PLEASE LOGIN TO KANNADANET.COM FOR REGULAR NEWS-UPDATES

 ದಿನಾಂಕ ೨೭-೧೧-೨೦೧೪ ರಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕದ ನೇತೃತ್ವದಲ್ಲಿ ಇಂದರಗಿ ಗ್ರಾಮ ಪಂಚಾಯತ್‌ಗೆ ಮುತ್ತಿಗೆ ಹಾಕಿ ನಂತರ ಬೃಹತ್ ಪ್ರತತಿಭಟನಾ ಧರಣಿ ನಡೆಸಿ ವವವಿದ್ಯುತ್ ಇಲಾಖೆಯ ೧೦ ಸಾವಿರ ರೂ. ರೈತರು ಠೇವಣಿ ಇಡಬೇಕೆನ್ನುವ ಸರ್ಕಾರದ ಸುತ್ತೋಲೆಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು. ಜ್ವಲಂತ ಸಮಸ್ಯೆಗಳಾದ ಜೆಸ್ಕಾಂ ನಿಂದ ಟಿಸಿ ಪುನರ್ ಅಳವಡಿಕೆ, ಮೀಟರ್ ಅಳವಡಿಕೆ ಹೆಸರಿನಲ್ಲಿ ಸುಮಾರು ೧೫೦ ಜನರಿಂದ ೩೫೦೦ ರಿಂದ ೧೦,೦೦೦ ರೂಪಾಯಿವರೆಗೆ ಅಕ್ರಮವಾಗಿ ಜೆಇ, ಲೈನ್‌ಮನ್ ಮತ್ತು ಎಇಇ ಸೇರಿ ರಾಜಕೀಯ ಪಕ್ಷಗಳ ಏಜೆಂಟರನ್ನು ನೇಮಿಸಿಕೊಂಡು ಅಕ್ರಮ ವಸೂಲಾತಿ ಮಾಡಿದ್ದ ಹಣವನ್ನು ವಾಪಸ್ ಕೊಡಿಸಬೇಕೆಂದು, ಈ ಮಾಫಿಯಾದ ಮೇಲೆ ತನಿಖೆ ನಡೆಸಬೇಕೆಂದು, ಗ್ರಾಮ ಪಂಚಾಯತ್‌ನ ಉದ್ಯೋಗ ಖಾತ್ರಿ, ಆಶ್ರಯ ವಸತಿ, ನೈರ್ಮಲ್ಯ, ಕುಡಿಯುವ ನೀರು, ವೈಯಕ್ತಿಕ ಶೌಚಾಲಯ, ಸಿಸಿ ರಸ್ತೆ ಮುಂತಾದ ಲೆಕ್ಕ ಶಿರ್ಷಿಕೆಗಳ ಭಾರೀ ಭ್ರಷ್ಟಾಚಾರದ ಮೇಲೆ ತನಿಖೆ ನಡೆಸಿ ಪಿಡಿಓ, ಸಕ್ರೆಟರಿ, ತಾ.ಪಂ ಇಓ, ಸಿಇಓ ಮುಂತಾದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು, ಮೂಲ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್ ದೀಪ ಮತ್ತು ಸಂಪರ್ಕ, ಸ್ವಚ್ಛತೆ ಮತ್ತು ಸರಕಾರಿ ಆಸ್ಪತ್ರೆ ಸೇವೆ ಸುಸಜ್ಜಿತಗೊಳಿಸಿ ಮೇಲ್ದರ್ಜೆಗೇರಿಸಿ ಎಂಬಿಬಿಎಸ್ ಮತ್ತು ಮಹಿಳಾ ವೈದ್ಯರನ್ನು ನೇಮಿಸಬೇಕೆಂದು, ಕೋಳಿ ಫಾರಂ ಗಳ ಪರವಾನಗೆ ರದ್ದುಪಡಿಸಬೇಕೆಂದು ಗ್ರಾಮ ಪಂಚಾಯತಿ ಮುಂದೆ ಬೃಹತ್ ಪ್ರತಿಭಟನಾ ಧರಣಿ ನಡೆಸಲಾಗುವುದು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ದಿ:೧೮ ಮತ್ತು ೧೯ ನವೆಂಬರ್ ೨೦೧೪ ರಂದು ೨ ಸುತ್ತಿನ ೧೯ ಬೇಡಿಕೆಗಳ ಹಕ್ಕೊತ್ತಾಯ ಪತ್ರವನ್ನು ತಹಶೀಲ್ದಾರ್ ಪುಟ್ಟರಾಮಯ್ಯ, ಜೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ್ ಪತ್ತಾರ್, ತಾಲೂಕ ವೈದ್ಯಾಧಿಕಾರಿ, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಕೃಷ್ಣಮೂರ್ತಿ, ಶಿಕ್ಷಣಾಧಿಕಾರಿ ಇವರು ಜಂಟಿಯಾಗಿ ಸ್ವೀಕರಿಸಿದರು.
           ಈ ಸಂದರ್ಭದಲ್ಲಿ ರೈತರು ಜೆಸ್ಕಾಂ ಮತ್ತು ತಾಲೂಕ ಪಂ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಒಬ್ಬೊಬ್ಬರಾಗಿ ತಮ್ಮ ಇಲಖಾಅ ಸಮಸ್ಯೆಗಳಿಗೆ ಸಂಬಂಧಿಸಿ ಜವಾಬು ನೀಡಲು ತಡವಡಿಸಿದರು. ರೈತರ ಕಟುಚರ್ಚೆ ಮತ್ತು ಅಧಿಕಾರಿಗಳ ತಪ್ಪಿನ ಅರಿವಿನಿಂದಾಗಿ ರೈತರನ್ನು ಮುಖಾಮುಖಿ ಚರ್ಚಿಸಿ ಇನ್ನೊಂದು ವಾರದೊಳಗೆ ತುರ್ತು ಸಮಸ್ಯೆಗಳಿಗೆ ಪರಿಹಾರ ನೀಡುತ್ತೇವೆ ಎನ್ನುವ ಭರವಸೆಯನ್ನು ಕೊಟ್ಟಾಗ ತಹಶೀಲ್ದಾರರು ಇದೆಲ್ಲದರ ಜವಬ್ದಾರಿಯನ್ನು ನಾನು ಹೊತ್ತುಕೊಳ್ಳುತ್ತೇನೆ ಎಂದು ಭರವಸೆ ಕೊಟ್ಟಾದದದ ಮೇಲೆ ಧರಣಿಯನ್ನು ಮುಕ್ತಾಯಗೊಳಿಸಲಾಯಿತು. 
                  ಈ ಪ್ರತಿಭಟನಾ ಹೋರಾಟದಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಹೊಳೆಯಾಚೆ, ತಾಲೂಕಾದ್ಯಕ್ಷರಾದ ಶಿವಣ್ಣ ಬಿ ಇಂದರಿಗಿ, ಸಿಪಿಐ(ಎಂಎಲ್) ಜಿಲ್ಲಾ ಕಾರ್ಯದರ್ಶಿಯಾದ ಕೆ.ಬಿ.ಗೋನಾಳ, ರೈತ ಮುಖಂಡರಾದ ಕೆಂಚನಗೌಡ, ವಿದ್ಯಾರ್ಥಿ ಸಂಘದ ಮುಖಂಡರಾದ ಹನುಮೇಶ ಕವಿತಾಳ ಮಾತನಾಡಿದರು. ಜಿಲ್ಲಾ ಮತ್ತು ತಾಲೂಕ ಮಟ್ಟದ ಪದಾಧಿಕಾರಿಗಲಾದ ಪರಶುರಾಮ್ ವಣಿಗೇರಿ, ಪಕಿರಗೌಡ ಗೊಂದಿಹೊಸಳ್ಳಿ, ಗವಿಸಿದ್ದಪ್ಪ ಕೆರೆಹಳ್ಳಿ, ನಿಂಗನಗೌಡ ಗ್ಯಾರಂಟಿ, ಇಂದ್ರೇಶ ಕನಕಗಿರಿ, ದುರುಗಪ್ಪ ಬಡಗಿ ನೇತೃತ್ವವಹಿಸಿದ್ದರು

Advertisement

0 comments:

Post a Comment

 
Top