ಗಂಗಾವತಿಯ ಅಗಡಿ ವೀರಣ್ಣ ಕ್ಯಾಂಪಿನ ನಮ್ಮ ಪ್ರಗತಿಪರ ಸಂಘಟನೆಗಳ ಪ್ರತಿಕೆ ಹೇಳಿಕೆ ಕುರಿತಂತೆ ಗಂಗಾವತಿಯ ಶಾಸಕ ಇಕ್ಬಾಲ ಅನ್ಸಾರಿಯವರು ಹಾದಿಗೆ ಹೋಗುವ ದೆವ್ವವನ್ನು ಮೈಮೇಲೆ ಎಳೆದುಕೊಂಡಂತೆ, ನಾವು ಆಧಾರ ಸಹಿತ ದಾಖಲೆಗಳನ್ನು ಇಟ್ಟುಕೊಂಡು ಕೊಳಚೆ ಪ್ರದೇಶದಲ್ಲಿ ಅಕ್ರಮ ಕಟ್ಟಡ ನಡೆದಿರುವುದನ್ನು ಬಯಲಿಗೆಳೆದರೆ, ಪ್ರಗತಿಪರ ಸಂಘಟನೆಯವರು ಕೆಲಸವಿಲ್ಲದವರು. ಕಾಯ್ದಿಯನ್ನು ತಿಳಿಯದೆ ಮಾತನಾಡುತ್ತಾರೆ, ಭಾರದ್ವಾಜ ಮಾನಸಿಕ ರೋಗಿ, ವಿಠ್ಠಪ್ಪ ಗೋರಂಟ್ಲಿ ತಿಳಿವಳಿಕೆ ಇಲ್ಲದಾತ ಎಂದೆಲ್ಲ ಉಡಾಪೆ ಮಾತನಾಡಿದ್ದು ಪತ್ರಿಕೆಗಳಲ್ಲಿ ವರದಿಯಾಗಿದೆ.
ಆನರ ಮತಗಳಿಂದ ಆಯ್ಕೆ ಯಾಗಿ ಅಧಿಕಾರ ಹಿಡಿದಿರುವವರಿಗೆ ಮೊದಲಿಗೆ ಸರಿಯಾದ ಕಾಯ್ದೆಯ ಜ್ಞಾನವಿರಬೇಕು, ಕಾಯ್ದೆಯನ್ನು ರೂಪಿಸುವವರೇ ಕಾಯ್ದೆಗಳನ್ನು ಮುರಿಯುವ ಮಾತನಾಡುವವರು ’ಇದಿ ಅಮೀನ’ ಜಾತಿಗೆ ಸೇರಿದವರು. ನಮ್ಮದು ಕಾಯ್ದೆ ಬದ್ದವಾಗಿದೆಯೋ? ನಿಮ್ಮದು ಕಾಯ್ದೆ ಬದ್ದವಾಗಿದೆಯೋ? ಎನ್ನುವುದನ್ನು ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯವರು ಪತ್ರ ಸಂ. ಕಕೊಆಮ/ಸಕಾನಿ/ಗಉವಿ/೨೦೧೩-೧೪/೨೫೮ ಆದೇಶವೆ ಸಾಕ್ಷಿಯಾಗಿದೆ. ಅಗಡಿ ವೀರಣ್ಣ ಕ್ಯಾಂಪಿನ ಕುರಿತಂತೆ ಬೇಕಾದಷ್ಟು ದಾಖಲೆಗಳ ಪೈಲು ನಮ್ಮ ಬಳಿಇದೆ, ನಿಮ್ಮ ಬಳಿ ಏನಿದೆ ಎಂಬುದನ್ನು ನೀವು ತೋರಿಸಿ ನಿಮ್ಮ ವಾದವನ್ನು ನಿಜವೆಂದು ನಿರೂಪಿಸಲು ಸಿದ್ದವಿದ್ದರೆ ನೀವು ಎಲ್ಲಿ ಕರೆದರೂ ನಾವು ಬಂದು ನಮ್ಮ ನಿಮ್ಮ ದಾಖಲೆಗಳನ್ನು ಪರಿಶೀಲಿಸಿ ನಿಮ್ಮದೇ ಸರಿಯಾಗಿದ್ದರೆ ನಾವು ಸಾರ್ವಜನಿಕ ಹೋರಾಟದಿಂದ ಹಿಂದೆ ಸರಿಯಲು ಸಿದ್ದ. ನಮ್ಮದು ಸರಿಯಾಗಿದ್ದರೆ ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ದೂರ ಸರಿಯಲು ಸಿದ್ದರಿದ್ದೀರಾ? ತಿಳಿಸಿರಿ.
