ದಿ ೦೪- ರಂದು ಕಳೆದ ೪ ವರ್ಷಗಳಿಂದ ನಗರಸಭೆಯಲ್ಲಿ ದುಡಿಯುತ್ತಿರುವ ೪೨ ಜನ ದಲಿತ ಮಹಿಳಾ ಪೌರ ಕಾರ್ಮಿಕರನ್ನು ವಿನಾಕಾರಣ ಏಕಾಏಕಿ ಬಿಡಿಸಿರುವುದು ಹೇಯಕೃತ್ಯವಾಗಿದೆ ಎಂದು ಸಿಪಿಐಎಂಎಲ್ ರಾಜ್ಯಕಾರ್ಯದರ್ಶಿ ಭಾರದ್ವಾಜ್ ಖಂಡಿಸಿದ್ದಾರೆ.ದಿನಾಂಕ ೦೫-೦೨-೨೦೧೫ ರಂದು ಸ್ಲಮ್ ರಾಮಚಂದ್ರ, ರಾಜ್ಯ ಸಂಚಾಲಕರು, ಸಮಾನತೆ ಯೂನಿಯನ್ ಕರ್ನಾಟಕರವರು ಕಾರ್ಮಿಕರ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಕಾರ್ಮಿಕರ ನ್ಯಾಯಯುತ ಹೋರಾಟಕ್ಕೆ ಬೆಂಬಲಿಸಿದ್ದಾರೆ. ಹಲವಾರು ವರ್ಷಗಳಿಂದ ಮಹಿಳಾ ಪೌರಕಾರ್ಮಿಕರನ್ನು ಬಿಟ್ಟಿ ಚಾಕರಿಯಂತೆ ನಗರವನ್ನು ಸ್ವಚ್ಛಗೊಳಿಸಿದ ಕಾರ್ಮಿಕರನ್ನು ತೆಗೆದುಹಾಕಿರುವುದು ಖಂಡನೀಯವಾಗಿದೆ. ಕಾರಣ ದಿನಾಂಕ ೦೯-೦೨-೨೦೧೫ ರ ಸೋಮವಾರರಂದು ಇಡೀ ರಾಜ್ಯದಲ್ಲಿ ಪೌರ ಕಾರ್ಮಿಕರ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಪೌರಕಾರ್ಮಿಕರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಬೆಂಗಳೂರು ಇದರ ಎಲ್ಲಾ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆಂದು ರಾಮಚಂದ್ರ ತಿಳಿಸಿದ್ದಾರೆ.
ಕಾರ್ಮಿಕರನ್ನು ಉದ್ದೇಶಿಸಿ ಭಾರದ್ವಾಜ್ ಮಾತನಾಡಿ ಗಂಗಾವತಿ ಪ್ರಗತಿಪರ ಸಂಘಟನೆಗಳ ಒಕ್ಕೂಟದೊಂದಿಗೆ ಚರ್ಚಿಸಿ ಗಂಗಾವತಿಯ ಎಲ್ಲಾ ಪ್ರಗತಿಪರ ಸಂಘಟನೆಗಳು, ದಲಿತ ಸಂಘಟನೆಗಳ ಮುಖಂಡರ ಬೆಂಬಲವನ್ನು ಪಡೆಯುವುದಾಗಿ ತಿಳಿಸಿದ್ದಾರೆ.
0 comments:
Post a Comment