PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಫೆ,  : ನಮ್ಮ ಭೋವಿ ಸಮಾಜ ನಿತ್ಯ ಕಠಿಣ ಪರಿಶ್ರಮದಿಂದ ಜೀವನ ಸಾಗಿಸುತ್ತೀದ್ದು ಸಮಾಜದಲ್ಲಿ ಅಭಿವೃದ್ಧಿ ಹೊಂದಬೇಕಾದರೆ ನಾವು ಮೊದಲು ಶೈಕ್ಷಣೀಕವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ಸಾಧ್ಯ ಹೀಗಾಗಿ ಮಕ್ಕಳಿಗೆ ಶಿಕ್ಷಣ ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಅವರು ತಾಲೂಕಿನ ಕಿನ್ನಾಳ ಗ್ರಾಮದಲ್ಲಿ  ಶ್ರೀಶಿವಯೋಗಿ ಶ್ರೀಸಿದ್ಧರಾಮೇಶ್ವರ ಜಯಂತಿ ಹಾಗೂ ನಾಮಫಲಕ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಭೋವಿ ಸಮಾಜದ ಅಭಿವೃದ್ಧಿ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಾಕಷ್ಟು ಕೊಡುಗೆ ನೀಡಿದ್ದಾರೆ, ಶೀಘ್ರ ಭೋವಿ ಅಭಿವೃದ್ಧಿ ನಿಗಮ ಆರಂಭಿಸಲಾಗುವುದು, ಭೋವಿ ಜನಾಂಗದವರಿಗೆ ಶೀಘ್ರ ಕೆಪಿಎಸ್‌ಸಿ ಸದಸ್ಯತ್ವ ನೀಡಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಹೇಳಿದ ಅವರು ಕಿನ್ನಾಳ ಗ್ರಾಮದಲ್ಲಿ ಭೋವಿ ಸಮುದಾಯ ಭವನ ನಿರ್ಮಾಣಕ್ಕೆ ೧೦ ಲಕ್ಷ ರೂ ಅನುದಾನ ಕೊಡಿಸಲಾಗುವುದು, ಹಿರೇಹಳ್ಳ ಯೋಜನೆಯಿಂದ ವಿವಿಧ ಕೆರೆಗಳಿಗೆ ನೀರು ತುಂಬಿಸಲು ನಮ್ಮ ಸಣ್ಣ ನೀರಾವರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಎಂದರು.
ಪ್ರಾಸ್ತವಿಕವಾಗಿ ಜಿಲ್ಲಾ ಭೋವಿ ಸಮಾಜದ ಪ್ರ.ಕಾರ್ಯದರ್ಶಿ ಬಸವರಾಜ್ ಭೋವಿ ವಣಗೇರಿ ಮಾತನಾಡಿ ೧೨ನೇ ಶತಮಾನದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರು ಅಂದಿನ ದಿನದಲ್ಲಿ ತಮ್ಮ ಕಯಕದ ಜೊತೆಗೆ ನಾಡಿನ ಒಳಿತಿಗಾಗಿ ಕೆರೆ-ಕಾಲುವೆಗಳನ್ನು ಹಾಗೂ ರಸ್ತೆ ಬದಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೈಗೊಂಡಿದ್ದು ಅವರ ದೂರದೃಷ್ಠಿ ಇಂದಿಗೂ ಅವಿಸ್ಮರಣೀಯ ಹಾಗೂ ಜನ ಉಪಕಾರಿಯಾಗಿದೆ ಇಂದಿಗೂ ಮಾದರಿ, ಇಂದು ಸಮಾಜ ಶೈಕ್ಷಣೀಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಮನವಿ ಮಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಜಿ.ಪಂ ಮಾಜಿ ಸದಸ್ಯ ಪ್ರಸನ್ನ ಗಡಾದ್ ವಹಿಸಿದ್ದರು. 
ಮುಖ್ಯ ಅತಿಥಿಗಳಾಗಿ   ತಾ.ಪಂ ಸದಸ್ಯ ಅಮರೇಶ ಉಪಲಾಪೂರ,  ಗ್ರಾ.ಪಂ ಅಧ್ಯಕ್ಷ ವೀರಭದ್ರಪ್ಪ ಗಂಜಿ, ಉಪಾಧ್ಯಕ್ಷೆ ಶೋಭಾ ಪ್ರಕಾಶ ಎಲಿಗಾರ, ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಸತ್ಯಪ್ಪ ಭೋವಿ,   ಕಿನ್ನಾಳ ಕಟ್ಟಡ ಕಾರ್ಮಿಕ ಸಂಘದ ಬಸವರಾಜ್ ಚಿಲವಾಡಗಿ,   ಜಿಲ್ಲಾ ಖಜಾಂಚಿ ಬಸವರಾಜ್ ಇರಕಲ್ಲಗಡ, ಕಿನ್ನಾಳ ಸಹಕಾರ ಸಂಘದ ಮಹಾದೇವಸ್ವಾಮಿ ಹಿರೇಮಠ, ವಿಎಸ್.ಎಸ್‌ಎನ್ ಅಧ್ಯಕ್ಷ ವಿರೇಶ ತಾವಗೇರಿ,ತಾಲೂಕಾ ಭೋವಿ ಸಮಾಜದ ಅಧ್ಯಕ್ಷ ಮಾಸ್ತಿ ಕಟ್ಟಿಮನಿ,ಗಂಗಾವತಿ ಭೋವಿ ಸಮಾಜದ ಮುಖಂಡ ಗಾಳೆಪ್ಪ ಭೋವಿ, ಯಲಬುರ್ಗಾ ಎಪಿಎಂಸಿ ಉಪಾಧ್ಯಕ್ಷ ನಾಗಪ್ಪ ಭೋವಿ ಚಿಕ್ಕೋಪ್ಪ, ಅಂದಪ್ಪ ದಳಪತಿ, ಕಿನ್ನಾಳದ ಗುತ್ತಿಗೆದಾರರಾದ ಮಹೇಶ ಎಲಿಗಾರ, ವೀರಣ್ಣ ಬಳಿಗಾರ,ಹನುಮಂತಪ್ಪ ಜೋಗಿ ಪಾಲ್ಗೋಳ್ಳುವರು ಎಂದು ಕಿನ್ನಾಳ ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷ ಸುರೇಶ ಭೋವಿ, ಪ್ರಧಾನ ಕಾರ್ಯದರ್ಶಿ ಯಂಕಪ್ಪ ಭೋವಿ, ಜಂಟಿ ಕಾರ್ಯದರ್ಶಿ ಯಲ್ಲಪ್ಪ ಭೋವಿ, ಯಂಕಪ್ಪ ಹೊಸಳ್ಳಿ ಹಾಗೂ ಸಮಾಜದ ಹಿರಿಯ ಮುಖಂಡರು ಪಾಲ್ಗೋಂಡಿದ್ದರು.

Advertisement

0 comments:

Post a Comment

 
Top