ಈ ಸಂದರ್ಭದಲ್ಲಿ ಮಾತನಾಡಿದ ಮಾರಪ್ಪ, ಕಪಟ ಸನ್ಯಾಸಿ ರಾಮ್‌ದೇವ್ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ದಲಿತ ಕಾಲನಿಗಳಿಗೆ ಪಿಕ್‌ನಿಕ್‌ಗಾಗಿ ಭೇಟಿ ನೀಡುತ್ತಿದ್ದಾರೆಂದು ದಲಿತ ವಿರೋಧ ಹೇಳಿಕೆ ನೀಡಿದ್ದು, ಯೋಗದ ನೆಪದಲ್ಲಿ ಕೋಟ್ಯಂತರ ಜನರಿಗೆ ಟೋಪಿ ಹಾಕುತ್ತಿದ್ದಾನೆ ಎಂದು ಟೀಕಿಸಿದರು.
ಪದ್ಮಭೂಷಣ ಪ್ರಶಸ್ತಿಗೆ ತನ್ನದ ಆದ ಘನತೆ ಗೌರವಗಳಿವೆ. ‘ನೀಚ’ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಪ್ರಶಸ್ತಿಗೆ ಶಿಫಾರಸ್ಸು ಮಾಡುವ ಮೂಲಕ ಕೇಂದ್ರ ಸರಕಾರ ಯಾವುದೇ ಕಾರಣಕ್ಕೂ ಪ್ರಮಾದ ಎಸಗಬಾರದು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮರು ಪರಿಶೀಲನೆ ಮಾಡಬೇಕೆಂದು ಮಾರಪ್ಪ ಆಗ್ರಹಿಸಿದರು.
ಒಂದು ವೇಳೆ ಕಪಟ ಸನ್ಯಾಸಿ ಯೋಗ ಗುರು ಬಾಬಾ ರಾಮ್‌ದೇವ್ ಅವರ ಹೆಸರನ್ನು ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದಲ್ಲಿ ದಲಿತ ಸಂಘರ್ಷ ಸಮಿತಿ ಇತರೆ ಪ್ರಗತಿಪರ ಸಂಘಟನೆಗಳೊಂದಿಗೆ ಸೇರಿ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟ ರೂಪಿಸಲಿದೆ ಎಂದು ಇದೇ ವೇಳೆ ಮಾರಪ್ಪ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೂರಾರು ಕಾರ್ಯಕರ್ತರು ಕಪಟ ಸನ್ಯಾಸಿ ಬಾಬಾ ರಾಮ್‌ದೇವ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನೇತೃತ್ವವನ್ನು ದಸಂಸ ಗೌರವಾಧ್ಯಕ್ಷ ಕೆ.ತಮ್ಮಯ್ಯ, ಮುಖಂಡರಾದ ಮುನಿಭೈರಪ್ಪ, ಬೇಗೂರು ಚಂದ್ರಪ್ಪ, ಮುನಿರಾಜು, ವೆಂಕಟಾಚಲಪತಿ ಸೇರಿ ಇನ್ನಿತರರು ವಹಿಸಿದ್ದರು.
0 comments:
Post a Comment