PLEASE LOGIN TO KANNADANET.COM FOR REGULAR NEWS-UPDATES

ಹೊಸದಿಲ್ಲಿ, ಮಾ. : ವೆಬ್‌ಸೈಟ್‌ಗಳಲ್ಲಿ ಅವಹೇಳನಕಾರಿ ಪೋಸ್ಟಿಂಗ್‌ ಹಾಕಿದವರನ್ನು ಬಂಧಿಸುವುದಕ್ಕೆ ಪೊಲೀಸರಿಗೆ ಪರಮಾಧಿಕಾರ ನೀಡುವ ಮಾಹಿತಿ ತಂತ್ರಜ್ಞಾನ ಕಾಯ್ದೆ ‘ಸೆಕ್ಷನ್ 66 ಎ’ ಅನ್ನು ಸುಪ್ರೀಂಕೋರ್ಟ್ ಮಂಗಳವಾರ ರದ್ದುಗೊಳಿಸಿ ಮಹತ್ತರ ತೀರ್ಪು ಪ್ರಕಟಿಸಿದೆ.
ಐಟಿ ಕಾಯ್ದೆಯ ‘ಸೆಕ್ಷನ್ 66 ಎ’ ಸೇರಿದಂತೆ ವಿವಿಧ ಸೆಕ್ಸನ್‌ಗಳ ಸಂವಿಧಾನಿಕ ಮೌಲ್ಯವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಮಾಹಿತಿ ತಂತ್ರಜ್ಞಾನ ಕಾಯ್ದೆಯ ‘ಸೆಕ್ಷನ್ 66 ಎ’ಯಿಂದ ಅಂತರ್ಜಾಲ ಬಳಕೆದಾರರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲಿದೆ ಅಂತಾ ಅರ್ಜಿಯಲ್ಲಿ ನಮೂದಿಸಲಾಗಿತ್ತು.
ಇಂದು ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‌‌ನ ನ್ಯಾಯಾಧೀಶರಾದ ಜೆ. ಚೆಲಮೇಶ್ವರ್‌ ಮತ್ತು ರೋಹಿಂಗ್ಟನ್ ನಾರಿಮನ್‌ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠ, ಮಾಹಿತಿ ತಂತ್ರಜ್ಞಾನ ಕಾಯ್ದೆ ‘ಸೆಕ್ಷನ್ 66 ಎ’ ಅನ್ನು ರದ್ದುಪಡಿಸಿದ ಆದೇಶ ಹೊರಡಿಸಿದೆ.

Advertisement

0 comments:

Post a Comment

 
Top