PLEASE LOGIN TO KANNADANET.COM FOR REGULAR NEWS-UPDATES

ಎಂಎಸ್‌ಡಿಪಿ ಯೋಜನೆಅಡಿಯಲ್ಲಿ ತರಬೇತಿ ಪ
ಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ:

ಕೊಪ್ಪಳ,ಫೆ,೨೬: ಅಲ್ಪಸಂಖ್ಯಾತ ಸಮುದಾಯದ  ವಿದ್ಯಾವಂತ ಯುವಕ, ಯುವತಿಯರಿಗೆ ಉಚಿತ ಕಂಪ್ಯೂಟರ ಜ್ಞಾನ ನೀಡುವುದರ ಮೂಲಕ ಅವರ ಸಾಮಾಜಿಕ ಜ್ಞಾನ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಇದರ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕೆಂದು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ.ಕಲ್ಲೇಶ್ ಹೇಳಿದರು.
   ಅವರು ನಗರದ ಪ್ರಮುಖ ಜವಾಹರ್ ರಸ್ತೆ ಆಝಾದ್ ಸರ್ಕಲ್ ಬಳಿ ಜಿ,ಎಂ.ಪ್ಲಾಜಾ ಸಂಕೀರ್ಣದಲ್ಲಿರುವ ಎಸ್.ಎಸ್.ಶಿಕ್ಷಣ ಸೊಸೈಟಿ ಸಭಾಂಗಣದಲ್ಲಿ ಎಸಿಸಿಪಿಎಲ್ ತರಬೇತಿ ವಿಭಾಗದ ವತಿಯಿಂದ ೨೦೧೪-೧೫ನೇ ಸಾಲಿನಲ್ಲಿ ಎಂ.ಎಸ್.ಡಿ.ಪಿ ಯೋಜನೆ ಅಡಿಯಲ್ಲಿ  ಕೌಶಲ್ಯ ತರಬೇತಿ ಪಡೆದ ಅಲ್ಪಸಂಖ್ಯಾತ ಸಮುದಾಯದ ಯುವಕ ಯುವತಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.   
ಮುಂದುವರೆದು ಮಾತನಾಡಿದ ಅವರು ತರಬೇತಿ ಪಡೆದ ವಿದ್ಯಾರ್ಥಿಗಳು ದುಡಿದು ಸ್ವಾವಲಂಬಿ ಜೀವನ ಸಾಗಿಸಬೇಕು ತಮ್ಮ ಆರ್ಥಿಕಮಟ್ಟ ಬೆಳೆಸಿಕೊಂಡು ಜೀವನ ನಡೆಸಬೇಕು ಸರ್ಕಾರದ ಇಂತಹ ಸೌಲಭ್ಯಗಳು ಸಾರ್ಥಕವಾಗಬೇಕು ಇಂದಿನ ಆಧುನಿಕ ಯುಗದಲ್ಲಿ ಕಂಪ್ಯೂಟರ್ ಜ್ಞಾನ ಬಹಳ ಅವಶ್ಯಕವಾಗಿದೆ ಇಂಥಹ ತರಬೇತಿಗಳ ಮೂಲಕ ಕಂಪ್ಯೂಟರ್ ಜ್ಞಾನ ಪಡೆದುಕೊಂಡು ಯುವಕ, ಯುವತಿಯರು ಸ್ವಾವಲಂಬಿ ಜೀವನ ಸಾಗಿಸಿದರೆ ಸರ್ಕಾರದ ಈ ಯೋಜನೆ ಸಾರ್ಥಕವಾಗುತ್ತದೆ ಎಂದು  ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ.ಕಲ್ಲೇಶ್ ಹೇಳಿದರು.
 ಪ್ರಮಾಣ ಪತ್ರದ ವಿತರಣೆ ಸಮಾರಂಭದ ಉದ್ಘಾಟನೆಯನ್ನು ಮುಫ್ತಿ ಮೌಲಾನಾ ಮೊಹಮ್ಮದ್ ನಜೀರ ಅಹಮ್ಮದ್ ಖಾದ್ರಿ-ತಸ್ಕೀನಿ,ರವರು ನೆರವೇರಿಸಿ ಆಶೀರ್ವಚನ ನೀಡಿದರು. ಮುಖ್ಯಥಿತಿಗಳಾಗಿ ಸಯ್ಯದ್ ಫೌಂಡೇಶನ್ ಅಧ್ಯಕ್ಷ ಕೆ.ಎಂ.ಸಯ್ಯದ್, ಅಲಹಾಬಾದ್ ಬ್ಯಾಂಕಿನ ಕೊಪ್ಪಳ ಶಾಖಾ ವ್ಯವಸ್ಥಾಪಕ ಮನು ಸ್ಪೆಪ್‌ಹೆನ್ ರಾಜಕುಮಾರ್, ಯುವ ಸಾಹಿತಿ ಮಹೆಬೂಬ್ ಮುಲ್ಲಾ ಹನುಮಸಾಗರ ಸೇರಿದಂತೆ ಪತ್ರಕರ್ತ ಎಂ.ಸಾದಿಕ್ ಅಲಿ ಪಾಲ್ಗೊಂಡು ತರಬೇತಿ ಪಡೆದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆಮಾಡಿದರು. ಆರಂಭದಲ್ಲಿ ತರಬೇತಿ ಶಿಬಿರದ ವಿದ್ಯಾರ್ಥಿನೀಯರಾದ ಕೌಸರ್‌ಬಾನು ಮತ್ತು ಶಾಹೀಸ್ತಾ ಪ್ರಾರ್ಥಿಸಿದರು. ರಜೀಯಾ ಬೇಗಂ ಸ್ವಾಗತಿಸಿದರೆ ಎಸ್.ಎಸ್.ಎಜ್ಯುಕೇಶನ್ ಸೊಸೈಟಿಯ ಪ್ರೋಪ್ರೈಟರ್ ಸೈಯದ್ ಯಜದಾನಿಪಾಷಾ ಖಾದ್ರಿರವರು ಪ್ರಾಸ್ತಾವಿಕವಾಗಿ ಮಾತನಾಡಿ ಈ ಶಿಬಿರದಲ್ಲಿ ಒಟ್ಟು ೧೫೦ ಜನ ಅಲ್ಪಸಂಖ್ಯಾತ ಸಮುದಾಯದ ಯುವಕ, ಯುವತಿ ವಿದ್ಯಾರ್ಥಿಗಳು ತರಬೇತಿ ಪಡೆದುಕೊಂಡಿದ್ದಾರೆ ಎಂದು ವಿವರಿಸಿದರು ಕು.ಸಯ್ಯದಾ ಆಫ್ರೀನ್ ಅಲುವಾಲೆ ರವರು ಕಾರ್ಯಕ್ರಮ ನಿರೂಪಿಸಿದರೆ ಕೊನೆಯಲ್ಲಿ ತರಬೇತಿ ಶಿಕ್ಷಕಿ ಸುನೀತಾ ಕುಷ್ಟಗಿ ವಂದಿಸಿದರು. ಎಲ್ಲಾ ೧೫೦ ಶಿಬಿರಾರ್ಥಿಗಳು ಪಾಲ್ಗೊಂಡು ಪ್ರಮಾಣ ಪತ್ರವನ್ನು ಸ್ವೀಕರಿಸಿದರು

Advertisement

0 comments:

Post a Comment

 
Top