ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ ಹಳಿಯಾಳ ಅವರ ವತಿಯಿಂದ ಫೆಬ್ರುವರಿ ತಿಂಗಳಲ್ಲಿ ಪ್ರಾರಂಭವಾಗುವ ಉದ್ಯೋಗ/ಸ್ವಉದ್ಯೋಗ ಆಧಾರಿತ ೩೦ ದಿನಗಳ ಕಂಪ್ಯೂಟರ್ ಟ್ಯಾಲಿ (ಫೈನಾನ್ಸಿಯಲ್ ಅಕೌಂಟಿಂಗ್) ತರಬೇತಿಗಾಗಿ ಆಸಕ್ತ ನಿರುದ್ಯೋಗಿ ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯು ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು, ೧೮ ರಿಂದ ೪೫ ವರ್ಷದೊಳಗಿನ ರಾಜ್ಯದ ಯಾವುದೇ ಭಾಗದ ಆಸಕ್ತ ಯುವಕರು ತರಬೇತಿಯಲ್ಲಿ ಭಾಗವಹಿಸಬಹುದು. ಅರ್ಜಿ ಸಲ್ಲಿಸಲಿಚ್ಚಿಸುವವರು ತಮ್ಮ ಸ್ವವಿವರವುಳ್ಳ ಮಾಹಿತಿಯನ್ನು ಜೊತೆ ಪಡೆಯಲಿಚ್ಚಿಸುವ ತರಬೇತಿ, ವಿದ್ಯಾರ್ಹತೆ, ತರಬೇತಿ ವಿಷಯದಲ್ಲಿ ಪ್ರಾಥಮಿಕ ಜ್ಞಾನ ಮುಂತಾದ ವಿವರಗಳನ್ನೊಳಗೊಂಡ ಮಾಹಿತಿಯನ್ನು ಫೋನ ಮೂಲಕ ವಿವರ ನೀಡಿ ತರಬೇತಿಗೆ ಆಯ್ಕೆಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ: ೦೮೨೮೪-೨೨೦೮೦೭, ೯೪೮೨೧೮೮೭೮೦, ೯೪೮೩೪೮೫೪೮೯ ನ್ನು ಸಂಪರ್ಕಿಸಬಹುದಾಗಿದೆ
0 comments:
Post a Comment