PLEASE LOGIN TO KANNADANET.COM FOR REGULAR NEWS-UPDATES

ಅಖಿಲ ಭಾರತ ಮಟ್ಟದಲ್ಲಿ ಐ.ಟಿ ಉತ್ಪನ್ನಗಳನ್ನು ಆನ್ಲೈನ್ ಮೂಲಕ ಮಾರಾಟವನ್ನು ನ್ಯಾಯ ಸಮ್ಮತವಲ್ಲದ ರಿಯಾತಿಯನ್ನು ವಿರೋದಿಸಿ ಇಂದು ಕೊಪ್ಪಳ ಐ.ಟಿ ಉತ್ಪನ್ನಗಳ ಮಾರಾಟಗಾರರು ವ್ಯಾಪಾರ ವಹಿವಾಟುಗಳನ್ನು ಬಂದ ಮಾಡುವಮೂಲಕ ಪ್ರತಿಭಟಿಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಮನವಿಯಲ್ಲಿ 
ಸಂಘದ ಸಲಹೆಯಂತೆ ಚಾಲ್ತಿ ದರ (ಎಮ್.ಓ.ಪಿ) ಹಾಗೂ ಬಿಡಿಭಾಗಗಳ ಮಾರಾಟ ದರವನ್ನು ನಿಗದಿಪಡಿಸಬೇಕು. ಎಲ್ಲಾ ಬ್ರ್ಯಾಂಡಗಳಿಗೆ ಹಾಗೂ ಮೂಲ ಉತ್ಪಾದನಾ ತಯಾರಕರಿಗೆ ಕಾನೂನಿನ ಅಡಿಯಲ್ಲಿ ದರಗಳನ್ನು ನಿಗದಿಪಡಿಸುವ ಹಕ್ಕು ಇದ್ದರೂ ಸಹ ಅದನ್ನು ಸರಿಯಾಗಿ ಅನುಸರಿಸುತ್ತಿಲ್ಲ. ಆದ್ದರಿಂದ ಒಂದೇ ಮಾರ್ಗಸೂಚಿ ಅನುಸರಿಸುವಂತೆ ಸಲಹೆ ನೀಡಬೇಕು. ಆನ್‌ಲೈನ್ ಅಥವಾ ಇನ್ನಾವೂದೇ ಮಾರಾಟ ಸ್ಥಳಗಳಲ್ಲಿ ಆಯುಕ್ತ ದರಗಳು ಕಂಡುಬಂದಲ್ಲಿ ಕ್ರಮ ಕೈಗೊಳ್ಳಬೇಕು ಎಂದು  ಕೊಪ್ಪಳ ಜಿಲ್ಲಾ ಐ.ಟಿ ಅಸೋಸಿಯೇಶನ್, ಕೊಪ್ಪಳವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಪ್ರತಿಭಟನೆಯಲ್ಲಿ ರಾಜೇಶ ಪಾಟೀಲ, ಅನಿಲ ಚೋಪ್ರಾ, ಪ್ರಕಾಶ ಮಂಗಳೂರ, ಕಿರಣ, ಶ್ರೀಧರ, ಬಸವರಾಜ, ಆನಂದ, ವಿಜಯ, ಸಂಜೀವ ಕರಗಲ್, ಸುಖದೇವ, ನಾಗರಾಜ ಪೂಜಾರ, ಮೋಹಿನ ಖಾದ್ರಿ, ದೀಪಕ, ಸುನಿಲ ಹಾಗೂ ಕೊಪ್ಪಳದ ಎಲ್ಲ ಐ.ಟಿ ಅಸೋಸಿಯೇಶನ್ ಪದಾಧಿಕಾರಿಗಳು ಪಾಲ್ಗೊಂಡಿದ್ದರು.  

Advertisement

0 comments:

Post a Comment

 
Top