PLEASE LOGIN TO KANNADANET.COM FOR REGULAR NEWS-UPDATES

 ನ.೨೯ ಎಲ್ಲಾ ರೋಗಗಳ ಮೂಲ ಅಸ್ವಚ್ಛತೆಯಾಗಿದ್ದು ಪ್ರತಿಯೊಬ್ಬರು ತಮ್ಮ ತಮ್ಮ ಮನೆಚಿi ಪರಿಸರವನ್ನು ಸ್ವಚ್ಛವಾಗಿ ಇಡಬೇಕು ಮತ್ತು ಪ್ರತಿಯೊಂದು ಮನೆಗೆ ಶೌಚಾಲಯ ನಿರ್ಮಿಸಲು ಕೊಳ್ಳುವಂತೆ  ಗ್ರ್ರಾಮಸ್ಥರಿಗೆ ಕವಲೂರು ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಮುಖಂಡರಾದ ಪ್ರದೀಪಗೌಡ್ರ ಮಾಲೀಪಾಟೀಲ  ಕರೆ ನೀಡಿದರು. 
ಅವರು ಶನಿವಾರ ತಾಲೂಕಿನ ಕವಲೂರು ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನ ಹಾಗೂ ಶೌಚಾಲಯ ನಿರ್ಮಾನ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲು ಗ್ರಾಮದ ಶಾಲಾ ವಿದ್ಯಾರ್ಥಿಗಳ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಮತ್ತು ಗ್ರಾ.ಪಂ ಸಿಬ್ಬಂದಿ ಮತ್ತು ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. 
ಮುಂದುವರೆದು ಮಾತನಾಡಿದ ಅವರು ಮನೆಗೊಂದು ಮರಬೆಳೆಸಿ ಗ್ರಾಮವನ್ನು ನಂದನವನವನ್ನಾಗಿ ಮಾಡಿ ಎಂದು ಅವರು ಪರಿಸರ ಸ್ವಚ್ಛವಾಗಿದ್ದರೆ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಿರುವ್ಯದರಿಂದ ಪ್ರತಿಯೊಬ್ಬರು ಪರಿಸರವನ್ನು ಸ್ವಚ್ಛವಾಗಿಡುವುದರ ಜೊತೆಗೆ ಗ್ರಾಮದ ಸ್ವಾಭಿಮಾನಕ್ಕಾಗಿ ಗ್ರಾಮಸ್ಥರೆಲ್ಲರು ಕಡ್ಡಾಯವಾಗಿ ತಮ್ಮ ತಮ್ಮ ಮನೆಗೆ ವಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳಲ್ಲು ಮುಂದಾಗಬೇಕು ಎಂದ ಅವರು ಇದರ ಬಗ್ಗೆ ಕೇಂಧ್ರ ಮತ್ತು ರಾಜ್ಯ ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ಮಾಡಿ ಅರಿವು ಮೂಡಿಸುವುದರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಸರಕಾರದ ಸೌಕರ್ಯಗಳ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಾಗೂ ಶೌಚಾಲಯ ನಿರ್ಮಾಣ ಕುರಿತಾದ ಜಾಗೃತಿ ರ‍್ಯಾಲಿ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಇದೇ ಸಂದರ್ಭದಲ್ಲಿ ಪ್ರದೀಪಗೌಡ್ರ ಮಾಲೀಪಾಟೀಲ ಅಭಿನಂಧಿಸಿದರು. 
ಈ ಸಂದರ್ಬದಲ್ಲಿ ಕವಲೂರು ಗ್ರಾಮದ ಬಾ.ಹಿ.ಪ್ರಾ.ಶಾಲೆ, ಬಾ.ಹಿ.ಪ್ರಾ.ಶಾಲೆ, ಡಿ.ಪಿ.ಇ.ಪಿ ಶಾಲೆ, ಬಾಪೂಜಿ ಹಿರಿಯ.ಪ್ರಾ,ಶಾಲೆ ಮಕ್ಕಳು ಗ್ರಾಮದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಹಿರಿಯ ನಾಗರಿಕರು, ಯುವಕರು, ಗ್ರಾ.ಪಂ ಸಿಬ್ಬಂದಿಗಳು, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ, ಸ್ಭೆರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧೂಳು ಮುಕ್ತ ಗ್ರಾಮವನ್ನಾಗಿ ಪರಿವರ್ತನೆ ಮಾಡಿ ಪಣ ತೊಡಿಕೊಂಡು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಬೃಹತ್ತ ರ‍್ಯಾಲಿಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸದರು. 

Advertisement

0 comments:

Post a Comment

 
Top