PLEASE LOGIN TO KANNADANET.COM FOR REGULAR NEWS-UPDATES

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು ಕೊಪ್ಪಳ ಜಿಲ್ಲೆ ಘಟಕದ ನೂತನ ಪದಾಧಿಕಾರಿಗಳಾಗಿ.
ದಿನಾಂಕ : ೧೭/೧೨/೨೦೧೪ ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ವಿಜಯೋತ್ಸವವನ್ನು ಆಚರಿಸಲಾಯಿತು. 
ಜಿಲ್ಲಾಧ್ಯಕ್ಷರಾಗಿ ಶರಣೆಗೌಡ ಉಪಾಧ್ಯಕ್ಷರಾಗಿ ಮಂಜುನಾಥ ಜಿ. ಮಹಿಳಾ ಉಪಾಧ್ಯಕ್ಷಿಯಾಗಿ ಶ್ರೀಮತಿ ಚೌಡಮ್ಮ ಬೆಣ್ಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಘಿ ಶರಣಬಸಗೌಡ ಪಾಟೀಲ, ಖಜಾಂಚಿಗಳಾಗಿ ಅಸೂಟಿ ಮಹೇಶ, ಸಹಕಾರ್ಯದರ್ಶಿಗಳಾಗಿ ನಿಂಗಪ್ಪ ಗುನ್ನಾಳ, ಮಹಿಳಾ ಸಹ ಕಾರ್ಯದರ್ಶಿಯಾಗಿ ಶ್ರೀಮತಿ ಸುಮಂಗಲಾ ಹುಚ್ಚಯ್ಯನಮಠ, ಸಂಘಟನಾ ಕಾರ್ಯದರ್ಶಿ ಪಾಂಡುರಂಗ ಮಹಿಳಾ ಸಂಗಟನಾ ಕಾರ್ಯದರ್ಶಿಯಾಗಿ ಕೆ. ವಿರಮಹೇಶ್ವರಿಯವರು ಆಯ್ಕೆಯಾಗಿದ್ದಾರೆ. 
ಇದೇ ಸಂದರ್ಭದಲ್ಲಿ ಮಾತನಾಡಿದ ತಂಡದ ನಾಯಕರಾದ ಶಂಬುಲಿಂಗನಗೌಡ ಪಾಟೀಲರು ಶಿಕ್ಷಕರಿಗಾಗಿ ಗುರುಭವನ ನಿರ್ಮಾಣ ಹಾಗೂ ಶಿಕ್ಷಕರ ನೋವು ನಲಿವುಗಳಿಗೆ ಸ್ಪಂದಿಸುವುದರೊಂದಿಗೆ ಶಿಕ್ಷಣ ಇಲಾಖೆಯ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಎಲ್ಲಾ ಪದಾಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕೆಂದು ತಿಳಿಸಿದರು. 
ನೂತನ ಉಪಾಧ್ಯಕ್ಷ ಮಂಜುನಾಥ ಬಿ ಮಾತನಾಡಿ ಜಿಲ್ಲಾ ಘಟಕಕ್ಕೆ ಆಯ್ಕೆ ಮಾಡಿದ ತಂಡದ ಗುರು ಹಿರಿಯರಿಗೂ ಜಿಲ್ಲೆಯ ಸಮಸ್ತ ಶಿಕ್ಷಕ ವೃಂದಕ್ಕೆ ಅಭಿನಂದನೆ ಸಲ್ಲಿಸಿದರು. 
ಈ ಸಂದರ್ಬದಲ್ಲಿ ಸುರೇಶ ಅರಕೇರಿ, ಅಮರೇಶ ಮೈಲಾಪೂರ, ಗಂಗಣ್ಣ, ಮಹೇಶ ಸಬರದ, ಸಂಗಪ್ಪ ಅಂಗಡಿ, ಬಸನಗೌಡ್ರ, ಮೈಲಾರಗೌಡ, ಉಪಸ್ಥಿತರಿದ್ದru.

Advertisement

0 comments:

Post a Comment

 
Top