PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ : ಇತ್ತೀಚೆಗೆ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರೀ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಕ್ಕಳ ಹಬ್ಬ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು. 
ಈ ಕಾರ್ಯಕ್ರಮದಲ್ಲಿ ಶ್ರೀ ಸ.ಸ.ಗಿರಿಮಲ್ಲೇಶ್ವರ  ಮಹಾರಾಜರು ಕನ್ನೂರ ವಿಜಾಪೂರ ಶ್ರೀಗಳು ಸಾನಿಧ್ಯ ವಹಿದ್ದರು. ತಾಲೂಕ ಪಂಚಾಯತ ಸದಸ್ಯ ವಿರೇಶ ಸಜ್ಜನ, ಬೆಟಗೇರಿ ಗ್ರಾ. ಪಂ ಅಧ್ಯಕ್ಷೆ ಶ್ರೀಮತಿ ಕಾಳನ್ನ ಕಲ್ಲಳ್ಳಿ, ಸಿ.ವಿ. ಜಡಿ, ಅಶೋಕ ಕುಲಕರ್ಣಿ, ವಿರೇಶ ಕ್ಷಾಣಿ, ಗವಿಸಿದ್ದಪ್ಪ ಬೆಟಗೇರಿ, ಎಸ್.ಡಿಎಮ್.ಸಿ ಅಧ್ಯಕ್ಷರು, ಸದಸ್ಯರುಗಳು, ಶರಣಪ್ಪ ಮತ್ತೂರ, ಗವಿಸಿದ್ದಪ್ಪ ಮಾಳೇಕೊಪ್ಪ, ಬಸವರಾಜ ಯತ್ನಳ್ಳಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಸುಗಮ ಸಂಗೀತ ಕಾರ್ಯಕ್ರಮವನ್ನು ಶಿವಪ್ರಶಾಂತ ಪಾಟೀಲ ಹಾಗೂ ಸಂಗಡಿಗರು ನಡೆಸಿಕೊಟ್ಟರು, ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ತಾಟು &ಲೋಟಾಗಳನ್ನು ಊರಿನ ದಾನಿಗಳಾದ ಬಸವರಾಜ ಚಿಂಚಲಿ, ವೆಂಕಟೇಶ ತಳವಾರ, ವೀರೇಶ ಲಕ್ಷಾಣಿ, ಮಲ್ಲಪ್ಪ ಯತ್ನಳ್ಳಿ, ಭರಮಪ್ಪ ಕಂಬಳಿ, ಡಾ. ವಿದ್ಯಾ ನಾಗರಡ್ಡಿ, ಆರಣಪ್ಪ ಗುಡ್ಲಾನುರ, ಶೇಖರಪ್ಪ ಕೋಳಿ, ಕೊಟ್ರಪ್ಪ ಜಗಳೂರ, ಶಂಕರ ನಾಗರಡ್ಡಿ, ಗವಿಸಿದ್ದಪ್ಪ ಬೆಟಗೇರಿ, ಗದ್ದಿಕೇರಿ ಶೀತಾರಾಮ್ ಮೂರ್ತಿ ಹಂಚಿದರು. ೧೦ ನೇ ತರಗತಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ವಿರಣ್ಣ ಮಟ್ಟಿಯವರು ರಚಿಸಿದ ಸಮಾಜ ವಿಜ್ಞಾನ ಘಟನಾ ಕಾಲಸೂಚಿ ಎಂಬ ಪುಸ್ತಕ ಬಿಡುಗಡೆಮಾಡಿ ಮಕ್ಕಳಿಗೆ ಉಚಿತವಾಗಿ ಹಂಚಲಾಯಿತು. ೮ ನೇ ತರಗತಿ ವಿದ್ಯಾರ್ಥಿಗಳಿಗೆ ಸರಕಾರದಿಂದ ಬಂದಿರು ೨೦೧೪-೧೫ ನೇ ಸಾಲಿನ ಶೈಕ್ಷಣಿಕ ವರ್ಷದ ಸೈಕಲುಗಳನ್ನು ವಿತರಿಸಲಾಯಿತು.  
ಕಾರ್ಯಕ್ರಮ ಕುರಿತು ಮುಖ್ಯೋಪಾದ್ಯಾಯ ಜಿ. ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣಪ್ಪ ಗುಡ್ಲಾನುರ ಸ್ವಾಗತಿಸಿದರು. ವೀರಣ್ಣ ಮಟ್ಟಿ ವಂದಿಸಿದರು. 

Advertisement

0 comments:

Post a Comment

 
Top