PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ : ಸರಕಾರಿ ಪದವಿಪೂರ್ವ ಕಾಲೇಜ ಬಾಗ್ಯನಗರದಲ್ಲಿ ದಿನಾಂಕ ೦೨-೦೧-೨೦೧೫ ರಂದು ನಡೆದಂತಹ ಆರ್.ಎಮ್.ಎಸ್. ಯೋಜನಾ ಅಡಿಯಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಬಾಲಕಿಯರಿಗೆ ಕರಾಟೆ ತರಬೇತಿ ಕಾರ್ಯಕ್ರಮವನ್ನು ದೈಹಿಕ ಶಿಕ್ಷಕರಾದ ಸೂದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಸಿಗುವಂತ ಸೌಲಬ್ಯಗಳು ಸರಕಾರೇತರ ಶಾಲೆಗಳಲ್ಲಿ ಲಬ್ಯವಿಲ್ಲ. ಏಕೆಂದರೆ ಪ್ರತಿ ವರ್ಷ ಸರಕಾರ ವಿಶೇಷ ಕಾರ್ಯಕ್ರಮ ನೀಡುವುದರಿಂದ ವಿದ್ಯಾರ್ಥಿನಿಯರ ಆಸಕ್ತಿ ಹೆಚ್ಚಿಸುತ್ತದೆ. ಹಾಘೆ ೨೦೧೪-೧೫ ನೇ ಸಾಲಿನಲ್ಲಿ ಆರ್.ಎಮ್.ಎಸ್. ಯೋಜನಾ ಅಡಿಯಲ್ಲಿ ವಿದ್ಯಾರ್ಥಿನಿಯರ ಆಸಕ್ತಿಯಿಂದ ಕರಾಟೆ ತರಬೇತಿಯನ್ನು ಜಾರಿಗೆ ತಂದಿದೆ. ಅದರ ಉಪಯೋಗವನ್ನು ಎಲ್ಲರೂ ಸರಿಯಾಗಿ ಬಳಿಸಿಕೊಳ್ಳಬೇಕು ಎಂದು ಹೇಳಿದರು. 
ಉಪ ಪ್ರಾಚಾರ್ಯರಾದ ಸುರಂದ್ರಗೌಡರ ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಹೊರತೆಗೆಯುವಲ್ಲಿ ಇದು ಸೂಕ್ತ ವೇದಿಕೆ ಎಂದರು. ಈ ಸಂದರ್ಬದಲ್ಲಿ ಕರಾಟೆ ತರಬೇತುದಾರ ರಾಘವೇಂದ್ರ ಅರಕೇರಿ ಶಾಲೆಯ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಿದರು. 

Advertisement

0 comments:

Post a Comment

 
Top