PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಚಿಕ್ಕವಯಸ್ಸಿನಲ್ಲಿಯೇ ಮಹಾನ್ ಸಾಮ್ರಾಜ್ಯ ಕಟ್ಟಿದ ನಾಯಕ ಶಿವಾಜಿ ಮಹಾರಾಜ್,ಪ್ರಥಮ ಬಾರಿಗೆ ಹಿಂದೂ ಸಾಮ್ರಾಜ್ಯದ ಪರಿಕಲ್ಪನೆ ನೀಡಿದ ದೊರೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು. ಅವರು ನಗರದ ಸಾಹಿತ್ಯ ಭವನದಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ  ಬೆಳಿಗ್ಗೆ ೯-೩೦ ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ  ಹಾಗೂ ತ್ರಿಪದಿ ಕವಿ ಸರ್ವಜ್ಞರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಹಿಂದಿನ ಸರಕಾರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಶಿವಾಜಿ ಜಯಂತಿಗೆ ಚಾಲನೆ ನೀಡಿದರು. ಅದೇ ರೀತಿ ಕವಿ ಸರ್ವಜ್ಞ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಬರೆಯದ ವಿಷಯಗಳಿಲ್ಲ. ಇವರೆಲ್ಲರ ಆದರ್ಶಗಳನ್ನು  ಪಾಲಿಸುವಂತಾಗಬೇಕು. ಶಿಕ್ಷಣ,ಹೋರಾಟ, ಸಂಘಟನೆಯ ಮೂಲಕ ಬದುಕು ಕಟ್ಟಿಕೊಳ್ಳಬೇಕು ಎಂದರು.
ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ರಾಘವೇಂದ್ರ ಹಿಟ್ನಾಳ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಂ.ಎಂ.ಕಂಬಾಳಿಮಠ, ಡಾ.ಸುಮತಿ ಹಿರೇಮಠ ಉಪನ್ಯಾಸ ನೀಡಿದರು.ವೇದಿಕೆಯ ಮೇಲೆ ಜಿಲ್ಲಾಧಿಕಾರಿ ಆರ್ ಆರ್ ಜನ್ನು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ರಾಜಾ,  ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಸುರೇಶ ಹಿಟ್ನಾಳ, ಪಿ.ಎಸ್.ಮಂಜುನಾಥ, ನಗರಸಭಾ ಸದಸ್ಯರಾದ ಬಾಳಪ್ಪ ಬಾರಕೇರ, ರಾಮಣ್ಣ ಹದ್ದೀನ್, ನಿರ್ಮಲಾ, ಮಾಜಿ ಜಿ.ಪಂ.ಸದಸ್ಯ ಪ್ರಸನ್ನ ಗಡಾದ, ಸಮಾಜದ ಮುಖಂಡರಾದ ನಾಗರಾಜ ಬಡಿಗೇರ, ಪಟವಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.  ನಾಡಗೀತೆಯನ್ನು ಸದಾಶಿವ ಪಾಟೀಲ್ ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಕನ್ನಡ ಮತ್ತ ಸಂಸ್ಕೃತಿ  ಇಲಾಖೆ ಸಿ.ಕೊಟ್ರಪ್ಪ ಮಾತನಾಡಿದರು. ಸಿ.ವಿ.ಜಡಿಯವರ ನಿರೂಪಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.  ನಂತರ ಮೆರವಣಿಗೆ ಸಂಭ್ರಮದಿಂದ ಜರುಗಿತು.

Advertisement

0 comments:

Post a Comment

 
Top