PLEASE LOGIN TO KANNADANET.COM FOR REGULAR NEWS-UPDATES

 ಕರ್ನಾಟಕ ಜಾನಪದ ಪರಿಷತ್ತು ನಾಡೋಜ ಎಚ್.ಎಲ್.ನಾಗೇಗೌಡರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಜಾನಪದ ಕಲಾವಿದರಿಗೆ ಜಾನಪದ ಲೋಕ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. 
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಕೊಪ್ಪಳ ಜಿಲ್ಲೆಯ ಜಾನಪದ ಕಲಾವಿದರು ತಮ್ಮ ವೈಯಕ್ತಿಕ ವಿವರ, ಕಲೆಯಲ್ಲಿ ಪಡೆದ ಪರಿಣಿತಿ, ಪ್ರಶಸ್ತಿ-ಪುರಸ್ಕಾರ, ಪೂರಕವಾದ ಛಾಯಾಚಿತ್ರ, ಪತ್ರಿಕಾ ತುಣುಕುಗಳು ಹಾಗೂ ವಯೋಮಿತಿಯ ದೃಢೀಕರಣ, ಇತರೆ ಅಗತ್ಯ ದಾಖಲೆಗಳೊಂದಿಗೆ ಇತ್ತಿಚಿನ ಭಾವಚಿತ್ರದೊಂದಿಗೆ ಜಾನಪದ ಲೋಕ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಲಕೊಟೆಯ ಮೇಲ್ಬಗದಲ್ಲಿ ಜಾನಪದ ಲೋಕ ಪ್ರಶಸ್ತಿಗಾಗಿ ಅರ್ಜಿ ಎಂದು ನಮೂದಿಸಿ ಬಸವರಾಜ ಆಕಳವಾಡಿ ಜಿಲ್ಲಾಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್ತು, ಸಿರಿಗಂಧ, ವರ್ಣೇಕರ ಬಡಾವಣೆ, ವಿವೇಕಾನಂದ ಶಾಲೆ ಹಿಂಭಾಗ, ಕೊಪ್ಪಳ - ೫೮೩೨೩೧ ಇವರಿಗೆ ಡಿಸೆಂಬರ್ ೨೮ರ ಒಳಗಾಗಿ ತಲುಪುವಂತೆ ಕಳುಹಿಸಬೇಕು.
ತಡವಾಗಿ ಬಂದ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ. ೫೦ ವರ್ಷ ಮೇಲ್ಪಟ್ಟ ಕಲಾವಿದರಿಗೆ ಆದ್ಯತೆ ನೀಡಲಾಗುವುದು. ಪ್ರಶಸ್ತಿಯ ಆಯ್ಕೆ ಕೇಂದ್ರ ಕಚೇರಿಯ ನಿರ್ಧಾರ ಅಂತಿಮವಾಗಿರುತ್ತದೆ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಬಸವರಾಜ ಆಕಳವಾಡಿ   ತಿಳಿಸಿದ್ದಾರೆ.

Advertisement

0 comments:

Post a Comment

 
Top