ಕುವೆಂಪು ಅವರ ಮೂಲ ಆಶಯವೂ ಕೂಡ ಈ ಸಾಲಿನಲ್ಲಿದೆ ಎಂಬುವುದನ್ನು ಮುದ್ದುಕೃಷ್ಣ ಸಮಿತಿಯು ಮರೆತಿರುವುದು ಖೇದಕರವಾದುದು. ನಾಡಗೀತೆಯು ವಿದ್ಯಾರ್ಥಿಗಳಲ್ಲಿ ಈ ನೆಲದ ಸಾಂಸ್ಕೃತಿಕ ಹಿರಿಮೆಯನ್ನು ಹಾಗೂ ಸಾಂವಿಧಾನಿಕ ಆಶಯವಾದ ಪ್ರಜೆಗಳಲ್ಲೆರೂ ಸಮಾನರೆನ್ನುವ ತಿಳುವಳಿಕೆಯನ್ನು ಮೂಡಿಸುವಂತಿದೆ. ಈ ಸಾಲುಗಳನ್ನು ತೆಗೆದು ಹಾಕುವಂತೆ ಮಾಡಿರುವ ಶಿಫಾರಸ್ಸನ್ನು ರಾಜ್ಯ ಸರಕಾರ ಮಾನ್ಯತೆ ನೀಡದೆ ತಿರಸ್ಕರಿಸಬೇಕು. ಯಾವುದೇ ಕಾರಣಕ್ಕೂ ಈ ಶಿಫಾರಸ್ಸನ್ನು ಅಂಗೀಕಾರಕ್ಕೆ ಮುಂದಾಗಬಾರದು. ಈ ವಿಷಯಕ್ಕೆ ರಾಜ್ಯದ ಪ್ರಗತಿಪರ ಬುದ್ದೀಜೀವಿಗಳು ಧ್ವನಿ ಎತ್ತಿ ಒಕ್ಕೊರಲಿನಿಂದ ವಿರೋದಿಬೇಕಿದೆ. ಒಂದು ವೇಳೆ ಈ ಸಾಲುಗಳನ್ನು ಕಡಿತಗೊಳಿಸಲು ಮುಂದಾದರೆ ವಿದ್ಯಾರ್ಥಿಗಳು ಸಾಹಿತಿಗಳು, ಶಿಕ್ಷಕ-ಉಪನ್ಯಾಸಕರು ರಾಜ್ಯ ಸರಕಾರದ ವಿರುದ್ಧ ತೀವ್ರತೆರನಾದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆಂದು ಭಾರತ ವಿದ್ಯಾರ್ಥಿ ಫೆಡರೆಷನ್ (ಎಸ್.ಎಫ್.ಐ) ಕನಾಟಕ ಜಿಲ್ಲಾ ಸಮಿತಿಯು ಒತ್ತಾಯಿಸಿದೆ
Advertisement
Subscribe to:
Post Comments (Atom)
0 comments:
Post a Comment