ದಿನಾಂಕ ೦೧-೧೨-೨೦೧೪ ರಂದು ರಾತ್ರಿ ೯-೦೦ ಗಂಟೆಯ ಸುಮಾರಿಗೆ ಉಪ್ಪಾರ ಓಣಿ ಹಿರೇಜಂತಕಲ್ ಗಂಗಾವತಿಯಲ್ಲಿ ಯಂಕಪ್ಪ ತಂದೆ ಮೂಕಪ್ಪ ವಯ ೩೮ ವರ್ಷ ಜಾ: ಉಪ್ಪಾರ ಸಾ: ಉಪ್ಪಾರ ಓಣಿ ಹಿರೇಜಂತಕಲ್, ಗಂಗಾವತಿ ಇತನಿಗೆ ೦೧] ಸಂಗಯ್ಯ ತಂದೆ ಮಂಠಯ್ಯಸ್ವಾಮಿ. ೦೨] ಅಮರೇಶ ತಂದೆ ಅಮರಪ್ಪ. ೦೩] ಜಗದೀಶ ತಂದೆ ಯಂಕಪ್ಪ. ೦೪] ವಿರೇಶ ತಂದೆ ಯಂಕಪ್ಪ. ೦೫] ಸಂಗಮೇಶ ತಂದೆ ಯಂಕಪ್ಪ. ಹಾಗೂ ಸಲಿಂ ತಂದೆ ಕಾಸಿಂಸಾಬ ಸಾ: ಗಂಗಾವತಿ ರವರು ಕೈಯಿಂದ ಹಾಗೂ ಕಲ್ಲಿನಿಂದ ಹಲ್ಲೆ ಮಾಡಿದ್ದರಿಂದ ಯಂಕಪ್ಪ ಇತನು ಚಿಕಿತ್ಸೆಗಾಗಿ ಗಂಗಾವತಿಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದಾಗ ರಾತ್ರಿ ೧೦-೦೦ ಗಂಟೆಯ ಸುಮಾರಿಗೆ ಮರಣ ಹೊಂದಿದ ಬಗ್ಗೆ ದಿನಾಂಕ ೦೧-೧೨-೨೦೧೪ ರಂದು ರಾತ್ರಿ ೦೦-೩೦ ಗಂಟೆಗೆ ಗಂಗಾವತಿ ನಗರ ಠಾಣೆಯಲ್ಲಿ ಗುನ್ನೆ ನಂ. ೨೬೧/೧೪ ಕಲಂ. ೧೪೩, ೧೪೭, ೧೪೮, ೩೨೩, ೩೨೪, ೩೦೨, ೫೦೪, ೫೦೬ ಸಹಿತ ೧೪೯ ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ನಂತರ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಆರೋಪಿತರಾದ ೦೧] ಸಂಗಯ್ಯ ತಂದೆ ಮಂಠಯ್ಯಸ್ವಾಮಿ ಸೊಪ್ಪಿನಮಠ ವಯ ೨೯ ಜಾ:ಜಂಗಮ ಉ: ಕೂಲಿ ಕೆಲಸ ಸಾ: ಸ್ವಾಗತ ಮಿಲ್ ಹತ್ತಿರ ಹಿರೇಜಂತಕಲ್, ಗಂಗಾವತಿ. ೦೨] ಅಮರೇಶ ತಂದೆ ಅಮರಪ್ಪ ಹಸರೆಡ್ಡಿ ವಯ ೨೭ ವರ್ಷ ಜಾ: ಲಿಂಗಾಯತ ಉ: ಪೈಪ್ ಲೈನ್ ಕೆಲಸ ಸಾ: ಸ್ವಾಗತ್ ಮಿಲ್ ಹತ್ತಿರ ಹಿರೇಜಂತಕಲ್, ಗಂಗಾವತಿ. ೦೩] ಜಗದೀಶ ತಂದೆ ಯಂಕಪ್ಪ ಹಸರೆಡ್ಡಿ ವಯ ೨೩ ವರ್ಷ ಜಾ: ಲಿಂಗಾಯತ ಉ: ಖಾಸಗಿ ಗುಮಾಸ್ತ ಸಾ: ಕನ್ನಿಕಾಪರಮೇಶ್ವರಿ ಗುಡಿ ಹಿಂದುಗಡೆಗೆ ಹಿರೇಜಂತಕಲ್, ಗಂಗಾವತಿ. ೦೪]ವಿರೇಶ ತಂದೆ ಯಂಕಪ್ಪ ಹಸೆರೆಡ್ಡಿ ವಯ ೨೭ ವರ್ಷ ಜಾ: ಲಿಂಗಾಯತ ಉ: ಖಾಸಗಿ ಕೆಲಸ ಸಾ: ಕನ್ನಿಕಾಪರಮೇಶ್ವರಿ ಗುಡಿ ಹಿಂದುಗಡೆಗೆ ಹಿರೇಜಂತಕಲ್, ಗಂಗಾವತಿ. ೦೫] ಸಂಗಮೇಶ ತಂದೆ ಯಂಕಪ್ಪ ಹಸರೆಡ್ಡಿ ವಯ ೨೬ ವರ್ಷ ಜಾ: ಲಿಂಗಾಯತ ಉ: ಫ್ಲಂಬಿಂಗ್ ಕೆಲಸ ಸಾ: ಕನ್ನಿಕಾಪರಮೇಶ್ವರಿ ಗುಡಿ ಹಿಂದುಗಡೆಗೆ ಹಿರೇಜಂತಕಲ್, ಗಂಗಾವತಿ ೦೬] ಸಲಿಂ ತಂದೆ ಕಾಜಾಸಾಬ ವಯ ೨೨ ವರ್ಷ ಜಾ: ಮುಸ್ಲಿಂ ಉ: ಪೈಪಲೈನ್ ಕೆಲಸ ಸಾ: ಕನ್ನಿಕಾಪರಮೇಶ್ವರಿ ಗುಡಿ ಹಿಂದುಗಡೆಗೆ ಹಿರೇಜಂತಕಲ್, ಗಂಗಾವತಿ. ಇವರನ್ನು ಇಂದು ದಿನಾಂಕ ೦೧-೧೨-೨೦೧೪ ರಂದು ಮಧ್ಯಾಹ್ನ ೨-೦೦ ಗಂಟೆಗೆ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಇರುತ್ತದೆ. ತನಿಖೆಯು ಪ್ರಗತಿಯಲ್ಲಿದೆ.
0 comments:
Post a Comment