PLEASE LOGIN TO KANNADANET.COM FOR REGULAR NEWS-UPDATES

  ಸೂಕ್ಮ ಜೀವಿಗಳು ಇಲ್ಲದೇ ಯಾವುದೇ ಕ್ರಿಯೆಗಳು ನಡೆಯುವದಿಲ್ಲ. ಈ ಭೂಮಿಯ ಮೇಲೆ ಪ್ರತಿಶತ ೮೦ ರಷ್ಟು ಸೂಕ್ಷ ಜೀವಿಗಳು ಮಹತ್ತರ ಪಾತ್ರವಹಿಸುತ್ತವೆ. ವೈದ್ಯಕೀಯ, ಎಂಜನಿಯರಿಂಗ್ ತಂತ್ರಜ್ಞಾನವು ಮೂಲ ವಿಜ್ಞಾನದಿಂದ ಉಗಮಗೊಂಡಿವೆ. ಇಂದು ಮೈಕ್ರೋಬಯಾಲಜಿ ಕ್ಷೇತ್ರದಲ್ಲಿ  ಗಣನೀಯ ಆವಿಷ್ಕಾರಗಳು ನಡೆಯುತ್ತಿವೆ. ಇದರಿಂದಾಗಿ ಬರಗಾಲದಲ್ಲಿ ಸಸ್ಯಗಳ ರಕ್ಷಣೆ, ಉತ್ಪಾದನೆ,  ಮಾಬಹುದಾಗಿದೆ. ಜೊತೆಗೆ ವಿವಿಧ ಹೊಸ ಹೊಸ ಉಪಯುಕ್ತ ಸಂಶೋಧನೆಯನ್ನು ಕೃಷಿ ಕ್ಷೇತ್ರದಲ್ಲಿ ಕಾಣಬಹುದಾಗಿದೆ. ವಿದ್ಯಾರ್ಥಿಗಳು ಇದರ ಮಹತ್ವ ಅರಿತುಕೊಂಡು ಸಂಶೋಧನೆಯಲ್ಲಿ ತೊಡಗಬೇಕು. ಸರ್ಕಾರ ಅನೇಕ ಶಿಷ್ಯವೇತನಗಳು ಸಂಶೋಧಕರಿಗೆ ನೀಡುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿಕೊಳ್ಳಬೇಕೆಂದು ಪೂಣೆಯ ನ್ಯಾಷನಲ್ ಕೆಮಿಕಲ್ ಲ್ಯಾಬ್ ವಿಜ್ಞಾನಿ ಡಾ.ಸಯ್ಯದ್ ದಸ್ತಗೀರ ಕರೆ ನೀಡಿದರು. ಅವರು ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ಬಿ.ಎಸ್ಸಿ ವಿದ್ಯಾರ್ಥಿಗಳಿಗಾಗಿ ನಡೆದ ಮೂಲ ವಿಜ್ಞಾನದ ಮಹತ್ವ ಈ ವಿಷಯದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಅಧ್ಯಕ್ಷತೆ ಪ್ರಾಚಾರ್ಯ ಎಸ್ ಎಲ್ ಮಾಲಿಪಾಟೀಲ ವಹಿಸಿ ವಿದ್ಯಾರ್ಥಿಗಳ ಸರ್ವತೋಮುಖ ಅಬಿವೃದ್ಧಿಯಲ್ಲಿ ಇಂತಹ ಕಾರ್ಯಕ್ರಮಗಳು ಉಪಯುಕ್ತವೆಂದರು.  ಇದೇ ಸಂದರ್ಭದಲ್ಲಿ ಟಿ.ಸಿ.ಎಸ್ ಕಂಪನಿಗೆ  ಕ್ಯಾಂಪಸ್ ಸಲೆಕ್ಷನ್‌ಗೆ ಆಯ್ಕೆಯಾದ ಸಾಗರ ಸಿ, ಅಂಜುಂ ಎಂ ಇವರನ್ನು ಸನ್ಮಾನಿಸಲಾಯಿತು. ಅತಿಥಿ ಪರಿಚಯ ಪ್ರೊ.ಬಿ.ಡಿ ಕೇಶವನ್, ಪ್ರಾಥನೆ ಸೌಮ್ಯ ಹೂಗಾರ, ಸ್ವಾಗತ ಪ್ರೊ. ಮನೋಹರ ದಾದ್ಮಿ, ವಂದನಾರ್ಪಣೆ ಸಂಕೇತ ಪಾಟೀಲ ನೆರವೇರಿಸಿದರು.

Advertisement

0 comments:

Post a Comment

 
Top