ಗಂಗಾವತಿಯ ಲಿಂಗಸ್ಗೂರು ಮುಖ್ಯರಸ್ತೆಯನ್ನು ಬಂದ್ ಮಾಡಿ
ಅಗಡಿ ಈರಣ್ಣ (ಸಂಗಣ್ಣ) ಸ್ಲಮ್ ಪ್ರದೇಶದಲ್ಲಿ ಕೆಲವರು ಶ್ರೀಮಂತರು ಕಾನೂನುಗಳನ್ನು ಗಾಳಿಗೆ ತೂರಿ ನಗರಸಭೆ ಹಾಗೂ ಪೊಲೀಸರ ಅನುಮತಿ ಇಲ್ಲದೆಯೇ ಮುಖ್ಯರಸ್ತೆಯನ್ನು ಬಂದ್ ಮಾಡಿ ಕಟ್ಟಡ ನಿರ್ಮಿಸುತ್ತಿರುವುದು ಕಾಯ್ದೆಗಳ ಮೇಲೆ ಮಾಡಿದ ಸವಾರಿಯಾಗಿದೆ ಎಂದು ಭಾರದ್ವಾಜ್ ತಿಳಿಸಿದ್ದಾರೆ.
ಜಿಲ್ಲಾಡಳಿತ. ಪ್ರಾದೇಶಿಕ ಆಯುಕ್ತರು, ನಗರ ಯೋಜನಾ ಪ್ರಾಧಿಕಾರ ಮತ್ತು ಕೊಳಚೆ ಅಭಿವೃದ್ಧಿ ಮಂಡಳಿಯ ಯಾವುದೇ ಅನುಮತಿ ಪಡೆಯದೇ ನಗರಸಭೆಯ ಮತ್ತು ಸ್ಥಳೀಯ ಕೆಲ ರಾಜಕಾರಣಿಗಳ ಬೆಂಬಲದಿಂದ ನಿರ್ಮಿಸುತ್ತಿರುವ ಅಕ್ರಮ ವಾಣಿಜ್ಯ ಸಂಕೀರ್ಣ ರಾಜ್ಯ ಹಾಗೂ ರಾಷ್ಟ್ರ ಕಾಯ್ದೆಗಳಿಗೆ ಸವಾಲಾಗಿದೆ.
ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಈ ಅಕ್ರಮ ವಾಣಿಜ್ಯ ಕಟ್ಟಡ ಕಟ್ಟುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕು. ಅಗಡಿ ವೀರಣ್ಣ (ಸಂಗಣ್ಣ) ಸ್ಲಮ್ ಸರ್ವೆ ನಂ. ೨೬/೧,೨ ರಲ್ಲಿ ೬ ಎಕರೆ ೩೨ ಗುಂಟೆ ಪ್ರದೇಶವನ್ನು ಸರಕಾರ ಸ್ವಾಧೀನಪಡಿಸಿಕೊಂಡು ಅಲ್ಲಿ ವಾಸವಿರುವ ಸ್ಲಮ್ ನಿವಾಸಿಗಳಿಗೆ ರಕ್ಷಣೆ ಕೊಡಬೇಕೆಂದು ಸಿಪಿಐಎಂಎಲ್ ಪಕ್ಷ ಒತ್ತಾಯಿಸುತ್ತದೆ ಎಂದು
ತಿಳಿಸಿದ್ದಾರೆ.
0 comments:
Post a Comment