ಕೊಪ್ಪಳ ತಾಲುಕಿನ ಸಿಪಿಐ(ಎಂಎಲ್) ನಾಲ್ಕನೇ ಸಮ್ಮೇಳನ ನಗರದ ನಿರ್ಮಿತಿ ಕೇಂದ್ರದ ಆಶ್ರಯ ಕಾಲೋನಿಯಲ್ಲಿ ಜರುಗಿತು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಪಕ್ಷದ ಕೇಂದ್ರ ಸಮಿತಿ ಸದಸ್ಯರಾದ ಡಿ. ಹೆಚ್ ಪೂಜಾರ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತ ವಿರೋದಿ, ಕಾರ್ಮಿಕ ವಿರೋದಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ. ಸುರ್ಗಿವಾಜ್ಞೆ ಮೂಲಕ ಭೂ ಸ್ವಾದೀನ ಕಾಯ್ದೆ, ವಿಮಾ ಕ್ಷೇತ್ರದಲ್ಲಿ ೪೯ ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ, ಸರಕಾರದ ನಿರ್ದಾರಗಳ ಮೂಲಕ ಕಾರ್ಪೂರೆಟ್ ಬಹುರಾಷ್ಟ್ರೀಯ ಕಂಪನಿಗಳಿಗೆ ಬಾರಿ ಲಾಬ ಮಾಡಿಕೊಡುವುದರ ಮೂಲಕ ದೇಶದ ದುಡಿಯುವ ಜನರನ್ನು ಬಲಿಕೊಡಲಾಗುತ್ತಿದೆ.
ಈ ಎಲ್ಲಾ ಗುಪ್ತ ಕಾಯಾಚರಣೆಗಳನ್ನು ಮರೆಮಾಚಲು ಮತಾಂತರ ಕಾಯ್ದೆ ನಿಷೇದದ ಗದ್ದಲ ಎಬ್ಬಿಸಿರುವ ಸರಕಾರ ಜನರ ಗಮನವನ್ನು ಬೆರೆಡೆ ಸೆಳೆಯುವ ರಾಜಕೀಯ ತಂತ್ರ ಮಾಡಲಾಗುತ್ತಿದೆ. ರಾಜ್ಯದಲ್ಲಿನ ಕಾಮಗ್ರೆಸ ಸರಕಾ ಸಣ್ಣ ರೈತರನ್ನು ವಕ್ಕಲೆಬ್ಬಿಸಿ ಬುರಾಷ್ಟ್ರೀಯ ಕಂಪನಿಗಳಿಗೆ ಕೊಡುವ ನಿತಿಯನ್ನು ಕೈ ಬಿಡಬೇಕು. ಬೇನಾಮಿ ಹೆಸರಲ್ಲಿ ಬೂ ಮಾಲಿಕರ ಹಾಗೂ ರಾಜಕಾರಣಿಗಳ ಕಬ್ಜದಲ್ಲಿರುವ ಸಾವಿರಾರು ಏಕರೆ ಭುಮಿಯನ್ನು ಸರಕಾರ ವಶಪಡಿಸಿಕೊಂಡು ರೈತರಿಗೆ ಮತ್ತು ಭೂ ಹೀನರಿಗೆ ಹಂಚಬೇಕೆಂದು ಇಂದು ನಡೆದ ೪ ನೇ ತಾಲುಕ ಸಮ್ಮೇಳನದಲ್ಲಿ ಒತ್ತಾಯಿಸಿದರು.
ಹಾಗೂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ. ಬಿ. ಗೋನಾಳ ಮಾತನಾಡಿ, ಜನವರಿ ೨೧ ೨೨, ೨೩, ರಂದು ಬಳ್ಳಾರಿಯಲ್ಲಿ ನಡೆಯುವ ೮ ನೇ ರಾಜ್ಯ ಸಮ್ಮೇಳನ ಮತ್ತು ಪೆಬ್ರುವರಿ ೨೫ ರಿಂದ ಮಾರ್ಚ ೨ ರ ವರೆಗೆ ಉತ್ತರ ಪ್ರದೇಶದ ಲಕನೌದಲ್ಲಿ ನಡೆಯುವ ಪಕ್ಷದ ೧೦ ನೇ ಮಹಾ ಅದಿವೇಶನ ನಡೆಯಲಿದೆ. ಇದಕ್ಕೆ ಪೂರಕವಾಗಿ ತಾಲುಕ ಹಾಗು ಜಿಲ್ಲಾ ಸಮಾವೇಶಗಳನ್ನು ಏರ್ಪಡಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಪಕ್ಷದ ಮಂಜುನಾಥ ಚಕ್ರಸಾಲಿ ವಕೀಲರು, ಹನಮೇಶ ಕವಿತಾಳ ಉಪಸ್ಥಿತರಿದ್ದರು. ಬಸವರಾಜ ನರೆಗಲ್, ಅಧ್ಯಕ್ಷತೆ ವಹಿಸಿದ್ದರು. ೧೨ ಜನರ ನೂತನ ಸಮಿತಿಯನ್ನು ರಚಿಸಿ ಕಾರ್ಯದರ್ಶಿಯನ್ನಾಗಿ ಹೇಮರಾಜ ವೀರಾಪೂರ ಅವರನ್ನು ಆಯ್ಕೆ ಮಾಡಲಾಯಿತು.
0 comments:
Post a Comment