PLEASE LOGIN TO KANNADANET.COM FOR REGULAR NEWS-UPDATES

 ಜೀನಿಯಸ್ ಪಬ್ಲಿಕ್ ಶಾಲೆಯಲ್ಲಿ ೧೫೩ನೇ ಸ್ವಾಮಿವಿವೇಕಾನಂದರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಅಧ್ಯಕ್ಷ ಸ್ಥಾನವನ್ನು   ರತನ್‌ಸಿಂಗ್ ರಾಜಪುರೋಹಿತ್ (ಶಾಲಾ ಪಾಲಕರು) ವಹಿಸಿಕೊಂಡಿದ್ದರು. ಇವರು ಮಕ್ಕಳಿಗೆ ಸ್ವಾಮಿ ವಿವೇಕಾನಂದ ಆದರ್ಶ,ತತ್ವಗಳನ್ನು ಬೆಳಸಿಕೊಳ್ಳಲು ತಿಳಿಸಿದರು.
ಅತಿಥಿ ಸ್ಥಾನವನ್ನು  ಯಲ್ಲಪ್ಪ ಕನಕಗಿರಿ ವಹಿಸಿಕೊಂಡಿದ್ದರು. ಜೀನಿಯಸ್ ಪಬ್ಲಿಕ್ ಶಾಲೆ ಕಾರ್ಯದರ್ಶಿಗಳಾದ   ನಾಗರಾಜ ಚಿಲವಾಡಗಿಯವರು ಸ್ವಾಮಿವಿವೇಕಾನಂದರ ವ್ಯಕ್ತಿಗಳ ವ್ಯಕ್ತಿತ್ವವನ್ನು ಬೆಳೆಸಿಕೊಂಡ ದೇಶಕ್ಕೆ ಒಳ್ಳೆಯ ಪ್ರಜೆಯಾಗಬೇಕು, ನಮ್ಮ ಶಾಲೆಯಿಂದ ಒಬ್ಬಬರು ಸ್ವಾಮಿವಿವೇಕಾನಂದ, ಸುಭಾಷಚಂದ್ರ ಭೋಸ್, ಮೋದಿಯಂತಹ ವ್ಯಕ್ತಿಗಳು ಹೊರಬರಲಿ ಎಂದು ಮಾತನಾಡುತ್ತಿದ್ದರು. ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ನೀಲಮ್ಮ ಕೆ. ಸರ್ವಿ ಇವರು ಗುರಿ, ಸಮಯ, ಓದು ಇವುಗಳ ಕುರಿತು ತಿಳಿಸಿದರು ಸ್ವಾಮಿವಿವೇಕಾನಂದರ ಹೇಳಿಕೆಗಳನ್ನು ಈ ಸಂದರ್ಭದಲ್ಲಿ ಮೆಲಕು ಹಾಕಿದರು ಏಳಿ ಏದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ನಿಮ್ಮ ಏಳಿಗೆಗೆ ನಿವೇ ಶಿಲ್ಪಿಗಳು
ಮುದ್ದಮಕ್ಕಳಾದ ರಿಂಕುಕುಮಾರಿ ಮತ್ತು ಪ್ರತಿಭಾ ಪಾಟೀಲ್ ಅವರಿಂಧ ಸ್ವಾಮಿವಿವೇಕಾನಂದರ ಪರಿಚಯವನ್ನು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಶಿಕ್ಷಕರಾದ ಶ್ರೀಮತಿ ನೇತ್ರಾವತಿ ಚನ್ನಯ್ಯ ನಿರೂಪಿಸಿದರು  ಶ್ರೀಮತಿ ವಿನುತಾ ಸ್ವಾಗತಿಸಿದರು ಶ್ರೀಮತಿ ಅರುಣಾ ವಂದಿಸಿದರು ಪವಿತ್ರಾ ಇತರರು ಉಪಸ್ಥಿರಿದ್ದರು.

Advertisement

0 comments:

Post a Comment

 
Top