PLEASE LOGIN TO KANNADANET.COM FOR REGULAR NEWS-UPDATES

  ಕೊಪ್ಪಳ :  ರಾಜ್ಯಾದಾದ್ಯಂತ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವಾ ನಿರತ ಅತಿಥಿ ಉಪನ್ಯಾಸಕರು ಅನೇಕ ಸಮಾವೇಶ, ಪ್ರತಿಭಟನೆ, ಹೋರಾಟ, ಹಕ್ಕೊತ್ತಾಯ ಮುಂತಾದವುಗಳ ಮೂಲಕ ಸರಕಾರಕ್ಕೆ ಬೇಡಿಕೆ ಈಡೇರಿಕೆಗಾಗಿ  ಈಗಾಗಲೇ ಮನವಿ ಮಾಡಿಕೊಂಡಿದ್ದರೂ  ಇದುವರೆಗೆ ಸರಕಾರದಿಂದ ಯಾವುದೇ ರೀತಿಯ ಸ್ಪಂದನೆ ಇರುವದಿಲ್ಲ.  ಕಾರಣ ಮೂಲಭೂತ ಅವಶ್ಯಕತೆಗಳಲ್ಲೊಂದಾದ, ಉನ್ನತ ಶಿಕ್ಷಣ ಎಲ್ಲರಿಗೂ ಸಿಗುವಂತಾಗಬೇಕು. ಈ ಕ್ಷೇತ್ರದಲ್ಲಿ ೧೦೦ ಕ್ಕೆ ಶೇಕಡಾ ೮೦ ಕ್ಕಿಂತಲೂ ಮಿಗಿಲಾದ ಅತಿಥಿ ಉಪನ್ಯಾಸಕರುಗಳೇ ಕಾರ್ಯನಿರ್ವಹಿಸುತ್ತಿದ್ದರೂ, ಉನ್ನತ ಶಿಕ್ಷಣ ಕಲಿಸುವ ಶಿಕ್ಷಕರಿಗೆ ಸೇವಾ ಭದ್ರತೆ ಇಲ್ಲದೇ ಸೇವೆಸಲ್ಲಿಸುತ್ತಾ ವಯೋಮಿತಿ ಮೀರಿ, ಸಂಸಾರ ಸಮೇತ ಅತಿಥಿ ಉಪನ್ಯಾಸಕರುಗಳು ಬೀದಿಗೆ ಬಂದಿರುವರು. ಸಯಮ ಪಾಲನೆ ಮಾಡಿ ಸೇವೆಸಲ್ಲಿಸಿದರೂ, ಸಮಯಕ್ಕೆ ಸರಿಯಾಗಿ ಸಂಬಳವಿಲ್ಲದೇ, ದಿನನಿತ್ಯದ ಜೀವನ ಇನ್ನೂ ಕಷ್ಟಕರವಾಗಿದೆ. 

    ಕಾರಣ ಈಗ ರಾಜ್ಯಾದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳು, ಆಯಾ ಕ್ಷೇತ್ರಗಳ ವ್ಯಾಪ್ತಿಗಳಿಗೆ ಬರುವ, ಶಾಸಕರುಗಳ ಮನೆ ಮುಂದೆ, ಪ್ರತಿಭಟಿಸುತ್ತಾ, ಅತಿಥಿ ಉಪನ್ಯಾಸಕರುಗಳ ಬೇಡಿಕೆಗಳ ಈಡೇರಿಕೆಯ, ಮನವಿ ಪತ್ರವನ್ನು ಶಾಸಕರಿಗೆ ಸಲ್ಲಿಸಿ, ಅವರುಗಳ ಮೂಲಕ ಸರಕಾರ ಸದನಗಳಲ್ಲಿ ಈ ವಿಷಯಗಳನ್ನು ಚರ್ಚಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸರಕಾರಕ್ಕೆ ಒತ್ತಾಯಿಸಲಾಗುವುದು. 
ಅತಿಥಿ ಉಪನ್ಯಾಸಕರ ಬೇಡಿಕೆಗಳು
೧) ವಯೋಮಿತಿ ಮೀರಿರುವ, ಮೀರುತ್ತಿರುವ, ಅತಿಥಿ ಉಪನ್ಯಾಸಕರುಗಳ ಸೇವಾ ಸಕ್ರಮಾತಿ.
೨) ನೆರೆರಾಜ್ಯಗಳಂತೆ, ಅತಿಥಿ ಉಪನ್ಯಾಸಕರುಗಳ ಸಂಬಳ, ಪ್ರತಿತಿಂಗಳು ರೂ.೨೫,೦೦೦ಸಾವಿರ ರೂಪಾಯಿ
೩) ಮಹಿಳಾ ಅತಿಥಿ ಉಪನ್ಯಾಸಕಿಯರಿಗೆ, ಹೆರಿಗೆ ಸಮಯದಲ್ಲಿ ವೇತನ ಸಹಿತ ಹೆರಿಗೆ ರಜೆ ನೀಡುವದು.
೪) ಪ್ರತಿ ತಿಂಗಳು ಸಂಬಳ, ತಿಂಗಳ ಮೊದಲವಾರದಲ್ಲಿ ಆಗಬೇಕು.
೫) ಸಮಾನ ಕೆಲಸಕ್ಕೆ, ಎಲ್ಲರಿಗೂ ಸಮಾನ ವೇತನ ಸಿಗುವಂತಾಗಬೇಕು.

     ಈ ಮೊದಲಾದ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ದಿನಾಂಕ : ೧೦-೧೧-೨೦೧೪ ರಂದು ಬೆಳಿಗ್ಗೆ ೧೧ ಗಂಟೆಗೆ ಶಾಸಕರುಗಳ ಮನೆಗೆ ತೆರಳಿ ಸಲ್ಲಿಸಬೇಕೆಂದು  ದಿನಾಂಕ : ೦೪-೧೧-೨೦೧೪ ರಂದು  ಜರುಗಿದ ರಾಜ್ಯ ಅತಿಥಿ ಉಪನ್ಯಾಸಕರ ಸಭೆಯಲ್ಲಿ ತಿರ್ಮಾನಿಸಲಾಗಿದೆ. ಎಂದು ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಸಂಚಾಲಕರಾದ   ವೀರಣ್ಣ ಎಸ್. ಸಜ್ಜನರ  ತಿಳಿಸಿದ್ದಾರೆ. 

    

Advertisement

0 comments:

Post a Comment

 
Top