ದಿನಾಂಕ ೧೩.೧೧.೨೦೧೪ ರಂದು ಕೊಪ್ಪಳ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ತುರ್ತುಸಭೆಯನ್ನು ಜಿಲ್ಲಾ ವಕೀಲರ ಸಂಘದಲ್ಲಿ ಕರೆದು ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳು ಧಾರವಾಡದ ಹೈಕೋರ್ಟ ವ್ಯಾಪ್ತಿಯಲ್ಲಿ ಮುಂದುವರೆಯಬೇಕು. ಯಾವುದೇ ಕಾರಣಕ್ಕೂ ಗುಲ್ಬರ್ಗಾ ಹೈಕೋರ್ಟ ಪೀಠದಲ್ಲಿ ಸೇರಬಾರದು ಅದೇ ರೀತಿಯಾಗಿ ಕೊಪ್ಪಳ ಜಿಲ್ಲೆಯ ಎಲ್ಲಾ ಸಂಘ ಸಮಸ್ಥೆಗಳ, ಜನಪ್ರತಿನಿಧಿಗಳ ಸಭೆ ಕರೆದು ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಸಂಬಂಧಪಟ್ಟ ಕರ್ನಾಟಕ ಸರ್ಕಾರಕ್ಕೆ ಹಾಗೂ ಉಚ್ಛನ್ಯಾಯಲಯ ಬೆಂಗಳೂರು ಮತ್ತು ಕೇಂದ್ರ ಸರಕಾರಕ್ಕೆ ಹಾಗೂ ಸುಪ್ರೀಂಕೋರ್ಟ ಗಮನಕ್ಕೆ ವಿಷಯವನ್ನು ತಂದು ಮನವಿಯನ್ನು ಸಲ್ಲಿಸಲಾಗುವುದು. ಅಂತಹ ಬಹುಮತದಿಂದ ಸಂಘದ ಎಲ್ಲಾ ವಕೀಲರ ಅಭಿಪ್ರಾಯದ ಮೇರಿಗೆ ಗೊತ್ತುವಳಿಗಳನ್ನು ಮಾಡಲಾಯಿತು ಎಂದು ಎ.ವಿ.ಕಣವಿ ಅಧ್ಯಕ್ಷರು ಜಿಲ್ಲಾ ವಕೀಲರ ಸಂಘ ಕೊಪ್ಪಳ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಆರ್.ಹೆಚ್ ಹುಲಗಿ, ಶ್ರೀಮತಿ ಸಂಧ್ಯಾ ಮಾದಿನೂರು, ಈಶ್ವರ ಇಂಗಳಳ್ಳಿ, ಎಮ್.ಸಿ ಸಜ್ಜನ, ಹನುಮಂತರಾವ್, ಪಿ.ಎಲ್.ಇನಾಮತಿ, ಆರ್.ಬಿ ಪತ್ತಾರ, ಚಿದಾನಂದ ಮಾಲೀಪಾಟೀಲ, ಬಿ.ಕೆ ದಾಸರ, ಕೆ.ಹೆಚ್.ಈಳಿಗೇರ, ಆರ್.ಎಸ್ ನಾಯಕ ಇನ್ನೂ ಮುಂತಾದ ವಕೀಲರು ಉಪಸ್ಥಿತರಿದ್ದರು.
0 comments:
Post a Comment