PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಜ . ಜೀವನದಲ್ಲಿ ಎಲ್ಲದಕ್ಕೂ ಮೊದಲು ಧೈರ್ಯ ಮಾಡಬೇಕು ಅಂದಾಗ ಮಾತ್ರ ಬದುಕಲು ಸಾಧ್ಯ ಎಂದು ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.
ಅವರು ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾಗೂ ಜಿಲ್ಲಾ ಯುವ ಸಂಘಗಳ ಒಕ್ಕೂಟ ಮತ್ತು ಜಿಲ್ಲೆಯ ಯುವಕ/ಯುವತಿ ಸಂಘಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ತಾವು ಎಸ್.ಎಸ್.ಎಲ್.ಸಿ ಫೇಲಾದಾಗ ಸಾಯುವ ಯೋಚನೆ ಮಾಡಿದ್ದಲ್ಲದೇ ಏಕಾಏಕಿ ಊರು ಬಿಟ್ಟು ಹೋಗಿದ್ದು ನಂತರ ಜ್ಞಾನೋದಯವಾಗಿ ಮರಳಿ ಬಂದು ಸ್ನೇಹಿತರನ್ನು ಹಿಮ್ಮೆಟ್ಟಿ ಮುಂದೆ ಸಾಗಿದ್ದು, ಜೀವನದಲ್ಲಿ ಸಾಧಿಸಿ ಮೂರು ಬಾರಿ ನಗರಸಭೆ ಉಪಾಧ್ಯಕ್ಷರಾಗಿ ಆಗಿದ್ದು ಈಗ ಇತಿಹಾಸವಾದರೂ ನಡೆದುಕೊಂಡು ಬಂದ ದಾರಿ ಸುಲಬದ್ದಲ್ಲ ಆದರೆ, ಯುವಜನರು ಧೈರ್ಯದಿಂದ ಮುನ್ನುಗ್ಗಬೇಕು ಎಂದು ಯುವಜನರಿಗೆ ಕರೆ ನೀಡಿದರು.
ಸಮಾರಂಭದ ಸಾನಿಧ್ಯವನ್ನು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಪರಮಪೂಜ್ಯ ಶ್ರೀ ಚೈತನ್ಯಾನಂದ ಮಹಾಸ್ವಾಮಿಗಳು ವಹಿಸಿಕೊಂಡು, ಸ್ವಾಮಿ ವಿವೇಕಾನಂದರ ಆದರ್ಶ ಬದುಕು, ೩೯ ವರ್ಷಗಳಲ್ಲಿ ಸಾಧಿಸಿದ್ದು, ೧೫೨ ವರ್ಷಗಳ ನಂತರವೂ ಮುಂದಿನ ಸಾವಿರಾರು ವರ್ಷಗಳವರೆಗೂ ಅವರ ವಿಚಾರಧಾರಗಳು ಸದಾ ಜೀವನೋತ್ಸಾಹದ ಚಿಲುಮೆ ಇದ್ದಹಾಗೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಶ್ರೀ ಗವಿಸಿದ್ದೇಶ್ವರ ಕಾಲೇಜಿನ ಪ್ರಾಧ್ಯಾಪಕರಾದ ಶರಣಬಸಪ್ಪ ಬಿಳಿಎಲೆ, ಸ್ವಾಮಿ ವಿವೇಕಾನಂದರ ಜೀವನದ ಹಲವಾರು ಮೈಲುಗಲ್ಲುಗಳನ್ನು ವಿವರಿಸುತ್ತಾ, ಯುವಜನರು ದೇಶದ ಸಂಸ್ಕೃತಿಯನ್ನು ಅರಿತುಕೊಳ್ಳಬೇಕಾದರೆ, ವಿವೇಕಾನಂದರನ್ನು ಮೊದಲು ಅರ್ಥಮಾಡಿಕೊಳ್ಳಬೇಕು, ಅದಕ್ಕಾಗಿ ಅವರನ್ನು ಓದಿಕೊಳ್ಳಬೇಕು. ವಿವೇಕಾನಂದರೆ ಮೊದಲ ಬಾರಿಗೆ ಅಮೇರಿಕಾದ ಚಿಕಾಗೋದಲ್ಲಿ ಮಾಡಿದ ಭಾಷಣವೇ ಇಂದು ನಾವು ಹಣ ಕೊಟ್ಟು ಕಲಿಯಲು ಹೋಗುತ್ತಿರುವ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮಗಳು. ಗಾಂಧೀಜಿ, ನೇತಾಜಿ, ಟ್ಯಾಗೋರ, ಜಿಎಸ್‌ಎಸ್ ಅನೇಕರು ವಿವೇಕಾನಂದರ ಮಾತುಗಳಿಂದಲೇ ಪ್ರೇರಿತರಾಗಿ ದೇಶ ಕಟ್ಟಿದವರು, ಅದನ್ನು ಸ್ವತಃ ಆ ಮಹನೀಯರೇ ತಮ್ಮ ಮಾತುಗಳಲ್ಲಿ ದಾಖಲಿಸಿಕೊಂಡಿದ್ದಾರೆಂದರು. ನಮ್ಮ ದೇಶ ೨೦೨೫ರಷ್ಟೊತ್ತಿಗೆ ವಿಶ್ವದ ಅಗ್ರಗಣ್ಯ ದೇಶವಾಗಲಿದೆ, ಅಮೇರಿಕಾ ಜನಸಂಖ್ಯೆಯಷ್ಟು ನಮ್ಮ ದೇಶದ ಯುವಜನರ ಸಂಖ್ಯೆ ಇದೆ, ಯುವಜನರ ಸರಿಯಾದ ಸದ್ಭಳಕೆಯಾಗಬೇಕಿದೆ ಎಂದರು.
ಯುವ ಸಂಘಗಳ ಒಕ್ಕೂಟದ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಕಾರ್ಯಕ್ರಮದ ರೂಪರೇಷಗಳ ಕುರಿತು ಮಾತನಾಡಿದರು. ನಗರಸಭೇ ಸದಸ್ಯ ಮಲ್ಲಪ್ಪ ಕವಲೂರ, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಎಸ್.ಬಿ.ರಾಜೂರು, ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯರಾದ ಎಸ್. ಬಿ .ಶಾಂತಪ್ಪನವರ, ಬಾಲಕರ ಪದವಿ ಪೂರ್ವ ಕಾಲೇಜಿನ ಉಪ ಪ್ರಾಚಾರ್ಯರಾದ ಎ.ಕೆ.ತುಪ್ಪದ, ವಿನೂತನ ಶಿಕ್ಷಣ ಸೇವಾ ಸಂಸ್ಥೆಯ ಅಧ್ಯಕ್ಷ ಸಿದ್ದಲಿಂಗಯ್ಯ ಹಿರೇಮಠ, ಸರಕಾರಿ ಡಿಇಡಿ ಕಾಲೇಜಿನ ಪ್ರಾಚಾರ್ಯ ಬಸವಂತಯ್ಯ ಹಿರೇಮಠ, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಅಂದಪ್ಪ ಚಿಲಗೋಡ್ರ, ಶಿವಾನಂದ ಹೊದ್ಲೂರ ಇತರರು ಭಾಗವಹಿಸಿದ್ದರು.
ಹುಸೇನ ಭಾಷಾ ಪ್ರಾರ್ಥಿಸಿದರು, ಶಿಕ್ಷಕಿ ಲಲಿತಾ ಅಂಗಡಿ ವಿಶೇಷ ಗೀತೆಯನ್ನು ಸಾಮೂಹಿಕವಾಗಿ ಮಕ್ಕಳಿಗೆ ಹೇಳಿಕೊಟ್ಟರು, ಕ್ರೀಡಾಧಿಕಾರಿ ಎನ್. ಎಸ್. ಪಾಟೀಲ ನಿರೂಪಿಸಿದರು, ಭೀಮನಗೌಡ ಪಾಟೀಲ ಸ್ವಾಗತಿಸಿದರು, ಗಣೇಶ ಹೊರತಟ್ನಾಳ ವಂದಿಸಿದರು.

Advertisement

0 comments:

Post a Comment

 
Top