ಕೊಪ್ಪಳ : ಮನುಷ್ಯ ಜೀವನ ದೇವರು ಕೊಟ್ಟಂತಹ ಆಮಂತ್ರಣ ಹುಟ್ಟು ಸಾವಿನ ಮಧ್ಯ ವೈಭವ ಕಾಣುತ್ತದೆ. ಹುಟ್ಟಿದ ಮನುಷ್ಯ ಸಾಯುತ್ತಾನೆ.ಹಚ್ಚಿದ ದೀಪ ಹಾರುತ್ತದೆ. ಕಟ್ಟಿದ ಮನೆ ಬಿಳುತ್ತದೆ. ಅದರ ಆಗೆ ಮನುಷ್ಯನ ಜೀವನ ವೈಭವ ಮತ್ತು ಕ್ಷಣಿಕ ಜೀವನದ ಅನ್ನೊದು ನದಿಯ ಪ್ರವಾಹ ಇದ್ದ ಆಗೆ ಹುಟ್ಟಿನ ದಂಡೆ ಇನ್ನೊಂದು ಮರಣದ ದಂಡೆ ಜೀವನದ ನಡುವೆ ಕಷ್ಟ , ಸುಖ: ಇದ್ದರೆ ಅದುವೇ ಜೀವನ ಎಂದು ಕೊಪ್ಪಳದ ಶ್ರೀ ಮ.ನ.ಪ್ರ.ಸ್ವ.ಜ. ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಗವಿಮಠ ಇವರು ಹೇಳಿದರು.
ಅವರು ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದಲ್ಲಿ ಶ್ರೀ ವೇದಮೂರ್ತಿ ಶ್ರೀಪಾದ ಭಟ್ಟ ಜೋಷಿ ಸ್ಮಾರಕ ಭವನ ಹಾಗೂ ಶಿವಾನಭವ ಉದ್ಘಾಟನಾ ಸಮಾರಂಭದಲ್ಲಿ ಭವನವನ್ನು ಉದ್ಘಾಟಿಸಿ ಆರ್ಶಿವಚನ ನೀಡುತ್ತಾ ಮನುಷ್ಯನ ಜೀವನ ನದಿ ಹರಿದಂತೆ ಹರಿಯುತ್ತಿರಬೇಕು. ನಿಂತು ನೀರು ಕೆಡುತ್ತದೆ, ಕಂತು ಮನುಷ್ಯ ಕೆಡುತ್ತಾನೆ. ಹೃದಯದಲ್ಲಿ ಬಗವಂತ ಪ್ರೇಮವನ್ನು ತುಂಬಿದ್ದಾನೆ. ಹೃದಯದ ಪ್ರೇಮ ಹಂಚಿ ಧಾನಿಗಳಾಗಬೇಕು. ಶ್ರೀಪಾದ ಭಟ್ಟ ಜೋಷಿಯವರು ನಮ್ಮಿಂದ ದೂರವಾದರು ಜನರ ಮಧ್ಯ ಬೆಳಕನ್ನು ಚಲ್ಲಿದ್ದಾರೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂಧು ಹೇಳಿದರು.
ನಂತರ ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ ಮಾತನಾಡಿ ಮನುಷ್ಯ ಜೀವನದಲ್ಲಿ ಶ್ರದ್ದೆ ಛಲ ಇದ್ದರೆ ಏನಾದರು ಸಾಧಿಸಬಹುದು ಅದಕ್ಕಾಗಿ ಮಕ್ಕಳಿಗೆ ಶಿಕ್ಷಣ ಮತ್ತು ಒಳ್ಳೆಯ ಸಂಸ್ಕಾರದ ಅವಶ್ಯಕತೆ ಇದೆ ಎಂಧು ಹೇಳುತ್ತಾ ಶ್ರೀ ಹುಲಿಗೆಮ್ಮಾದೇವಿ ದೇವಸ್ಥಾನದಲ್ಲಿ ನಡೆಯುವ ಶಿವಾನಭವ ಮಂಟಪಕ್ಕೆ ೫ ಲಕ್ಷ ರೂ ಅನುಧಾನವನ್ನು ಕೂಡವುದಾಗಿ ಹೇಳಿದರು. ಬಳಿಕ ಜಿ.