ಕೊಪ್ಪಳ : ಇತ್ತಿಚಿಕೆ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಹಿರೇಸಿಂದೋಗಿ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ಹಿರೇಸಿಂದೋಗಿ, ಗೊಂಡಬಾಳ ಮತ್ತು ಅಳವಂಡಿ ವಲಯಗಳ ಸೇವಾ ಪ್ರತಿನಿಧಿಗಳಿಗೆ ಕುಟುಂಬದ ವಾರ್ಷಿಕ ಹಿಡುವಳಿ ಯೋಜನೆ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಜ್ಯೋತಿ ಬೆಳಗಿಸುವುದರ ಮೂಲಕ ಸೋಮಪ್ಪ ಪೂಜಾರಿ ಯೋಜನಾಧಿಕಾರಿಗಳು ಪ್ರಾದೇಶಿಕ ಕಛೇರಿ ಕೊಪ್ಪಳ. ಚಾಲನೆ ನೀಡಿದರು. ಪ್ರಾಸ್ತಾವಿಕವಾಗಿ ಕೊಪ್ಪಳ ತಾಲೂಕ ಯೋಜನಾಧಿಕಾರಿಗಳಾದ ದರ್ಣಪ್ಪ ಮುಲ್ಯೆ ಕುಟುಂಬದ ಸಮಗ್ರ ಅಭಿವೃದ್ದಿಗೆ ಪಂಚವಾರ್ಷಿಕ ಹಿಡುವಳಿ ಯೋಜನೆ ಅತ್ಯವಶ್ಯಕ ಪ್ರತಿಯೊಂದು ಸಂಘದ ಸದಸ್ಯರು ಹಿಡುವಳಿ ಯೋಜನೆ ಕೈಪಿಡಿಯಲ್ಲಿ ತಮ್ಮದೆ ರೀತಿಯ ಕನಸುಗಳನ್ನು ಮತ್ತು ನಿರಿಕ್ಷೆಗಳನ್ನು ಕ್ರೀಯಾ ಯೋಜನೆ ಮಾಡಿ ನನಸಾಗಿಸಲು ಶ್ರಮವಹಿಸಬೇಕು. ಅಂದಾಗ ಮಾತ್ರ ಕುಟುಂಬದ ಅಭಿವೃದ್ದಿ ಸಾಧ್ಯ. ಈ ಉದ್ದೇಶದಿಂದ ಯೋಜನೆಯ ಸೇವಾ ಪ್ರತಿನಿಧಿಗಳಿಗೆ ಹಿಡುವಳಿ ಯೋಜನೆ ಹಾಕಿಸುವ ಬಗ್ಗೆ. ಪ್ರಾಯೋಗಿಕವಾಗಿ ತರಬೇತಿ ಹಮ್ಮಿಕೊಳ್ಳಲಾಗಿತ್ತು. ಎಂದು ಮಾತನಾಡಿದರು.
ವಿಶೇಷ ಉಪಸ್ಥಿತರಾಗಿ ಆಗಮಿಸಿದ ಹ.ಕರ್ನಾಟಕ ಪ್ರಾದೇಶಿಕ ಕಛೇರಿಯ ಯೋಜನಾಧಿಕಾರಿಗಳಾದ ಸೊಮಪ್ಪ ಪೂಜಾರಿಯವರು ಸಾಲಕ್ಕಾಗಿ ಯೋಜನೆ ಅಲ್ಲಾ ಯೋಜನೆಗಾಗಿ ಸಾಲ ಎಂಬ ಮಾತಿನಂತೆ ಅವರ ಅವರ ಯೋಜನೆಗೆ ಹೊಂದಾಣಿಕೆಗೆ ಅಗತ್ಯತೆಗೆ ಸರಳವಾಗಿ ಕಡಿಮೆ ಖರ್ಚಿನಲ್ಲಿ ಆಗುವ ಯೋಜನೆಗಳಿಗೆ ಮೊದಲು ಆಧ್ಯತೆ ನೀಡಬೇಕು ನಂತರ ಸಮಾಜದ ಮುಖ್ಯ ವಾಹಿನಿಗೆ ಬರುವ ಮೂಲ ಸೌಕರ್ಯ ಅಲ್ಪಾವಧಿ ಕೃಷಿ, ಸ್ವಉದ್ಯೋಗ ಗಕ್ಕೆ ವಾರ್ಷಿಕ ಯೋಜನೆಯಲ್ಲಿ ಮೊದಲು ಆಧ್ಯತೆ ನೀಡಬೇಕು. ಇದರಿಂದ ಕುಟುಂಬದ ಸಮಗ್ರ ಅಭಿವೃದ್ದಿ ಆಗುತ್ತದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕಾರದ ಕ.ಎಸ್ ಅಣ್ಣಪ್ಪ, ವೆಂಕಟೇಶ, ಲಕ್ಷ್ಮಣ, ಮತ್ತು ತರಬೇತಿ ಸಹಾಯಕರಾದ ವಿರೇಶ ಹಾಲಗುಂದಿ ಲಕ್ಷ್ಮೀ ಅಳವಂಡಿ, ಗೀತಾ ಬೇಟಗೇರಿ, ಮಂಜುನಾಳ ಹಟ್ಟಿ ಹಾಗೂ ೩ ವಲಯಗಳ ಸೇವಾ ಪ್ರತಿನಿಧಿಗಳು ಈ ಕಾರ್ಯಗಾರದಲ್ಲಿ ಪಾಲ್ಗೊಂಡು ಕಾರ್ಯಕ್ರಮನ್ನು ಯಶಸ್ವಿಗೊಳಿಸಿದರು.
0 comments:
Post a Comment