PLEASE LOGIN TO KANNADANET.COM FOR REGULAR NEWS-UPDATES

 
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಡಿ ಆಸಕ್ತ ಪರಿಶಿಷ್ಟ ಜಾತಿ ಮತ್ತು ಪಂಗಡದ ಪದವೀಧರ ಯುವಕ-ಯುವತಿಯರಿಗೆ ಸ್ಥಿರ ಛಾಯಾಗ್ರಹಣ ಕಾರ್ಯಾಗಾರವನ್ನು  ಡಿಸೆಂಬರ್ ೨೦೧೪ ನೇ ಮಾಹೆಯಲ್ಲಿ ನಡೆಸಲು ಉದ್ದೇಶಿಸಿದೆ. ಈ ಸಂಬಂಧ ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ಪಂಗಡದ ಅರ್ಹ  ಅಭ್ಯರ್ಥಿಗಳಿಂದ  ಅರ್ಜಿ ಆಹ್ವಾನಿಸಿದೆ.
ತರಬೇತಿ ಅವಧಿ ೩ ದಿನಗಳಾಗಿದ್ದು, ಪತ್ರಿಕೋದ್ಯಮದಲ್ಲಿ ಡಿಪ್ಲೊಮೊ ಅಥವಾ ಸ್ನಾತಕೋತ್ತರ ಡಿಪ್ಲೊಮೊ ವ್ಯಾಸಂಗ ಮಾಡಿರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ,  ಅಭ್ಯರ್ಥಿಗಳ ವಯೋಮಿತಿ ೨೧ ರಿಂದ ೩೫  ವರ್ಷದೊಳಗಿರಬೇಕು. 
ತರಬೇತಿಗಾಗಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಜಿಗಳನ್ನು ಇಲಾಖೆಯು  ಪರಿಶೀಲಿಸಿ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಿದೆ.
ಅರ್ಹ ಅಭ್ಯರ್ಥಿಗಳು ಇಲಾಖೆಯ ವೆಬ್‌ಸೈಟ್  karnatakavarthe.org ನಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ಅಥವಾ ತಮ್ಮ ಹೆಸರು, ವಯಸ್ಸು, ವಿಳಾಸ,  ವಿದ್ಯಾರ್ಹತೆ, ಜಾತಿ , ಶೇಕಡವಾರು ಅಂಕ ಇತ್ಯಾದಿ ಸ್ವ-ವಿವರಗಳನ್ನು ಬಿಳಿಹಾಳೆಯ ಮೇಲೆ ಬೆರಳಚ್ಚುಗೊಳಿಸಿ ಅಥವಾ ಕೈಯಿಂದ ಬರೆದು, ಭರ್ತಿ ಮಾಡಿ, ಭರ್ತಿ ಮಾಡಿದ ಅರ್ಜಿಯನ್ನು ಸ್ವಯಂ ದೃಢೀಕೃತ ಅಗತ್ಯ ದಾಖಲೆಗಳೊಂದಿಗೆ ಡಿ. ೧೨ ರ ಸಂಜೆ ೫.೦೦ ಗಂಟೆಯೊಳಗೆ   ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,  ವಾರ್ತಾ ಸೌಧ, ನಂ. ೧೭, ಭಗವಾನ್ ಮಹಾವೀರ ರಸ್ತೆ,  ಬೆಂಗಳೂರು - ೫೬೦೦೦೧  ಇಲ್ಲಿಗೆ ಖುದ್ದಾಗಿ ಅಥವಾ ಅಂಚೆ / ಕೊರಿಯರ್ ಮೂಲಕ  ಸ್ಥಿರ ಛಾಯಾಗ್ರಹಣ ಕಾರ್ಯಾಗಾರಕ್ಕೆ ಅರ್ಜಿ  ಎಂದು ಲಕೋಟೆ ಮೇಲೆ ನಮೂದಿಸಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು ( ಚಲನಚಿತ್ರ ), ವಾರ್ತಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,  ಬೆಂಗಳೂರು ಇವರನ್ನು  ದೂರವಾಣಿ ಸಂಖ್ಯೆ ೦೮೦- ೨೨೦೨೮೦೫೨ / ೫೬ ರ ಮೂಲಕ ಸಂಪರ್ಕಿಸಬಹುದು.

Advertisement

0 comments:

Post a Comment

 
Top