ಉತ್ತರ ಕರ್ನಾಟಕ ಪ್ರದೇಶ ರೈತ ಸಂಘ, ಸಂಜೀವಿನಿ ಆಸ್ಪತ್ರೆ ಜೀಂದಾಲ್ ಪೌಂಡೇಶನ್, ಆರ್ಟ ಆಫ್ ಲೀವಿಂಗ್ ಕೊಪ್ಪಳ, ವಂದೇಮಾತರಂ ಸೇವಾ ಸಂಘ (ರಿ) ಕೊಪ್ಪಳ, ಗೌರಿಶಂಕರ ಗ್ರಾಮೀಣಾಭಿವೃದ್ದಿ ಶಿಕ್ಷಣ ಸೇವಾ ಸಂಘ (ರಿ) ಭಾಗ್ಯನಗರ ವಂದೇಮಾತರಂ ಯುವಕ ಸೇವಾ ಸಂಘ (ರಿ) ಕದ್ರಳ್ಳಿ, ಪ್ರೇರಣಾ ಯುವತಿ ಸಂಘ (ರಿ) ಕೊಪ್ಪಳ ಇವರ ಸಂಯೋಗದಲ್ಲಿ ೧೪/೦೨/೨೦೧೫ರಂದು ಬೆಳ್ಳಿಗ್ಗೆ ೧೦:೩೦ ರಿಂದ ಸಂಜೆ ೪. ಗಂಟೆಯ ವರೆಗೆ ಕೊಪ್ಪಳ ನಗರದ ವಾಲ್ಮಿಕಿ ಕಲ್ಯಾಣ ಮಂಟಪದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರ ಆಯೋಜಿಸಲಾಗಿದೆ.
ಕಾರ್ಯಕ್ರಮದ ಸಾನಿದ್ಯವನ್ನು ಶ್ರೀ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳು, ಶ್ರೀಅಂಕಲಿಮಠದ ಮಹಾಸ್ವಾಮೀಜಿಗಳು ದಿವ್ಯ ಸಾನಿದ್ಯವನ್ನು ವಹಿಸುವರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿಗಳಾದ ಆರ್. ಆರ್ ಜನ್ನು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಡಾ.ಪಿ ರಾಜಾ ಮತ್ತು ರಾಜ್ಯ ಮಟ್ಟದ ರೈತ ಮುಂಖಡರು ಭಾಗವಹಿಸುವರು. ಕಣ್ಣೀನ ತಪಾಸಣಾ ಶಿಬಿರದಲ್ಲಿ ಜೀಂದಾಲಿನ ಸಂಜೀವಿನಿ ಮತ್ತು ಬಳ್ಳಾರಿಯ ಓ.ಪಿ.ಡಿ ಆಸ್ಪತ್ರೆಯ ನೂರಿತ ತಜ್ಞರು ಶಸ್ತ್ರಚಿಕಿತ್ಸೆ ಮಾಡುವರು. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆಯಬೇಕೆಂದು ಉತ್ತರ ಪ್ರದೇಶ ರೈತ ಸಂಘದ ರಾಜ್ಯಾಧ್ಯಕ್ಷರಾದ ಎಸ್.ಆರ್ ಸ್ವಾಮಿ ಮತ್ತು ವಂದೇಮಾತರಂ ಸಂಘದ ಸಂಸ್ಥಾಪನಾಧ್ಯಕ್ಷರಾದ ರಾಕೇಶ ಕಾಂಬ್ಳೇಕರ್ ಹೆಚ್ಚಿನ ಮಾಹಿತಿಗಾಗಿ ೯೮೮೬೮೨೯೦೫೨ ಗೆ ಸಂಪರ್ಕಿಸಬಹುದು.
0 comments:
Post a Comment