PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ,ಡಿ.೩೧: ತಾಲೂಕಿನ ಚಿಕ್ಕಬಗನಾಳ ಗ್ರಾಮದ ೨ನೇ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚಿಗೆ ತಾಯಂದಿರ ಚಾವಡಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾ.ಪಂ. ಸದಸ್ಯೆ ಲಲಿತಾ ಬಸವರಾಜ ಬಂಗಾಳಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪುರುಷ ಆರೋಗ್ಯ ಸಹಾಯಕರಾದ ಎಸ್.ಎಂ.ಕಂಠಿಮಠ ಅವರು ಮಾತನಾಡಿ, ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ಬಗ್ಗೆ ತಿಳಿಸಿ ತಾಯಿ ಹಾಗೂ ಮಗುವಿನ ನಡುವಿನ ಸಂಬಂಧ ಹೇಗಿರಬೇಕು, ಒಬ್ಬ ಗರ್ಭಿಣಿ ಮಹಿಳೆ ತನ್ನ ಮಗುವನ್ನು ಹೇಗೆ ಕಾಪಾಡಿಕೊಳ್ಳಬೇಕು. ಮಗುವಿನ ಬೆಳವಣಿಗೆಗೆ ಬೇಕಾದ ಪೌಷ್ಠಿಕಾಂಶದ ಬಗ್ಗೆ ತಿಳಿಸಿದರು.
ಕೆಹೆಚ್‌ಪಿಟಿ ಬಸವರಾಜ ಅವರು ಗರ್ಭಿಣಿ ತಾಯಂದಿರ ಕುರಿತು ಜನಪದ ಗೀತೆಯನ್ನು ಹಾಡಿದರು. ಸಮಾಜ ಸೇವಕರಾದ ಪ್ರಭುರಾಜ ಬಡಿಗೇರ ಅವರು ತಾಯಂದಿರ ಆರೋಗ್ಯದ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯೆ ಕನಕವ್ವ ಕಂಬಣ್ಣ ತಳವಾರ, ಅಂಗನವಾಡಿ ಕಾರ್ಯಕರ್ತೆ ಜಿ.ಉಷಾ, ಸಹಾಯಕಿ ಮಾಬವ್ವ ನದಾಫ, ಆಶಾ ಪೆಷಾಲಿಟಿ ಶಮೀಮ ಬೇಗಂ, ಆಶಾ ಕಾರ್ಯಕರ್ತೆಯರಾದ ಮಮತಾಜ್ ಬೇಗಂ ನದಾಫ್, ಹನುಮವ್ವ ಸಕ್ಕುಬಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top