PLEASE LOGIN TO KANNADANET.COM FOR REGULAR NEWS-UPDATES




 ಕೊಪ್ಪಳ : ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ನಡೆಯಲಿರುವ ಮಹಾದಾಸೋಹವು ಗವಿಮಠದ ಜಾತ್ರಾ ವೈಶಿಷ್ಟ್ಯತೆಗಳಲ್ಲೊಂದು.  ಜನವರಿ ೦೭ ರಂದು ಜರುಗಲಿರುವ ಮಹಾರಥೋತ್ಸವದ ದಿನದ ಅಂದಿನಿಂದ ಹಿಡಿದು ಅಮವಾಸ್ಯೆಯವರೆಗೂ ನಿರಂತರವಾಗಿ ನಿತ್ಯ ಮುಂಜಾನೆ, ಸಾಯಂಕಾಲ ಹಾಗೂ ರಾತ್ರಿಯವರೆಗೂ ಮಹಾದಾಸೋಹವು ಜರುಗುವದು. ಈಗಾಗಲೇ ಮಹಾ ದಾಸೋಹ ಮಂಟಪದಲ್ಲಿ  ಪ್ರಸಾದ ಸ್ವೀಕರಿಸುವ ಬೃಹತ್ ವಿಶಾಲ ಸ್ಥಳವೂ ಭರದಿಂದ ಸಿದ್ದಗೊಳ್ಳುತ್ತಿದೆ. ಈ ಸಾರೆ ಮಹಾದಾಸೋಹ ಮಂಟಪದ  ಒಳಗೆ ಏಕಕಾಲಕ್ಕೆ ಸುಮಾರು ೬೦೦೦ ಕ್ಕಿಂತಲೂ ಹೆಚ್ಚು ಭಕ್ತರು ಪ್ರಸಾದ ಸ್ವಿಕರಿಸಬಸಹುದು. ಮಹಿಳೆಯರಿಗಾಗಿ ಈ ಸಾರೆಯು ಕಳೆದ ಸಲದಂತೆ ಪ್ರತ್ಯೇಕವಾಗಿಯೇ ವ್ಯವಸ್ಥೆ ಮಾಡಲಾಗಿದೆ.                    ಪ್ರಸಾದ ತಯಾರಿಸುವ ಸ್ಥಳಗಳಲ್ಲಿ ಬೃಹತ್  ವಿಶೇಷ ಒಲೆಗಳನ್ನು ನಿರ್ಮಿಸುವ ಕಾರ್ಯ ನಡೆಯುತ್ತಲಿದೆ ಅಲ್ಲಿ ವಿಶೇಷ ಒಲೆಗಳನ್ನು ನಿರ್ಮಿಸಿ ಅದರ ಮೇಲೆ ಬೃಹತ್ ಕೊಪ್ಪರಿಕೆ, ಸಾಂಭಾರು ಮಾಡಲಿಕ್ಕಾಗಿ ಆಳೆತ್ತರದ ಕೊಳಗಗಳು, ಸಿಹಿಮಾದಲಿಯನ್ನು ಸಂಗ್ರಹಮಾಡಲು ದೊಡ್ಡ ಕಟ್ಟೆ,  ಬೃಹತ್ ಪಾಕ ಶಾಲೆಗಳು, ಧಾನ್ಯ ಸಂಗ್ರಹ ಕೋಣೆ, ಕಾಯಿಪಲ್ಯ, ರೊಟ್ಟಿ ಸಂಗ್ರಹ ಸ್ಥಳ ಇವುಗನ್ನು  ಆಯೋಜಿಸಲಾಗಿದೆ.  ಕುಡಿಯುವ ನೀರಿನ ನಳಗಳು, ಕೊಪ್ಪರಿಕೆಗಳು, ಕೊಳಗಗಳು, ತಳ್ಳುಬಂಡಿ, ತಟ್ಟೆಗಳು ಹೀಗೆ  ದಾಸೋಹಕ್ಕಾಗಿ ಬೇಕಾಗುವ ವಿವಿಧ ಪರಿಕರಗಳನ್ನು ಸಂಗ್ರಹಿಸಲಾಗಿದೆ. ಮಹಾದಾಸೋಹದ ಓಳಗಡೆ ಸಾಲು ಸಾಲು ಹಸಿರಿನ ಗಿಡಗಳು ಭಕ್ತರಿಗೆ ನೆರಳನ್ನು ನೀಡುವದರ ಜೊತೆಗೆ ಬಣ್ಣ ಬಣ್ಣದ ಹೂವುಗಳು ಭಕ್ತರನ್ನು ಆಕರ್ಷಿಸಲಿವೆ.
koppal-jatre-2015

Advertisement

0 comments:

Post a Comment

 
Top