ಕೊಪ್ಪಳ, ಮಾ.೨೫ : ಹೈದ್ರಾಬಾದ್ ನ ಜಾಮೀಯಾ ನಿಜಾಮಿಯಾ ಅರೇಬಿಕ್ ಯುನಿವೆರ್ಸಿಟಿ ೨೦೧೪-೧೫ ನೇ ಸಾಲಿನಲ್ಲಿ ಪ್ರಥಮ ಬಾರಿಗೆ ಕನ್ನಡ ಭಾಷೆಯಲ್ಲಿ ಧಾರ್ಮಿಕ ಪರೀಕ್ಷೆಗಳನ್ನು ಬರೆಯಲು ಅನುಮತಿ ನೀಡಿದೆ.
ಇನ್ನು ಮುಂದೆ ಉರ್ದು ಬರೆಯಲು ಓದಲು ಬಾರದ ಮುಸ್ಲಿಂ ಬಾಂಧವರು ಇಮಾಮತ್, ಮುಲ್ಲಾ, ಮೋಜನ್, ಖಿತಾಬತ್, ನಾಇಬೆ, ಖಜಾಅತ್, ಗಸ್ಸಾಲ್ ಗಳಂತಹ ಧಾರ್ಮಿಕ ವಿಷಯಗಳ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ಬರೆದು ಪದವಿ ಪಡೆಯಬಹುದಾಗಿದೆ. ಇಂತಹ ಪದವಿಗಳಿಗೆ ಜಾಮೀಯಾ ನಿಜಾಮಿಯಾ ಅರೆಬಿಕ್ ಯುನಿವೆರ್ಸಿಟಿಯಿಂದ ಮಾನ್ಯತೆ ದೊರೆಯಲಿರುವುದು ಸಂತೋಷದ ವಿಚಾರವಾಗಿದೆ. ಕರ್ನಾಟಕದ ಸಮಸ್ತ ಮುಸ್ಲಿಂ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ೯೯೬೪೪೪೫೧೦೭ ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಮುಸ್ತಫಾ ಕಮಾಲ್ ತಿಳಿಸಿದ್ದಾರೆ.
0 comments:
Post a Comment