PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ: ಶಿಕ್ಷಕ ಎಲ್ಲಾ ವಿದ್ಯಾರ್ಥಿಗಳಿಗೆ ಒಂದೇರೀತಿ ಬೋಧಿಸಿದರೂ ಅದರಲ್ಲಿ ರ‍್ಯಾಂಕ್, ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಪಡೆಯುವ ವಿದ್ಯಾರ್ಥಿಗಳಂತೆ ಗುರು ಎಲ್ಲರಿಗೂ ಭೇದವಿಲ್ಲದೆ ಒಂದೇರೀತಿ ಉಪದೇಶಿಸುತ್ತಾನಾದರೂ ತಿಳಿಯುವ ಶಿಷ್ಯರಲ್ಲಿ ಭೇದ ಉಂಟಾಗುತ್ತದೆ. ದದೇಗಲ್ ಸಿದ್ದಾರೂಢಮಠದ ಆತ್ಮಾನಂದ ಸ್ವಾಮಿಗಳು ನುಡಿದರು.
ಭಾಗ್ಯನಗರದ ಸದಾನಂದಸ್ವಾಮಿಗಳ ಜ್ಞಾನಯೋಗಾಶ್ರಮದಿಂದ ಜ.೦೭ ರಂದು ಸದ್ಗುರು ಲಕ್ಷ್ಮಪ್ಪದೇವರಕೊಳ್ಳದವರ ೧೫ನೇ ಪುಣ್ಯಾರಾಧನೆ ನಿಮಿತ್ಯ ಏರ್ಪಡಿಸಿದ ಸತ್ಸಂಗ ಸಭೆಯ ಸಾನ್ನಿಧ್ಯವಹಿಸಿದ ಅವರು ಗುರೂಪದೇಶದಲ್ಲಿ ಭೇದವಿಲ್ಲ. ಆತ ಕರುಣಾಳು ಎಲ್ಲಾ ಜೀವರನ್ನು ಉದ್ಧರಿಸುವ ಬಯಕೆ ಉಳ್ಳಾತ ಎಲ್ಲರನ್ನೂ ಸಮಾನವಾಗಿ ಕಾಣುತ್ತಾನೆ. ಆದರೆ ತಿಳುವಳಿಕೆಯ ಹೆಚ್ಚು ಕಡಿಮೆಯಿಂದ ಶಿಷ್ಯರು ಉತ್ತಮ ಕನಿಷ್ಠರೆಂದು ಗುರುತಿಸಿಕೊಳ್ಳುತ್ತಾರೆ. ಜ್ಞಾನವಿಲ್ಲದೆ ಯಾರ ಉದ್ಧಾರವೂ ಆಗಲಾರದೆಂದು ಹೇಳಿದರು.
ನಂಬು ಜ್ಞಾನವನೇ ಎನ್ನುವ ವಿಷಯ ಕುರಿತು ನಡೆದ ಸತ್ಸಂಗ ಸಭೆಯಲ್ಲಿ ಸಾಹಿತಿ ವೀರಣ್ಣ ಹುರಕಡ್ಲಿ ಅಜ್ಜೇಶ್ವರ ಮಠದ ವೀರಣ್ಣ ನಂದ್ಯಾಲ, ಮತ್ತು ಮಾತೋಶ್ರೀ ಗಂಗಾಮಾತೆ ಮಾತನಾಡಿದರು. ಜ್ಞಾನಯೋಗಾಶ್ರಮದ ವಿಠಪ್ಪ ಗೋರಂಟ್ಲಿಯವರು ಅಧ್ಯಕ್ಷತೆವಹಿಸಿದ್ದರು, ನಾಗಪ್ಪ ಸಾಳೇರ, ನಾರಾಯಣಪ್ಪ ಬೆಟಗೇರಿ, ಶೇಖರಪ್ಪ ಶೇಡ್ಮಿ, ನಾರಾಯಣಗೌಡಸ್ವಾಗಿ, ಕಿನ್ನಾಳಿನ ಚಂದ್ರಪ್ಪ ಸಿರಿಗೆರಿ ನಾರಾಯಣಪ್ಪ ಪರಗಿ, ಹೋಸಪೇಟೆಯ ಕೃಷ್ಣಪ್ಪ ಮೋನಿ, ಮುಂತಾದ ನೂರಾರು ಭಕ್ತರು ಪಾಲ್ಗೊಂಡಿದ್ದರು. ನಂತರ ಪ್ರಸಾದ ವಿತರಿಸಲಾಯಿತು.

Advertisement

0 comments:

Post a Comment

 
Top