ಇಷ್ಠೆಲ್ಲಾ ಆದರೂ ಇನ್ನು ಆ ಕ್ಯಾಂಪಿನಲ್ಲಿ ನಿಮ್ಮ ಕುಮ್ಮಕ್ಕಿನಿಂದ ಅಕ್ರಮ ಕಟ್ಟಡಗಳ ಕಟ್ಟಡ ನಡೆಯುತ್ತಲಿವೆ. ಅದನ್ನು ತಕ್ಷಣ ನಿಲ್ಲಿಸದಿದ್ದರೆ ನಿಮ್ಮನ್ನು ಹೊಣೆಗಾರರನ್ನಾಗಿಸಿ ಪೌರಾಯುಕ್ತರ ಮೇಲೆ ನ್ಯಾಯಾಲಯದ ಮೂಲಕ ನಮ್ಮ ಹೋರಾಟ ಮುಂದುವರೆಯುತ್ತದೆ. ಪ್ರಾಮಾಣಿಕತೆಯ ವಿಚಾರವಿಲ್ಲದವರು ಜನಪ್ರತಿನಿಧಿಗಳಾದರೆ.ಅನ್ಯಾಯವೇ ವಿಜೃಂಭಿಸುತ್ತದೆ ಎನ್ನುವುದಕ್ಕೆ ನೀವೆ ಸಾಕ್ಷಿಯಾಗಿದ್ದೀರಿ. ನ್ಯಾಯವನ್ನು ಕಾಪಾಡಬೇಕಾದವರೇ ಅದನ್ನು ತುಳಿದು ಹಾಕಿದರೆ ಅದಕ್ಕೆ ಕಾಲವೇ ಉತ್ತರಿಸುತ್ತದೆ.
ಈ ಕ್ಯಾಂಪಿನಲ್ಲಿ ವಾಸವಾಗಿದ್ದ ೧೨ ಕುಟುಂಬಗಳನ್ನು ಒಕ್ಕಲೆಬ್ಬಿಸಿ ಬೀದಿ ಪಾಲು ಮಾಡಿದ್ದೀರಿ, ಇವರ ಶಾಪ ನಿಮಗೆ ತಟ್ಟದೆ ಹೋಗಲಾರದು. ಅಲ್ಲಿ ಯಾವುದೇ ಪರವಾನಗೆ ಇಲ್ಲದೆ ದೊಡ್ಡ ದೊಡ್ಡ ವಾಣಿಜ್ಯ ಮಳಿಗೆನಿರ್ಮಿಸುತ್ತಿದ್ದರೂ ಅದನ್ನು ನೀವು ಸಮರ್ಥಿಸುತ್ತಿದ್ದೀರಿ. ಇದನ್ನು ಯಾರಾದರೂ ನ್ಯಾಯವೆಂದು ಒಪ್ಪಲಾದೀತೆ. ಮುಂದೆ ನ್ಯಾಯಾಲಯದಿಂದ ಆ ಕಟ್ಟಡ ಕೆಡವಿ ಹಾಕಲು ಆದೇಶ ಬಂದರೆ ಅದರ ಹಾನಿಯನ್ನು ನೀವು ಮತ್ತು ಪೌರಾಯುಕ್ತರು ಭರಿಸುತ್ತಿರಾ?
ಗಂಗಾವತಿಯ ೫ ನೇ ವಾರ್ಡಿನಲ್ಲಿರುವ ಮಹಿಳಾ ಶೌಚಾಲಯವನ್ನು ದಿನನಿತ್ಯ ನೂರಾರು ಜನ ಸಾಲುಗಟ್ಟಿ ಬಳಸುತ್ತಾರೆ. ಈಗ ಅದನ್ನು ಯಾರದೋ ವಾಸಕ್ಕೆ ಕೊಟ್ಟಿದ್ದರಿಂದ ಸಾವಿರಾರು ಮಹಿಳೆಯರು ಜನೇವರಿ ೦೧ ರಂದು ಹೊಸವರ್ಷಕ್ಕೆ ದಿಕ್ಕಾರ ಹೇಳಿ ಪ್ರತಿಭಟಿಸಿದರು. ಇದು ನಿಮ್ಮ ಕಣ್ಣಿಗೆ ಕಾಣದಿದ್ದರೆ ನೀವೆಂತ ಜನಪ್ರತಿನಿಧಿಗಳು?
ನ್ಯಾಯದ ಪರವಾಗಿ ಕೆಲವು ಪತ್ರಿಕೆಗಳು ನಿಮ್ಮ ತಪ್ಪನ್ನು ತೋರಿಸಿ ಬರೆದಿದ್ದಾರೆ. ಅವರೆಲ್ಲಾ ನೀವು ತಿದ್ದಿಕೊಳ್ಳಲು ಬರೆದಿದ್ದಾರೆ. ಅದು ನಿಮಗೆ ಬಿಟ್ಟ ವಿಷಯ, ಆದರೆ ಅದು ನಿಮ್ಮ ಗಮನಕ್ಕೆ ಕಳುಹಿಸಿದ್ದೇವೆ.
ಭಾರದ್ವಾಜ, ಬಸವರಾಜ ಶೀಲವಂತರ, ವಿಠ್ಠಪ್ಪ ಗೋರಂಟ್ಲಿ, ಡಿ. ಹೆಚ್. ಪೂಜಾರ,
0 comments:
Post a Comment