PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ,ಡಿ,೦೩: ನಗರದ ಖ್ಯಾತ ಸಂಗಿತ ಕಲಾವಿದ ಹನುಮಂತರಾವ್ ಬಂಡಿ ರವರ  ಸ್ಮರಣಾರ್ಥ ೪ನೇ ವರ್ಷದ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಶ್ರೀಶಾರದಾ ಸಂಗೀತ ಮತ್ತು ಕಲಾ ಶಿಕ್ಷಣ ಸಂಸ್ಥೆ ಕಿನ್ನಾಳ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ  ಡಿ.೧೧ ರ ಗುರುವಾರ ಶ್ರೀರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
    ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಸಂಗೀತ ಕಲಾವಿದರುಗಳಾದ ಶ್ರಿಮತಿ ಸಂಗೀತಾ ಕಟ್ಟಿ(ಕುಲಕರ್ಣಿ), ಸುಪ್ರಸಿದ್ಧ ತಬಲಾವಾದಕರಾದ ಡಾ. ರವಿಕಿರಣ ನಾಕೋಡ್, ಹಾರ‍್ಮೋನಿಯಂ ಕಲಾವಿದ ರವೀಂದ್ರ ಕಾಟೋಟಿ, ಜನಪದ ಸಂಗೀತ ಕಲಾವಿದ ಕು.ವಿನಾಯಕ ಹೆಚ್.ಕಿನ್ನಾಳ, ಸುಮಗ ಸಂಗೀತ ಕಲಾವಿದರುಗಳಾದ ಕು.ಸುಧಾ.ಆರ್.ಅಡವಿ, ಕು.ಪಲ್ಲವಿ.ಎ.ಗಿಣಿಗೇರಿ ಮತ್ತು ತಾಳವಾಧ್ಯ ಕಲಾವಿದ ಕೃಷ್ಣ ಸೊರಟೂರು ಅವರುಗಳು ಕಾರ್ಯಕ್ರಮವನ್ನು ನೀಡುವರು.
    ಕೊಪ್ಪಳದ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮ ಶ್ರೀಚೈತನ್ಯಾನಂದ ಸ್ವಾಮಿಜೀ ಅವರು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸುವರು. ಶಾಸಕ ರಾಘವೇಂದ್ರ ಹಿಟ್ನಾಳ ಕಾರ್ಯಕ್ರಮ ಉದ್ಘಾಟಿಸುವರು, ಅಧ್ಯಕ್ಷತೆಯನ್ನು ನಗರಸಭೆಯ ಅಧ್ಯಕ್ಷೆ ಲತಾ ವೀರಣ್ಣ ಸಂಡೂರ ವಹಿಸುವರು, ಸಂಸದ ಸಂಗಣ್ಣ ಕರಡಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಮರೇಶ ಕುಳಗಿ, ನಗರಸಭೆಯ ಉಪಾಧ್ಯಕ್ಷ ಅಮ್ಜದ ಪಟೇಲ್, ರಂಗನಾಥಾಚಾರ್ ಹುಲಗಿ, ಹಿರಿಯ ವೈದ್ಯ ಕೆ.ಜಿ.ಕುಲಕರ್ಣಿ, ನ್ಯಾಯವಾದಿ ವಿ.ಎಂ.ಭೂಸನೂರಮಠ, ಸಹಾಯಕ್  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೊಟ್ರಪ್ಪ ಚೋರನೂರ್, ವಾರ್ತಾಧಿಕಾರಿ ಬಿ.ವಿ.ತುಕಾರಾಂ, ನ್ಯಾಯವಾದಿ ರಾಘವೇಂದ್ರ ಪಾನಘಂಟಿ, ಹಿರಿಯ ಸಂಗೀತ ಕಲಾವಿದ ವಾಜೇಂದ್ರಾಚಾರ್ ಜೋಶಿ ಹನುಮಸಾಗರ ಮತ್ತು ಹಿರಿಯ ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡರು ಮುಖ್ಯಅಥಿತಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥತರಿರುವರೆಂದು  ಶ್ರೀ ಶಾರದಾ ಸಂಗೀತ ಮತ್ತು ಕಲಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಲಚ್ಚಣ್ಣ ಹಳಪೇಟ ಕಿನ್ನಾಳ  ತಿಳಿಸಿದ್ದಾರೆ.

Advertisement

0 comments:

Post a Comment

 
Top