ನಗರದ ಸುನ್ನಿ ಶಾದಿಮಹಲ್ ಕಾರ್ಯಕಾರಿ ಮಂಡಳಿಗೆ ಹಮ್ಮಿಕೊಳ್ಳಲಾಗಿದ್ದ ಚುನಾವಣೆಯನ್ನು ರದ್ದು ಮಾಡಿದ ಚುನಾವಣಾಧಿಕಾರಿ ಕ್ರಮವನ್ನು ಮುಸ್ಲಿಂ ಸಮಾಜದ ಕೆಲ ಮುಖಂಡರು ಖಂಡಿಸಿದ್ದಾರೆ.ನಿಗದಿತ ವೇಳಾಪಟ್ಟಿಯಂತೆ ಜರುಗಬೇಕಾಗಿದ್ದ ಚುನಾವಣೆಯನ್ನು ಕೆಲ ಕಾಂಗ್ರೆಸ್ ಮುಖಂಡರ ಒತ್ತಡಕ್ಕೆ ಮಣಿದು ರದ್ದುಗೊಳಿಸಲಾಗಿದೆ. ಇದರ ವಿರುದ್ದ ಹೋರಾಟ ಮಾಡುವುದಾಗಿ ಸೈಯದ್ ನಾಸೀರ್ ಹೇಳಿದರು. ಅವರು ನಗರದ ಮೀಡಿಯಾ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ನಿಗದಿಪಡಿಸಿದಂತೆ ನಿನ್ನೆ ನಾಮಪತ್ರ ವಾಪಸ್ ತೆಗೆದುಕೊಳ್ಳಲು ಕೊನೆಯ ದಿನಾಂಕವಾಗಿತ್ತು. ಕಣದಲ್ಲಿ 55 ಅಭ್ಯರ್ಥಿಗಳು ಉಳಿದಿದ್ದರು. ಸಂಜೆ ಏಕಾಏಕಿ ಚುನಾವಣಾಧಿಕಾರಿ ಚುನಾವಣೆಯನ್ನು ರದ್ದುಗೊಳಿಸಿರುವುದಾಗಿ ನೋಟಿಸ್ ನ್ನು ಅಂಟಿಸಿದ್ದಾರೆ. ಅವರು ನೀಡುತ್ತಿರುವ ಕಾರಣಗಳು ಸಮರ್ಪಕವಾಗಿಲ್ಲ. ಕಾಂಗ್ರೆಸ್ ನ ಕೆಲ ನಾಯಕರ ಒತ್ತಡಕ್ಕೆ ಮಣಿದು ಈ ಕೆಲಸ ಮಾಡಿದ್ದಾರೆ. ಪಕ್ಷಾತೀತವಾಗಿ ಈ ಚುನಾವಣೆ ನಡೆಯುತ್ತಿದೆ. ಚುನಾವಣಾಧಿಕಾರಿ ತಮ್ಮ ಜವಾಬ್ದಾರಿಯಿಂದ ಓಡಿ ಹೋಗಿದ್ದಾರೆ ಎಂದು ಆರೋಪಿಸಿದರು. ಚುನಾವಣೆಯನ್ನು ಬೇಕಿದ್ದರೆ ಸಕಾರಣ ನೀಡಿ ಮುಂದೂಡಲಿ ಏಕಾಏಕಿ ರದ್ದು ಮಾಡಿರುವ ಕ್ರಮವನ್ನು ಖಂಡಿಸುತ್ತೇವೆ. ನಿಗದಿತ ಸಮಯಕ್ಕೆ ಚುನಾವಣೆ ನಡೆಯದಿದ್ದರೆ ಉಗ್ರ ಹೋರಾಟ ಜೊತೆಗೆ ಕಾನೂನು ಪ್ರಕಾರ ಹೋರಾಟ ಮಾಡುವುದಾಗಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸೈಯದ್ ನಾಸೀರ್ ಹುಸೇನ್, ಪೀರ್ ಸಾಬ ಬೆಳಗಟ್ಟಿ, ಸಮೀರ್ ಹುಸೇನ್, ಜಾಕಿರ್ ಹುಸೇನ್, ಜೀಲಾನ್ ಕಿಲ್ಲೇದಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
0 comments:
Post a Comment