ಡಿಸೆಂಬರ್ ತಿಂಗಳಿನಲ್ಲಿ ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ನಡೆಯುವ ರಾಜ್ಯಮಟ್ಟದ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದಲ್ಲಿ. ಕೊಪ್ಪಳ ಜಿಲ್ಲೆಯ ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯಿಂದ ಭಾಗ್ಯನಗರದ ಶ್ರೀ ಗೌರಿ ಶಂಕರ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ (ರಿ)ಯ ಸರ್ವ
ಸದಸ್ಯರನ್ನು ಆಯ್ಕೆ ಮಾಡಲಾಗಿದೆ.
ಜನಪದ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಹ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಸ್ಪರ್ದೆಗಳಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಜನಪದ ನೃತ್ಯ(ದೇವಿ ಕುಣಿತ) ದಲ್ಲಿ ಪ್ರಥಮ ಸ್ಥಾನ ಪಡೆದು ಹಾಗೂ ಜನಪದ ಗೀತೆಯಲ್ಲಿ ದ್ವೀತೀಯ ಸ್ಥಾನ ಪಡೆದು ಸಂಘದ ಹಿರಿಮೆಯನ್ನು ಹೆಚ್ಚಿಸಿರುವ ತಂಡವು ವಿಭಾಗ ಮಟ್ಟದ ಯುವ ಜನ ಮೇಳದಲ್ಲಿ ಪ್ರಥಮ ಸ್ಥಾನ ಪಡೆದ ಸಂಘವು ಮಂಗಳೂರಿನ ವಿಠಲ ಗ್ರಾಮದಲ್ಲಿ ನಡೆಯುವ ರಾಜ್ಯಮಟ್ಟದ ಯುವಜನಮೇಳದಲ್ಲಿ ನಡೆಯು ರಾಜ್ಯ ಮಟ್ಟದ ಯುವ ಜನಮೇಕ್ಕೂ ಆಯ್ಕೆ ಯಾಗಿದ್ದಾರೆ. ತಂಡದ ಸಾಧನೆಯನ್ನು ಸಂಘದ ಅಧ್ಯಕ್ಷರಾದ ಸುಭಾಸ ಹೆಚ್. ಕಲಾಲ ಅಭಿನಂದಿಸಿವುದರ ಜೊತೆಗೆ ಕೊಪ್ಪಳ ಜಿಲ್ಲಾ ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ ಅವಕಾಶ ನೀಡಿದ್ದಕ್ಕೆ ಸಂಘದ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
0 comments:
Post a Comment