ಪಂ ಮಾಜಿ ಅಧ್ಯಕ್ಷ ಹೆಚ್ ಎಲ್ ಹಿರೇಗೌಡ್ರ ಮಾತನಾಡಿ ಗ್ರಾಮದಲ್ಲಿ ಮಧ್ಯಪಾನ ನಿಷೇಧಿಸಿದರೆ ಮಾತ್ರ ಬಡಜನತೆ ಬದುಕಲು ಸಹಾಯವಾಗುತ್ತದೆ. ಆದ್ದರಿಂದ ಇದೇ ವಾರದಲ್ಲಿ ಗ್ರಾಮದ ಸಂಘ ಸಂಸ್ಥೆಗಳು ಒಗ್ಗೂಡಿ ಮಧ್ಯಪಾನವನ್ನು ನಿಷೇದಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಹಿರೇಸಿಂದೋಗಿ ಕಪ್ಪತ್ತ ಮಠದ ಚಿದಾನಂದ ಮಹಾಸ್ವಾಮಿಗಳು ಆರ್ಶೀವಚನ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ಷ.ಬ್ರ.೧೦೮ ಶ್ರೀ ಸಿದ್ದೇಶ್ವರ ಶಿವಚಾರ್ಯ ಮಹಾಸ್ವಾಮಿಗಳು ಆರ್ಶೀವಚನ ನೀಡಿದರು. ಶ್ರೀ ಹನುಮಂತಭಟ ಜೋಷಿ, ನಾರಾಯಣ ಭಟ ಜೋಷಿ, ಅಶೋಕ ಕುಮಾರ ನರಹರಿರಾವ ದೇಸಾಯಿ, ದತ್ತುರಾವ ದೇಸಾಯಿ, ಜಯತಿರ್ಥ ದೇಸಾಯಿ, ನಿವೃತ್ತ ಶಿಕ್ಷಕ ಚಂದ್ರಾಮಪ್ಪ ಕಣಗಾಲ , ಮೋಹನ ಗಂಗಾಧರ ಪುರೋಹಿತ, ಕೋಟ್ರಯ್ಯ ಸ್ವಾಮಿ ಅಬ್ಬಿಗೇರಿ ಮಠ, ದೊಡ್ಡನಗೌಡ ಪೊಲೀಸಪಾಟೀಲ, ರಾಘವೇಂದ್ರ ಪಾನಘಂಟಿ, ನಾರಾಯಣ ವಿಠ್ಠಲಸಾ ಮೇಘರಾಜ, ಗ್ರಾ.ಪಂ ಅಧ್ಯಕ್ಷ ಯಲ್ಲನಗೌಡ ಮಾಲೀಪಾಟೀಲ, ಗ್ರಾ.ಪಂ ಉಪಾಧ್ಯಕ್ಷೆ ಶೋಭಾ ನಾಗನಗೌಡ್ರ, ಬೆಳೂರು ಶಿವಾನುಭವ ಸಮಿತಿ ಅಧ್ಯಕ್ಷ ಯಂಕಣ್ಣ ಚಲ್ಲಾ, ಸ.ಪ.ಪೂ.ಕಾಲೇಜ ಪ್ರಾಚಾರ್ಯ ಎ.ವಿ.ಉಪಾಧ್ಯಾಯ, ಮುಖ್ಯೋಪಾಧ್ಯ ಹೆಚ್ ಹೆಚ್ ಜಂತ್ಲಿ, ಶಿಕ್ಷಣ ಸಂಯೋಜಕ, ಬಸಪ್ಪ ದೇವರಮನಿ, ಸೋಮಪ್ಪ ಬೈರಣ್ಣವರ, ಇತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅತೀ ಹೆಚ್ಚು ಅಂಕಪಡೆದ ಶಾಲಾ ವಿದ್ಯಾರ್ಥಿಗಳಿಗೆ ಶ್ರೀ ವೇದಮೂರ್ತಿ ಶ್ರೀಪಾದಭಟ್ಟ ಜೋಷಿಯವರ ೯೬ನೇ ಹುಟ್ಟು ಹಬ್ಬದ ಪ್ರಯುಕ್ತ ಬಹುಮಾನ ವಿತರಿಸದರು.
ಅಕ್ಷತಾ ಸಾಲಿಮಠ ಸಂಗಡಿಗರು ಪ್ರಾರ್ಥಿಸಿದರೆ ವೆಂಕನಗೌಡ ಹಿರೇಗೌಡರ ಸ್ವಾಗತಿಸಿದರು.
ಸಂಗಪ್ಪ ಕಣಗಾಲ ನಿರೂಪಿಸಿ ವಂಧಿಸಿದರು.
0 comments:
Post a Comment