PLEASE LOGIN TO KANNADANET.COM FOR REGULAR NEWS-UPDATES

ಯಲಬುರ್ಗಾ : ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದುವ ಮೂಲಕ ಮನೋರಂಜನೆ ನೀಡುವ ನಾಟಕ ಕಲೆಗಳ ಉಳಿವಿಗೆ ಕಲಾಭಿಮಾನಿಗಳ ಪ್ರೋತ್ಸಾಹ ನೀಡುವುದು ಅಗತ್ಯ ಎಂದು ಬಿಜೆಪಿ ಯುವ ಮುಖಂಡ ನವೀನಕುಮಾರ ಗುಳಗಣ್ಣನವರ ಹೇಳಿದರು.
          ಪಟ್ಟಣದಲ್ಲಿ ಬುಧವಾರ ರಾತ್ರಿ ಭೀರಲಿಂಗೇಶ್ವರ ಜಾತ್ರಾಮಹೋತ್ಸವ ನಿಮಿತ್ಯ ಯುವ ನಾಟ್ಯ ಸಂಘ ಹಮ್ಮಿಕೊಂಡ ಅಣ್ಣನ ಕಣ್ಣೀರು ಎಂಬ ಸಾಮಾಜಿಕ ನಾಟಕದ ಉದ್ಘಾಟನೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಟಿವಿ ಧಾರವಾಹಿಗಳು, ಅತ್ತೆ ಸೊಸೆಯ ಜಗಳವನ್ನು ಕೇಂದ್ರೀಕರಿಸಿ ಮನಸುಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದರೇ, ನಾಟಕಗಳು ಪೌರಾಣಿಕ,ಸಾಮಾಜಿಕ ಕಥಾ ವಸ್ತುಗಳ ಮೂಲಕ ಜಾತ್ಯಾತೀತ ಮತ್ತು ಕೋಮು ಸಾಮರಸ್ಯ ಹಾಗೂ ಮನಸ್ಸುಗಳನ್ನು ಕಟ್ಟುವ ಕೆಲಸವನ್ನು ನಿರಂತರವಾಗಿ ಮಾಡುತ್ತಿವೆ ಎಂದರು.
           ಶ್ರೀಸಿದ್ದರಾಮೇಶ್ವರ ಶಿವಚಾರ್ಯ ಮಹಾಸ್ವಾಮಿ ಹಿರೇಮಠ ಸಾನಿಧ್ಯವಹಿಸಿದ್ದರು, ಪಪಂ ಅಧ್ಯಕ್ಷೆ ಭಾಗೀರಥಿ ಜೋಗಿನ ಅಧ್ಯಕ್ಷತೆ ವಹಿಸಿದ್ದರು, ಕಾಂಗ್ರೇಸ ಯುವ ಮುಖಂಡ ಬಾಲಚಂದ್ರ ಸಾಲಭಾವಿ,  ಧ್ಯಾಮಯ್ಯ ಗುರುವಿನ, ಯುವ ಮುಖಂಡ ಶಂಕರ ಕಲಬುರ್ಗಿ, ಅಶೋಕ ಎಲಿಗಾರ, ಡಾ.ಶರಣಪ್ಪ ಕೊಪ್ಪಳ, ಸಾರಿಗೆ ಸಿಬ್ಬಂದಿ ರಾಮಣ್ಣ ಗುಡಿಗೇರಿ, ಅಂದಾನಗೌಡ ಉಳ್ಳಾಗಡ್ಡಿ, ರೇವಣೆಪ್ಪ ಹಿರೇಕುರಬರ, ಕಸಾಪ ಗೌರವ ಕಾರ್ಯದರ್ಶಿ ಸ.ಶರಣಪ್ಪ ಪಾಟೀಲ, ಮಲ್ಲು ಮಾಟರಂಗಿ, ಶಿವಣ್ಣ ರಾಜೂರು, ಬಸವರಾಜ ಕುಡಗುಂಟಿ, ಉಪನ್ಯಾಸಕ ಈಶಪ್ಪ ಮಳಗಿ, ವೀರಣ್ಣ ಬಂಡಿಹಾಳ, ಶರಣಬಸಪ್ಪ ದಾನಕೈ, ಇದ್ದರು. ಶಿಕ್ಷಕ ಬಸವರಾಜ ಕೊಂಡಗುರಿ ನಿರೂಪಿಸಿದರು.

Advertisement

0 comments:

Post a Comment

 
Top