PLEASE LOGIN TO KANNADANET.COM FOR REGULAR NEWS-UPDATES




 - ಸಾಮಾಜಿಕ ನಾಟಕಗಳಲ್ಲಿ ಬರುವ ದ್ವಂದ್ವ ಮತ್ತು ಅಶ್ಲೀಲ ಸಂಭಾಷಣೆಗಳು ಕಡಿಮೆಯಾಗಬೇಕಿದೆ. ಇದರಿಂದ ಗ್ರಾಮೀಣ ಯುವಕರು ಉನ್ಮಾದಗೊಂಡು ಅಡ್ಡ ದಾರಿ ಹಿಡಿಯುವ ಸಾಧ್ಯತೆ ಇರುತ್ತದೆ ಎಂದು ಕುದುರೆಮೋತಿ ಮಂಗಳೂರಿನ ಡಿಇಡಿಕಾಲೇಜಿನ ಬಾಪೂಜಿ ರಂಗಮಂದಿರದಲ್ಲಿ ೨-೨-೨೦೧೫ ರಂದು  ಕರ್ನಾಟಕ ನಾಟಕ ಅಕಾಡಮಿ ಮತ್ತು ವಿಸ್ತಾರ್ ಥಿಯೇಟರ್ ಸಹ ಯೋಗzಲ್ಲಿ ಅಯೀಜಿಸಿದ ವಿಶೇಷ ಘಟಕ/ಗಿರಿಜನ ಯೋಜನೆಯಡಿಯ ೧೫ದಿನಗಳ ರಂಗತರಬೇತಿ ಸಮರೋಪ ಸಮಾರಂಭ ನಾಟಕ ಪ್ರದರ್ಶನದ ಪ್ರಸ್ತಾವಿಕವಾಗಿ   ನಾಟಕ ಅಕಾಡಮಿಯ   ಸದಸ್ಯ ರಾದ ರಂಗವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್ ಮಾತನಾಡುತ್ತಾ ಇಂದಿನ ಯುವಕರ ಉತ್ತಮ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ನಾಟಕ ಕೃತಿಗಳು ರಚನೆಯಾಗಬೇಕಿದೆ ಆಗ ಮಾತ್ರ ಗ್ರಾಮೀಣ ರಂಗಭೂಮಿಯ ಮೌಲ್ಯ ಹೆಚ್ಚುತ್ತದೆ ಎಂದರು.ಉದ್ಘಾಟನೆ ಮಾಡಿದ ಡಿಇಡಿ ಕಾಲೇಜಿನ ಪ್ರಾಚಾರ್ಯರಾದ ಪಿ.ಐ ಗುಡಿಯವರು ಮಾತನಾಡಿ ರಂಗಭೂಮಿಯನ್ನು ಕಟ್ಟುವುದೆಂದರೆ ಊರಿನ ಸಂಸ್ಕೃತಿಯನ್ನು ಕಟ್ಟಿದಂತೆ . ಚಿಕ್ಕವಯಸ್ಸಿನಲ್ಲೇ ಮಕ್ಕಳಿಗೆ ರಂಗತರಬೇತಿ ಕೊಡುವುದರಿಂದ ಅವರ ಸೃಜನಶೀಲತೆ ಹೆಚ್ಚುತ್ತದೆ  ಎಂದರು. ವಿಸ್ತಾರ್ ಸಂಸ್ಥೆಯ ಪಿಎಸ್ ನಾಜರ್ ಮಾತನಾಡಿ ರಂಗ ಪ್ರಜ್ಞೆಯಿಂದ ಕೌಶಲ್ಯಮತ್ತು ಕಾಲ್ಪನಿಕ ಶಕ್ತಿಯನ್ನು ಪಡೆಯಬಹುದು ಎಂದರು ಶಿಬಿರದಮತ್ತು ಕೋರೆಗಾಂವ್‌ನಾಟಕದ  ನಿರ್ದೇಶಕರಾದ ರೇಣುಕ ಮಾತನಾಡಿ ನಾಟಕ ನೋಡುವ ಪ್ರೇಕ್ಷಕರ ಹೃದಯದೊಳಗೆ ಕಥೆ ಕವಿತೆಗಳು ಕುಳಿತಿರುತ್ತೆವೆ. ರಂಗಭೂಮಿಯಿಂದ ಸಮಾಜದೊಳಗೆ ಬೆಕು ಕಾಣುತ್ತವೆ ಎಂದರು.ಸಮಾರಂಭದಲ್ಲಿ ನೀಲಪ್ಪ ಮಾಸ್ತರ್,ಕುಮಾರ್‌ಎಹೆಚ್. ಬಾಲರಾಜ್, ವಿಸ್ತಾರ್ ಥಿಯೇಟರ್ ಸಂಚಾಲಕಿ ಶೀಲಾ ಹಾಲ್ಕುರಿಕೆ ಉಪಸ್ಥಿತರಿಂದ್ದರು.
ಗ್ರಾಮೀಣ ಪ್ರದೇಶದಲ್ಲೂ  ಪ್ರಯೋಗತ್ಮಕ ನಾಟಕಕ್ಕೆ ಪ್ರೇಕ್ಷಕರ ಶಿಲ್ಲೆ;ರೇಣುಕಾ ನಿರ್ದೇಶನದ ಹಾಲ್ಕುರಿಕೆ ಶಿವಶಂಕರ್ ರಚನೆಯ ಕೋರೆಗಾಂವ್ ನಾಟಕವನ್ನು  ವಿಕ್ಷೀಸಲು ಂದ ಮಂಗಳೂರು ಮತ್ತು ಸುತ್ತಮುತ್ತಲಿನ ನೂರಾರು ಜನರು ಜಮಾಯಿಸಿ ಹೊಸದೊಂದು ಲೋಕ ಕಂಡಂತೆ ವಿಸ್ಮಯ ಪಟ್ಟರು, ಸಾಮಾಜಿಕ ನಾಟಕ ನೋಡಿ ಅನುಭವವಿದ್ದ ಪ್ರೇಕ್ಷಕರಿಗೆ ಪ್ರಯೋಗಾತ್ಮಕ ನಾಟಕದೊಳಗಿನ ಪಾತ್ರಗಳ ವೈರುದ್ಯಗಳ, ಸಂಭಾಷಣೆ ಮಟ್ಟುಗಳು, ರಂಗಸಂಗೀತದ ಅಲಾಪಗಳು ,ವಸ್ತ್ರವಿನ್ಯಾಸದ ವೈವಿಧ್ಯತೆಗಳನ್ನು ಬಣ್ಣದ ಬೆಳಕಿನಲ್ಲಿ ಅಭಿನಯವನ್ನು ಮನ ತುಂಬಿಕೊಳ್ಳುತ್ತಾ ಬೆರಗುಗೊಂಡರು.

Advertisement

0 comments:

Post a Comment

 
Top