PLEASE LOGIN TO KANNADANET.COM FOR REGULAR NEWS-UPDATES




ಕೊಪ್ಪಳ: ಕೊಪ್ಪಳ ಗವಿಮಠದ ಜಾತ್ರೆಯಲ್ಲಿ ಇದೇ ಮೊದಲ ಬಾರಿಗೆ  ಗಾಳಿಪಟ  ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.  ಇಂದು ಬೆಳಿಗ್ಗೆ ೧೦.೩೦ ರಿಂದ ಮಧ್ಯಾಹ್ನದವರೆಗೂ ಆಕಾಶದಲ್ಲಿ ಬಗೆಯ ಬಗೆಯ ಗಾಳಿಪಟಗಳು ಹಾರಾಡಿದವು. ರಾಕೆಟ್ ರೂಪದ, ಪಾರಿವಾಳ , ರಣಹದ್ದು, ಪಕ್ಷಿಗಳ , ಅನುಕೊಂಡ ಹಾವಿನ ರೂಪದ , ಯಕ್ಷಗಾನ ಮಾದರಿಯ ಹೀಗೆ ಬಗೆ ಬಗೆಯ ಬಣ್ಣ ಬಣ್ಣದ ಗಾಳಿಪಟಗಳು ಬಾನಂಗಳದಲ್ಲಿ ನಕ್ಕು ನಲಿಯುವದರ ಮೂಲಕ ಜಾತ್ರೆಗೆ ನೆರೆದಿರುವ ಮಕ್ಕಳ, ಭಕ್ತರ ಮನರಂಜನೆ ಲ್ಲಿ ಯಶಸ್ವಿಯಾಯಿತು. ವಿವಿಧ  ಶಾಲಾ ಕಾಲೇಜುಗಳ  ಮಕ್ಕಳಗಳು ಈ ಗಾಳಿಪಟ ಉತ್ಸವವನ್ನು ಕಣ್ತುಂಬಾ ನೋಡಿ ಆನಂದ ಪಟ್ಟರು. ದೊಡ್ಡ ಬಳ್ಳಾಪುರ ಹಾಗೂಧಾರವಾಡ ಕೈಟ್ ಪ್ಲೇಯರ ಸಂಸ್ಥೆಯ ನುರಿತ ತಜ್ಞರು ಗಾಳಿಪಟಗಳನ್ನು ಹಾರಾಟ ನಡೆಸಿದರು.ಈ ಡಾ.ವಿಶ್ವನಾಥ ನಾಲ್ವಾಡ ಈ ಗಾಳಿಪಟ ಉತ್ಸವದ ಆಯೋಜಕರಾಗಿ ಕಾರ್ಯ ನಿರ್ವಹಿಸಿದರು.

Advertisement

0 comments:

Post a Comment

 
Top