PLEASE LOGIN TO KANNADANET.COM FOR REGULAR NEWS-UPDATES

  ತೋಟಗಾರಿಕೆ ಇಲಾಖೆ ವತಿಯಿಂದ ಔಷಧಿ ಬೆಳೆಗಳನ್ನು ಬೆಳೆಯುವ ರೈತರಿಗೆ ಸಿಗುವ ಸೌಲಭ್ಯಗಳ ಕುರಿತಂತೆ ಪ್ರತಿದಿನ ಬೆಳಿಗ್ಗೆ ೭.೧೫ ರಿಂದ ೭.೩೦ ರವರೆಗೆ ವಿವಿಧ ಭಾರತಿ ಆಕಾಶವಾಣಿ ಭದ್ರಾವತಿ ಕೇಂದ್ರದ ಮೂಲಕ ಪ್ರಸಾರ ಮಾಡಲಾಗುತ್ತಿದ್ದು, ಜಿಲ್ಲೆಯ ರೈತರು ಹಾಗೂ ಸಂಘ ಸಂಸ್ಥೆಗಳು ಕಾರ್ಯಕ್ರಮವನ್ನು ತಪ್ಪದೇ ಆಲಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ರಾಷ್ಟ್ರೀಯ ಔಷಧಿ ಬೆಳೆಗಳ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಅಶ್ವಗಂಧ ಕೋಲಿಯಸ್ (ಬಜೆ) ತುಳಸಿ, ಶ್ರೀಗಂಧ, ಕಾಶಿ ಕಣಗಲೆ ಹಾಗೂ ಇತರೆ ಔಷಧಿ ಬೆಳೆಗಳ ಪ್ರದೇಶ ವಿಸ್ತರಣೆ ಹೊಸ ತೋಟಗಳಿಗೆ ಸಹಾಯಧನ ನೀಡಲಾಗುವುದು. ಜೊತೆಗೆ ಪ್ರಸ್ತಾವನೆ ಆಧಾರಿತ ಕಾರ್ಯಕ್ರಮಗಳಾದ ಸಸ್ಯತ್ಪೋಧನೆ ಹಾಗೂ ಸಂಸ್ಕರಣ ಘಟಕಗಳಿಗೆ ಸಹಾಯಧನ ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ಕಾರ್ಯಕ್ರಮಗಳನ್ನು ರೈತರ ಬೇಡಿಕೆ ಹಾಗೂ ನಿಗಧಿಪಡಿಸಿರುವ ಅನುದಾನ ಆಧರಿಸಿ ಅನುಷ್ಠಾನಗೊಳಿಸಲಾಗುವುದು.
ಔಷಧಿ ಬೆಳೆಗಳ ಉಪಯೋಗ, ಮಹತ್ವ ಉಪಯೋಗ, ಮಹತ್ವ ಉತ್ವಾಧನೆ ಹಾಗೂ ಇತರೆ ಕೃಷಿ  ಚಟುವಟಿಕೆಗಳಿಗೆ ಸಂಬಂಧಿಸಿದಂತೆ ತಾಂತ್ರಿಕ ವಿಷಯಗಳ ಬಗ್ಗೆ ಮಾಹಿತಿಯನ್ನು ವಿವಿಧ ಭಾರತಿ ಆಕಾಶವಾಣಿ ಭದ್ರಾವತಿ ಕೇಂದ್ರದ ಮೂಲಕ ಪ್ರತಿ ನಿತ್ಯ ಪ್ರಸಾರ ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಜಿ.ಕೆ.ರನವಿಂದ್ರ ಕುಮಾರ, ಭದ್ರಾವತಿ ಆಕಾಶವಾಣಿ ಕೇಂದ್ರ: ೦೮೨೮೨-೭೫೦೫೦೫ ಇ-ಮೇಲ್ ವಿಳಾಸ  ಚಿiಡಿbಜvಣ@gmಚಿiಟ.ಛಿom, ಶೈಲೇಂದ್ರ ಕೊಪ್ಪಳ: ೦೮೫೩೯-೨೩೧೩೦೪, ಹೆ.ಬಿ.ವಸಂತಪ್ಪ ಗಂಗಾವತಿ: ೦೮೫೩೩-೨೩೦೩೫೮, ಲಿಂಗನಗೌಡ ಕುಷ್ಟಗಿ: ೦೮೫೩೬-೨೬೭೪೯೮ ಹಾಗೂ ನಜೀರ ಅಹ್ಮದ ಯಲಬುರ್ಗಾ: ೦೮೫೩೪-೨೨೦೪೨೯ ಜಿಲ್ಲಾ ಕೇಂದ್ರ ಕಛೇರಿ ಶಿವಯೋಗಪ್ಪ: ೦೮೫೩೯-೨೩೧೫೩೦ ಈ ದೂರವಾಣಿಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

0 comments:

Post a Comment

 
Top