ಕೊಪ್ಪಳ: ದೇಶದ ಪ್ರಗತಿಯಲ್ಲಿ ಪ್ರತಿಯೊಬ್ಬ ಯುವಕತ ಪಾತ್ರ ಬಹಳ ಮುಖ್ಯವಾಗಿದೆ ಎಂದು ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದರು.
ತಾಲೂಕಿನ ಅಗಳಕೇರಾ ಗ್ರಾಮದಲ್ಲಿ ಗ್ರಾಮ ಪಂಚಾಯತ ಕಾರ್ಯಾಲಯ ಹಾಗೂ ಯುವ ಶಕ್ತಿ ತರುಣ ಸಂಘದ ಸಂಯುಕ್ತಾಶ್ರಯದಲ್ಲಿ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದನವರ ೧೫೨ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿವೇಕಾನಂದರ ಬಗ್ಗೆ ಉಪನ್ಯಾಸ ನೀಡುತ್ತಾ ಮಾತನಾಡಿ,ಒಂದು ದೇಶವು ಪ್ರಗತಿಯತ್ತ ಮುನ್ನಡೆಯಬೇಕಾದರೆ ಆ ದೇಶದಲ್ಲಿನ ಯುವಕ ಪಾತ್ರ ಬಹಳ ಮುಖ್ಯವಾಗಿದೆ.ಇಂದಿನ ದಿನಗಳಲ್ಲಿ ಯುವಕರು ಅನೇಕ ದುಶ್ಚಟಗಳ ದಾಸರಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ.ಸ್ವಾಮಿ ವಿವೇಕಾನಂದರ ವಾಣಿಯಂತೆ ಒಳ್ಳೆವನಾಗು ನಂತರ ಉಪಕಾರಿಯಾಗುವಂತೆ ಪ್ರತಿಯೊಬ್ಬರು ಮೊದಲು ತಮ್ಮಲ್ಲಿರುವ ಲೋಪ ದೋಷಗಳನ್ನು ಸರಿಪಡಿಸಿಕೊಂಡ ನಂತರ ಇತರರಿಗೆ ಉಪಕಾರಿಯಾಗಬೇಕು.ವಿವೇಕಾನಂದರು ತಮ್ಮ ೩೯ನೇ ವಯಸ್ಸಿನಲ್ಲಿ ಭಾತರದ ಮಹತ್ವ,ಹಿಂದೂ ಧರ್ಮದ ತಿರುಳುನ್ನು,ಸಹೋದರತ್ವವನ್ನು ವಿಶ್ವಕ್ಕೆ ಸಾರಿದ್ದಾರೆ.ಯುವ ಜನತೆಗೆ ಏಳಿ ಎದ್ದೇಳಿ,ಗುರಿ ಮುಟ್ಟುವ ತನಕ ನಿಲ್ಲದಿರು ಎನ್ನುವುದರೊಂದಿಗೆ ಮಾನವೀಯತೆ,ಹಸೀವು,ಶ್ರಮದ ಬದುಕು,ಧರ್ಮದ ತಿರುಳು ಕುರಿತು ವಿವೇಕಾನಂದರು ಆಡಿದ ಮಾತುಗಳು ನಮಗೆ ಇಂದಿಗೂ ಆದರ್ಶ ಪ್ರಾಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ವಹಿಸಿದ್ದ,ರಾಮಕೃಷ್ಣ ವಿವೇಕಾನಂದ ಆಶ್ರಮದ ಚೈತನ್ಯಾನಂದ ಸ್ವಾಮಿಯವರು ಮಾತನಾಡುತ್ತ,ಸ್ವಾಮಿ ವಿವೇಕಾನಂದರಿಗೆ ಯುವ ಶಕ್ತಿಗೆ ಮೀಲಾಗಿದದ್ದು ಯಾವುದು ಇಲ್ಲಾ.ಯುವಕರು ಹೇಡಿಗಳಾಗಬಾರದು ಪುರುಷ ಸಿಂಹಗಲಾಗಬೇಕು ಎಂದೂ ಪರಾವಲಂಬಿಗಳಾಗಬಾರದು,ನಿಮ್ಮ ಬದುಕಿನ ಶಿಲುಗಳು ನೀವೆ ಎಂದು ಪ್ರತಿಪಾದಿಸುತ್ತಿದ್ದ ಸ್ವಾಮಿಜಿ ಅವರು ಯುವ ಜನರಿಗೆ ನೀಡಿರುವ ಒಂದೊಂದು ಸಂದೇಶವು ಜೀವನ ಧರ್ಮವಾಗಿದೆ.ರಾಜ್ಯದಲ್ಲಿ ಹಲವು ಯುವ ಸಂಘಗಳಿವೆ ಆದರೆ ಯುವಕರಿಗೆ ಅನೇಕ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವವು ಕೇಲವು ಯುವ ಸಂಘಗಳು ಮಾತ್ರ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಊರಿನ ಹಿರಿಯರಾದ ನಿಂಗಪ್ಪ ಕರ್ಕಿಹಳ್ಳಿ,ಮರ್ದಾನಪ್ಪ ಬಿಸನಹಳ್ಳಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಂಜುನಾಥ ಕನಕಗಿರಿ,ಬಸವರಾಜ ವಕೀಲರು,ತಿಪ್ಪಣ್ಣ ವಡ್ಡರ್,ವೆಂಕಟೇಶ ವಡ್ಡರ್,ಸೋಮಲಿಂಗಪ್ಪ ಚಳ್ಳಗೇರಿ,ಮಹಾದೇವಪ್ಪ ಬಿಸನಹಳ್ಳಿ,ಜಂಭಣ್ಣ ಶೆಟ್ಟರ್,ಎಸ್.ಡಿ.ಎಂ.ಸಿ.ಯ ಅಧ್ಯಕ್ಷರಾದ ಲಿಂಗರಾಜ ಬೇಳೂರು,ಶಿಕ್ಷಕರಾದ ವಲ್ಲಭ್ ದುದ್ದಾಲಿ,ಮಂಜುನಾಥ,ಶ್ರೀಧರ.ಎಚ್ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ವೀರಭದ್ರಯ್ಯಾ ಭೂಸನೂರಮಠ ನಿರೂಪಿಸಿದರು. ಗೋಣಿ ಬಸಪ್ಪ ಸ್ವಾಗತಿಸಿ,ವಂದಿಸಿದರು.
0 comments:
Post a Comment