾಶ್ಮೀರದ ಸರ್ಕಾರದ ವಿರುದ್ಧ ಶಿಸ್ತುಕ್ರಮ ಜರುಗಿಸಲು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ನಾಳೆ ದಿನಾಂಕ ೧೧.೦೩.೨೦೧೫ ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಎಬಿವಿಪಿ ಕರೆ ನೀಡಿದೆ.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಘಂಟೆಗಳಲ್ಲಿ ಕಾಶ್ಮೀರದ ಚುನಾವಣೆ ಯಶಸ್ವಿಯಾಗಿ ನಡೆದಿರುವುದು ಪಾಕಿಸ್ತಾನ ಮತ್ತು ಹುರಿಯತ್, ಪ್ರತ್ಯೇಕವಾದಿಗಳ ಕಾರಣದಿಂದ ಎಂದು ಹೇಳಿರುವುದನ್ನು ಹಾಗೂ ಪ್ರತ್ಯೇಕವಾದಿ ಹಾಗೂ ಉಗ್ರ ಮಸರತ್ ಅಲಂ ಮೇಲೆ ಯಾವುದೇ ಪ್ರಕರಣವಿಲ್ಲವೆಂದು ಸುಳ್ಳು ಹೇಳಿ ಬಿಡುಗಡೆ ಮಾಡಿರುವ ಘಟನೆ ಇಡೀ ದೇಶಕ್ಕೆ ಅಪಮಾನ ಮಾಡಿದ್ದಾರೆ.
ಅಲ್ಲದೇ ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಲ್ಲ ಇದು ವಿವಾದಿತ ರಾಜ್ಯವೆಂದು PಆP ಶಾಸಕ ಹಾಗೂ ಮುಖ್ಯಮಂತ್ರಿ ಮುಫ್ತಿ ಮಹಮ್ಮದ್ ಸಹೀದ್ ಹೇಳಿಕೆ ನೀಡುತ್ತಿರುವುದು ದೇಶದ ಅಖಂಡತೆಗೆ ಹಾಗೂ ಸುರಕ್ಷತೆಗೆ ಭಾರೀ ಹಿನ್ನಡೆಯಾಗಿದೆ. ಅಲ್ಲದೇ ಪದೇ ಪದೇ ವಿವಾದಾತ್ಮಕವಾಗಿ ನಡೆದುಕೊಳ್ಳುತ್ತಿರುವ ಜಮ್ಮು ಮತ್ತು ಕಾಶ್ಮೀರ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸರ್ಕಾರವು ತಕ್ಷಣವೇ ಕಠಿಣ ಕ್ರಮಕೈಗೊಳ್ಳಬೇಕು. ಯಾವುದೇ ಕಾರಣದಿಂದಲೂ ಕೇಂದ್ರ ಸರ್ಕಾರವೂ ದೇಶದ ಸುರಕ್ಷತೆ ಹಾಗೂ ಅಖಂಡತೆಯ ದೃಷ್ಟಿಯಿಂದ ಜಮ್ಮು ಕಾಶ್ಮೀರದ ಸರ್ಕಾರದ ವಿರುದ್ಧ ಶಿಸ್ತು ಹಾಗೂ ಕಠಿಣ ನಿಲುವನ್ನು ತೆಗೆದುಕೊಳ್ಳಬೇಕು ಹಾಗೂ ಈಗಾಗಲೇ ಬಿಡುಗಡೆ ಮಾಡಿರುವ ಉಗ್ರ ಮಸರಯ್ ಅಲಂನನ್ನು ತಕ್ಷಣ ಬಂಧಿಸುವ ಮೂಲಕ ಜಮ್ಮು ಕಾಶ್ಮೀರ ಸರ್ಕಾರಕ್ಕೆ ದೇಶದ ಭದ್ರತೆ ಮತ್ತು ಅಖಂಡತೆಯ ದೃಷ್ಟಿಯಲ್ಲಿ ರಾಜಿಯಿಲ್ಲ ಎಂದು ದಿಟ್ಟತನವನ್ನು ಪ್ರದರ್ಶಿಸಬೇಕೆಂದು ಎಬಿವಿಪಿ ಆಗ್ರಹಿಸಿದೆ

0 comments:
Post a Comment