ಕೊಪ್ಪಳ: ರಾಜ್ಯಧಾಧ್ಯಂತ ಸರ್ಕಾರಿ ಪ್ರಥಮ ದರ್ಜೆಕಾಲೇಜುಗಳಲ್ಲಿ ಪೂರ್ಣಕಾಲಿಕ ಉಪನ್ಯಾಸಕರಾಗಿ ಸೇವೆಯಲ್ಲಿರುವವರಿಗೆ ವಾರಕ್ಕೆ ೧೬ ಪಿರೇಡುಗಳ ಬದಲಾಗಿ ೨೨ ಪಿರೇಡುಗಳನ್ನಾಗಿ ಕಾಲೇಜು ಶಿಕ್ಷಣ ಇಲಾಖೆಯು ಪರಿವರ್ತಿಸಿದ್ದೂ ವಿವಿಧ ವಿಷಯಗಳ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಹೊರತಳ್ಳುವಂತಾಗಿದೆ.
ಕಾಲೇಜು ಶಿಕ್ಷಣ ಇಲಾಖೆಯ ಈ ಆದೇಶದಿಂದಾಗಿ ರಾಜ್ಯಾಧ್ಯಂತ ೩-೪ ಸಾವಿರ ಅತಿಥಿ ಉಪನ್ಯಾಸಕರು ಸೇವೆಯಿಂದ ವಜಾಗೊಂಡಿರುತ್ತಾರೆ. ಈಗಾಗಲೇ ೧೦-೧೨ ವರ್ಷ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದಂತವರು ಈ ಅವೈಜ್ಞಾನಿಕ ನೀತಿಯಿಂದಾಗಿ ಸೇವೆಯಿಂದ ಬಿಡುಗಡೆಗೊಂಡಿದ್ದಾರೆ. ಸರ್ಕಾರ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಸ್ಪಂದಿಸಿ ಬೇಡಿಕೆಗಳನ್ನು ಈಡೇರಿಸಲಾರದೇ ದಿಢೀರನೇ ಸೇವೆಯಿಂದ ಬಿಡುಗಡೆ ಮಾಡಿರುವದು ಅತಿಥಿ ಉಪನ್ಯಾಸಕರನ್ನು ಹತ್ತಿಕ್ಕುವ ತಂತ್ರವಾಗಿದೆ. ಕೂಡಲೇ ಸರ್ಕಾರ ಸ್ಪಂದಿಸಿ ಅತಿಥಿ ಉಪನ್ಯಾಸಕರುಗಳ ಸಂಸಾರ ಬೀದಿಗೆ ಬರದಂತೆ ನೋಡಿಕೊಳ್ಳಬೇಕು. ಮತ್ತು ಈ ಆದೇಶ ವಾಪಾಸು ಪಡೆದುಕೊಳ್ಳಬೇಕು.ಇಲ್ಲದಿದ್ದರೆ ಪದವಿಪರೀಕ್ಷೆಗಳನ್ನು ಬಹಿಷ್ಕರಿಸಿ ಕಾಲೇಜುಗಳ ಮುಂದೆ ಉಪವಾಸ ಸತ್ಯಾಗ್ರಹ ಮಾಡಲಾಗುವದೆಂದು ಕೊಪ್ಪಳ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ವೀರಣ್ಣ ಸಜ್ಜನರ ತಿಳಿಸಿದ್ದಾರೆ
0 comments:
Post a Comment