PLEASE LOGIN TO KANNADANET.COM FOR REGULAR NEWS-UPDATES

 ತಾಲುಕಿನ ಗಿಣಗೇರಾ ಗ್ರಾಮಸ್ಥರಿಂದ ಗವಿಶ್ರೀ ಜಾತ್ರೆ ದಾಸೋಹಕ್ಕೆ ಪ್ರತಿ ವರ್ಷದಂತೆ ಈ ವರ್ಷವು ದೇಣಿಗೆ ನೀಡಲಾಯಿತು. ವರ್ಷದಿಂದ ವರ್ಷಕ್ಕೆ ಗವಿಸಿದ್ದೇಶ್ವರ ಜಾತ್ರೆ ಅತಿ ಹೆಚ್ಚು ಜನರನ್ನು ಸೆಳೆಯುತ್ತಿರುವದರಿಂದ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ದೇಣಿಗೆ ಸಂಗ್ರಹಿಸಲಾಗಿದೆ. 
           
ಗಿಣಗೇರಾ ಗ್ರಾಮಸ್ಥರೆಲ್ಲರೂ ಸೇರಿ ೫೦೦೦ ರೊಟ್ಟಿ, ೪ ಕ್ವಿಂಟಲ್ ಮಾದಲಿ, ೧೨ ಚೀಲ ಅಕ್ಕಿ, ೪ ಚೀಲ ಭತ್ತ, ಒಂದು ಚೀಲ ಗೋಧಿ, ಮತ್ತು ೭೭,೫೬೬ ರೂ ಹಣವನ್ನು ಸದಂಗ್ರಹಿಸಿ ಗವಿಸಿದ್ದೇಶ್ವರ ಮಠಕ್ಕೆ ನೀಡಲಾಯಿತು. ಈ ಒಂದು ಸೇವೆಯಲ್ಲಿ ಗ್ರಾಮದ ಮುಖಂಡರಾದ ಶರಣಪ್ಪ ಗೊಂಡಬಾಳ, ಹನುಮಂತ ಪೂಜಾರ, ಯಮನೂರಪ್ಪ ಪಲ್ಲೆದ, ಫಕೀರಪ್ಪ ಹೊಸಳ್ಳಿ, ಮೌನೇಶಪ್ಪ ಬಡಿಗೇರ ಹಾಗೂ ಇನ್ನಿತರ ಗ್ರಾಮಸ್ಥರು ಸೇವೆಯಲ್ಲಿ ಭಾಗವಹಿಸಿದ್ದರು ಎಂದು  ಶರಣಪ್ಪ ಗೊಂಡಬಾಳ ತಿಳಿಸಿದ್ದಾರೆ. 

Advertisement

0 comments:

Post a Comment

 
Top